
ಮಧುಗಿರಿ: ಮಕ್ಕಳನ್ನು ವಿದ್ಯಾಭ್ಯಾಸದಿಂದ ವಂಚಿತರನ್ನಾಗಿಸದೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದಾಗ ಮಾತ್ರ ಮಕ್ಕಳು ತಮ್ಮ ಸ್ವಾಭಿಮಾನಿ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ ಎಂದು ಮಾಜಿ ಸಚಿವರು ಹಾಗೂ ಹಾಲಿ ಶಾಸಕ ಕೆ.ಎನ್ ರಾಜಣ್ಣ ತಿಳಿಸಿದರು.
ತಾಲೂಕಿನ ಚಿಕ್ಕಮಾಲೂರು ಗ್ರಾ.ಪಂ ವ್ಯಾಪ್ತಿಯಲ್ಲಿ -ಅಂಗನಾಡಿ ಕಟ್ಟಡ, ಶುದ್ದಕುಡಿಯುವ ನೀರಿನ ಘಟಕ ಉದ್ಘಾಟನೆ ಮತ್ತು ಸರ್ಕಾರಿ ಹಿರಿಯ ಪ್ರಾ ಅಥಮಿಕ ಪಾಠಶಾಲೆಯ 5 ನೂತನ ಕೊಟ್ಟಡಿಗಳ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾ ತನಾಡಿದ ಅವರು ಮಕ್ಕಳು ಶಿಕ್ಷಣದಿಂದ ವಂಚಿತ ಜರಾಗಬಾರದು ಸರ್ಕಾರ ವಿದ್ಯಾಭ್ಯಾಸಕ್ಕೆ ಹೆಚ್ಚು ಸೌಲಭ್ಯಗಳನ್ನು ಕಲ್ಪಿಸುತ್ತಿದೆ ಪೋಷಕರು ಮಕ್ಕಳನ್ನು ವಿಧ್ಯಾವಂತರನ್ನಾಗಿಸಿ ಎಂದು ಸೂಚಿಸಿದರು.
ಅಆಧಿಕಾರ ಇಂದು ಬರಬಹುದು ಹೋಗಬಹುದು ಆದರೆ ಅಧಿಕಾರದಲ್ಲಿ ಇದ್ದಾಗ ನಾವು ಮತದಾರ ಸೇವೆಗೆ ಮುಡಿಪಾಗಿರಬೇಕು ಈ ಭಾಗಕ್ಕೆ ಆದಿನಾ “ರಾಯಣರೆಡ್ಡಿ ನಮ್ಮ ಕೊಡಿಗೇನಹಳ್ಳಿ ಹೋಬಳಿ -ಪ್ರತಿ ಚುನಾವಣಿಯಲ್ಲಿ ಹೆಚ್ಚು ಮತಗಳನ್ನು ನೀ -ಡಿದ್ದು ಈ ಭಾಗದ ಅಭಿವೃದ್ಧಿಗೆ ಹೆಚ್ಚು ಅನುದಾನ ನೀಡಬೇಕು ಕೆಳಿರುತ್ತಾರೆ. ಮಧುಗಿರಿ ಕ್ಷೇತ್ರದ
ಅಭಿವೃದ್ಧಿ ನೋಡಿ ಪುರವರ ಹೋಬಳಿಯವರು ನಮ್ಮನ್ನು ಮಧುಗಿರಿ ಕ್ಷೇತ್ರಕ್ಕೆ ಸೇರಿಸಿಕೊಳ್ಳಿ ಸ್ವಾಮಿ ಎನ್ನುತ್ತಾರೆ. ನಾನು ಅಭಿವೃದ್ಧಿ ವಿಚಾರದಲ್ಲಿ ರಾಜೀ ಇಲ್ಲ ಪಕ್ಕದ ಕ್ಷೇತ್ರಗಳನ್ನು ನೀವು ಕೂಡ ಒಮ್ಮೆ ನೋಡಿ. ನಾನು ಗ್ರಾಪಂ ಸದಸ್ಯನಾಗಿ, ಎಲ್.ಎ.ಸಿ ಸಂಘಗಳಿಂದ ಬೆಳದು ಬಂದಿದ್ದು ನಾನು ಬಡವರ ನೋವು ಕಂಡವನಾಗಿದ್ದು ವಿಎಸ್ಎಸ್ಎನ್ ಗಳಿಂದ ರೈತರು ತಮ್ಮ ಜೀವನ ರೂಪಿಸಿಕೊಳ್ಳಲು ಮತ್ತು ಡಿಸಿಸಿ ಬ್ಯಾಂಕ್ ನಿಂದ ಹಸು, ಕುರಿ ಮೇಕೆ ಸಾಕಾಣಿಕೆಯಿಂದ ಆರ್ಥಿಕವಾಗಿ ಸದೃಢರಾಗಲು ಸಾಲಸೌಲಭ್ಯ ನೀಡಲಾಗುವುದು. ಈ ಭಾಗದಲ್ಲಿ ಹೆಚ್ಚಿನದಾಗಿ ಹಿಂದುಳಿದ ವರ್ಗ, ಪರಿಶಿಷ್ಟಜಾತಿ ಮತ್ತು ಪರಿಶಿಷ್ಠಪಂಗಡ ಮತ್ತು ಹೆಚ್ಚಿನದಾಗಿ ವ್ಯವ
