ಹೆಂಡತಿ ಕಾಪಾಡಲು ಹೋಗಿ ಗಂಡನೂ ನೀರು ಪಾಲು: ಮುಗಿಲು ಮುಟ್ಟಿದ ಆಕ್ರಂದನ

ಮಧುಗಿರಿ:ತಾಲೂಕು ಕೊಡಿಗೇನಾಹಳ್ಳಿ ಹೋಬಳಿ ಶ್ರಾವಡoನಹಳ್ಳಿ ಗ್ರಾಮದಲ್ಲಿ ಗ್ರಾಮದ ಲಕ್ಷ್ಮಣ ಎಂಬ ರೈತ ತಮ್ಮ ಹೊಲದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ತನ್ನ ಪತ್ನಿ ನಾಗಮ್ಮ ಎಂಬುವವರು ತಮ್ಮ ಹೊಲದಲ್ಲಿ ಇದ್ದ ಕೃಷಿ ಹೊಂಡದಂತೆ ಕುಂಟೆಯಲ್ಲಿ ನೀರು ತರಲು ಹೋಗಿ ಕಾಲು ಜಾರಿ ನೀರಿನಲ್ಲಿ ಬಿದ್ದು ಎಷ್ಟೋ ಸಮಯ ಕಳೆದರು ಹೆಂಡತಿ ಬಾರದಿದ್ದಾಗ ಗಂಡನಾದ ಲಕ್ಷ್ಮಣ ಹೋಗಿ ನೋಡಿದಾಗ ನೀರಿನಲ್ಲಿ ಮುಳುಗಿರುವ ಹೆಂಡತಿ ಯನ್ನು ರಕ್ಷಿಸಲು ಹೋದ ಗಂಡನು ಹೋಂಡದಲ್ಲಿ ಬಿದ್ದು ನೀರು ಪಾಲದ ಘಟನೆ ನಡೆದಿದೆ.

ನಾಗಮ್ಮ ಎಂಬ ದುರ್ದೈವಿ ಯನ್ನು ರಕ್ಷಿಸಲು ಹೋದ ಗಂಡನನ್ನು ತಬ್ಬಿಕೊಂಡ ಪರಿಣಾಮ ಗಂಡ ಹೆಂಡತಿ ಇಬ್ಬರೂ ಸಾವಿಗೀಡಾದ ಘಟನೆ ಶ್ರಾವಂದನಹಳ್ಳಿಯಲ್ಲಿ ಇಂದು ಮಧ್ಯಾನ್ಹದ 12 ಗಂಟೆ ಸಮಯದಲ್ಲಿ ನಡೆದಿದೆ ಇವರಿಗೆ ಅಖಿಲ ಎಂಬ19 ವರ್ಷದ ಮಗನಿದ್ದಾನೆ ಘಟನೆ ತಿಳಿದ ಗ್ರಾಮಸ್ಥರು ಸ್ಥ ಳಕ್ಕೆ ದಾವಿಸಿ ರೋದಿಸುವ ದೃಶ್ಯ ಕರಳು ಹಿಂಡುವಂತಿತ್ತು.
