*ಬಲಿಪಶು ಕುಟುಂಬಕ್ಕೆ ಧೈರ್ಯ ತುಂಬಲು ಸ್ವಾವಲಂಬಿ ನೆರವು:*
*ಕೊರಟಗೆರೆಯಲ್ಲಿ ಮಾದಿಗ ಮುಖಂಡರ ಗೇರವ್

ಕೊರಟಗೆರೆ: ಇತ್ತೀಚೆಗೆ ಕೊಲೆಯಾದ ಸಿಂಹಾದ್ರಿ ಅವರ
ಸಮುದಾಯದ ಸಂಕಷ್ಟಗಳಿಗೆ ಸ್ಪಂದಿಸಲು ಯಾವುದೇ ರಾಜಕೀಯ ಮುಖಂಡರು, ಅಧಿಕಾರಿಗಳು ಅಥವಾ ಇತರರ ಮುಂದೆ ಕೈಚಾಚದೆ, ನಾವೇ ಸ್ವಾವಲಂಬಿಯಾಗಿ ಒಗ್ಗೂಡಿ ನೆರವಾಗಬೇಕಿದೆ, ಆನೆ ತುಳಿತಕ್ಕೊಳಗಾಗಿ ಮೃತಪಟ್ಟ ಸವರ್ಣೀಯರ ಕುಟುಂಬಕ್ಕೆ ತಕ್ಷಣವೇ 20 ಲಕ್ಷ ರೂಪಾಯಿ ಪರಿಹಾರ ನೀಡುವ ಸರ್ಕಾರ, ದಲಿತ ಸಮುದಾಯದ ವ್ಯಕ್ತಿಯ ಅನ್ಯಾಯದ ಕೊಲೆಯಾದಾಗ ಮೌನ ವಹಿಸುತ್ತದೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ದಲಿತ ಮುಖಂಡ ಜಗನ್ನಾಥ್ ಆಕ್ರೋಶ ವ್ಯಕ್ತಪಡಿಸಿದ್ದರು.

ಮದುಗಿರಿ ಕಾಸಪುರ ಸಿಂಹಾದ್ರಿ ಕುಟುಂಬಕ್ಕೆ ಸಾoತ್ವನ ಹೇಳಲು ತೆರಳುವ ವೇಳೆ ಕೊರಟಗೆರೆ ಪಟ್ಟಣದ ಎಸ್ ಎಸ್ ಸರ್ಕಲ್ ನಲ್ಲಿ ತಾಲ್ಲೂಕಿನ ದಲಿತ ಮುಖoಡರೊಡನೆ ಗೇರವ್ ಕೊಗಿ
ಮಾತನಾಡಿದ ಜಗನಾಥ್
ಪ್ರೊ. ಬಿ. ಕೃಷ್ಣಪ್ಪನವರ ಕಾಲದ ಡಿಎಸ್‌ಎಸ್ ಹೋರಾಟದ ವೈಭವವನ್ನು ಸ್ಮರಿಸಿದ ಅವರು, “ಪ್ರಸ್ತುತ ವಿಭಜನೆಗೊಂಡಿರುವ ಸಂಘಟನೆಯ ವಿವಿಧ ಬಣಗಳು ಒಂದಾಗಿ, ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಿದ್ಧಾಂತದ ರಥವನ್ನು ಮುನ್ನಡೆಸಬೇಕಿದೆ,” ಎಂದು ಸಮುದಾಯದ ಕಾರ್ಯಕರ್ತರಿಗೆ ಕರೆ ನೀಡಿದರು.