ಸಾಯ ಮಾಡುವ ಬಡ ಕುಟುಂಬಗಳು ಮಧುಗಿರಿ ಕ್ಷೇತ್ರದಲ್ಲಿ ಇರುವುದರಿಂದ ಡಿಸಿಸಿಬ್ಯಾಂಕ್ ನಿಂದ ಇನ್ನೂ ಹೆಚ್ಚಿನ ಸಾಲ ನೀಡಿರುತ್ತೇನೆ. ವಿಧಾನ ಸಭೆಯಲ್ಲಿ ಚರ್ಚೆಯೋ ಆಗಿದ್ದು ಇನ್ನೂ ಹೆಚ್ಚಿನ ಸಾಲ ನೀಡುತ್ತೆನೆ ಎಂದು ಹೇಳಿದ್ದೇನೆ. ರಾಜ್ಯದಲ್ಲಿ ಅನ್ನಭಾಗ್ಯ ಹಸಿವನ್ನು ನೀಗಿಸಿದೆ. ಅನ್ನ ಭಾಗ್ಯ ಕೇವಲ ಒಂದು ಜನಾಂಗಕ್ಕೆ ಸೀಮಿತವಾಗಿಲ್ಲ ಇದು ಎಲ್ಲ ಸಮುದಾಯದ ಬಡವರಿಗೆ ಸಲ್ಲುವಂ ತಹ ಯೋಜನೆಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಗೋ ಟುರು ಶಿವಪ್ಪ, ಡಿಡಿಸಿ ಬ್ಯಾಂಕ್ ನಿರ್ದೇಶಕ ಜಿ.ಜೆ. ರಾಜಣ್ಣ, ಸಂಜೀವಗೌಡ, ಚಿಕ್ಕಮಾಲೂರು ಗ್ರಾಪಂ ಕೆ.ಎಲ್ ಅಶ್ವತ್ಥಪ್ಪ ಮಾತನಾಡಿದರು.ತಹಶೀಲ್ದಾರ್
ಅಂಗನವಾಡಿ ಮಕ್ಕಳಿಗೂ ಯೂನಿಫಾರಂ
ನೀಡುವ ಯೋಜನೆ ಬಗ್ಗೆ ವಿಧಾನಸಭೆಯಲ್ಲಿ ಧ್ವನಿ ಎತ್ತಲಾಗುವುದು. ಮಧುಗಿರಿ ಕ್ಷೇತ್ರದಲ್ಲಿ ಅಂಗನವಾಡಿ ಮಕ್ಕಳಿಗೆ ಯೂನಿಫಾರಂ ಮತ್ತು ಶೂಗಳನ್ನು ನೀಡುವ ಕಾರ್ಯ ಮುಂದಿನ ದಿನಗಳಲ್ಲಿ ಜಾರಿ
-ಶಾಸಕ ಕೆ.ಎನ್.ರಾಜಣ್ಣ
ಶ್ರೀನಿವಾಸ್, ಡಿಡಿಪಿಐ ಮಾಧವರೆಡ್ಡಿ, ಬಿಇಓ ಹನುಮಂತರಾಯಪ್ಪ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಆದಿನಾರಾಯಣರೆಡ್ಡಿ, ಪುರಸಭಾ ಮಾಜಿ ಅಧ್ಯಕ್ಷ ರುಗಳಾದ ಲಾಲಪೇಟೆ ಮಂಜುನಾಥ್, ಗಂಗಣ್ಣ, ನಂಜುಂಡರಾಜು, ಧಾರ್ಮಿಕ ಮುಖಂಡ ಎಂ.ಜಿ ಶ್ರೀನಿವಾಸಮೂರ್ತಿ, ಧರ್ಮಸ್ಥಳ ತಾಲೂಕು ಯೋಜನಾಧಿಕಾರಿ ದಿನೇಶ್ ಕುಮಾರ್, ಮಧುಗಿರಿ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕ ಅಧ್ಯಕ್ಷೆ ಸುವರ್ಣಮ್ಮ, ತಾ.ಪಂ ಮಾಜಿ ಅಧ್ಯಕ್ಷೆ ಇಂದಿರಾದೇನಾನಾಯಕ್ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಚಿಕ್ಕಮಾಲೂರು ಗ್ರಾಮದ ಮುಖಂಡರಾದ ಜಗದೀಶ್, ಭಾಸ್ಕರ್, ಪಿಡಿಓ ಮುತ್ತುರಾಜ್ ಮತ್ತು ಗ್ರಾಪಂ ಸದಸ್ಯರುಗಳು ಮತ್ತಿ ತರರಿದ್ದರು.