ಕೊರಟಗೆರೆ ತಾಲೂಕು ದಲಿತ ಮುಖಂಡ ದಾಡಿ ವೆಂಕಟೇಶ್ ಅವರು ಮಾತನಾಡಿ ಸಿಂಹಾದ್ರಿ ಅವರ ಕೊಲೆಯನ್ನು ಖಂಡಿಸಿ, ಅವರ ಕುಟುಂಬಕ್ಕೆ ನ್ಯಾಯ ಸಿಗಬೇಕು ಹಾಗೂ ಅವರಿಗೆ ಧೈರ್ಯ ತುಂಬಬೇಕು ಎನ್ನುವ ಕಾರಣಕ್ಕೆ ಕೊರಟಗೆರೆ ಹಾಗೂ ಮಧುಗಿರಿ ತಾಲೂಕು ಸೇರಿದಂತೆ ವಿವಿಧ ಭಾಗಗಳ ದಲಿತ ಮುಖಂಡರು ಮತ್ತು ಸಂಘಟನೆಗಳು ಒಗ್ಗೂಡಿ ಈ ಸಾಂಕೇತಿಕ ಎಚ್ಚರಿಕೆಯ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದಾರೆ.
ಸಂವಿಧಾನ ಹಾಗೂ ಕಾನೂನುಗಳಿದ್ದರೂ, ಪ್ರಭಾವಿಗಳ ಮತ್ತು ರಾಜಕಾರಣಿಗಳ ಒತ್ತಡಕ್ಕೆ ಮಣಿದು ಕಾರ್ಯನಿರ್ವಹಿಸುವ ವ್ಯವಸ್ಥೆಯಿಂದಾಗಿ ದಲಿತರಿಗೆ ಸೂಕ್ತ ನ್ಯಾಯ ಸಿಗುತ್ತಿಲ್ಲ. ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು (SP) ಇಂತಹ ಅನ್ಯಾಯಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಮಧುಗಿರಿ ಭಾಗದಲ್ಲಿ ಕಳೆದ ಮೂರು ವರ್ಷಗಳಿಂದ ಪ್ರತಿ ವರ್ಷವೂ ಒಂದಲ್ಲ ಒಂದು ಮಾದಿಗ ಯುವಕನ ಕೊಲೆಯಾಗುತ್ತಿದ್ದರೂ, ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ನಾವೆಲ್ಲರೂ ಒಗ್ಗೂಡಿ ಹೋರಾಟ ಮಾಡದಿದ್ದರೆ, ಮುಂದೆ ಜಿಲ್ಲೆಯ ಪ್ರತಿಯೊಂದು ತಾಲೂಕಿನಲ್ಲೂ ಶೋಷಿತರು ಹಾಗೂ ದಲಿತರು ಇಂತಹ ಅನ್ಯಾಯ ಮತ್ತು ಕೊಲೆಗಳಿಗೆ ಬಲಿಯಾಗಬೇಕಾಗುತ್ತದೆ, ಆದ್ದರಿಂದ ಪ್ರತಿಯೊಬ್ಬರೂ ಜಾಗೃತರಾಗಿ, ಸಂಘಟಿತರಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಡಬೇಕು ಎಂದು ಕರೆ ನೀಡಿದರು.
ಗುಬ್ಬಿ ತಾಲೂಕಿನ ದಲಿತ ಮುಖಂಡರಾದ ಬಸವರಾಜು ಮಾರ್ ಶೆಟ್ಟಿಹಳ್ಳಿ, ಪನಿಯಪ್ಪ ಬಿದ್ರೆಹಳ್ಳಿ ಕಾವಲ್ ಹಾಗಲವಾಡಿ, ನಟರಾಜು ಕುಂದರನಹಳ್ಳಿ, ನರೇಂದ್ರ ಕುಮಾರ್ ಕಪಾಲಿ ಗುಬ್ಬಿ, ತುಮಕೂರು ಜಿಲ್ಲಾ ಮಾದರ ಮಹಾಸಭಾದ ಕಾರ್ಯಕಾರಿಣಿ ಸದಸ್ಯರಾದ ರಘು ಬಿಎಸ್, ಕೊರಟಗೆರೆ ತಾಲೂಕು ದಲಿತ ಮುಖಂಡರಾದ ದಾಸರಹಳ್ಳಿ ಶಿವರಾಮಯ್ಯ, ನಿವೃತ್ತ ಬ್ಯಾಂಕ್ ಅಧಿಕಾರಿ ಸಿದ್ದಗಂಗಯ್ಯ, ಮಂಜುನಾಥ್, ಆನಂದ್, ದೊಡ್ಡಯ್ಯ, ಗಂಗಣ್ಣ, ಬಿದ್ಲೋಟ್ಟಿ ನಾಗರಾಜು, ದೊಡ್ಡಣ್ಣ, ಸೇರಿದಂತೆ ಇತರರು ಉಪಸ್ಥಿತರಿದ್ದರು.

