ಇವತ್ತು ಇಂಟರ್ನೆಟ್ ಸಂಪರ್ಕ ಇರುವ ಮನುಷ್ಯನೆ ಶಕ್ತಿಶಾಲಿ.

ನಮ್ಮ ನೆರೆಹೊರೆಯ ಬೆಳೆಯಲು ಬಯಸಿ, ಬೆಳೆಯುತ್ತಾ ಇದ್ದ ನಮಗಿಂತ ಹಿಂದೆ ಇದ್ದ ದೇಶಗಳು ಎಲ್ಲವೂ ಬಿದ್ದವು.
ಇತರೆ ನಮ್ಮ ತರದ ಬೆಳೆಯುವ ಹಾದಿಯಲ್ಲಿದ್ದ ದೇಶಗಳು ಇತರೆ ಬಡ ದೇಶಗಳ ಜನರು ಕಡಿಮೆ ಬೆಲೆಗೆ ಕೆಲಸ ಮಾಡುವ ಕಾರಣ ಒಳಗೆ ಕೂಡ ಬೆಳೆಯುವ ಆಸಕ್ತಿ ಇಲ್ಲದ ಜನರ ಕಾರಣ ಬೆಳೆಯುತ್ತಿಲ್ಲ.
ಕಡೆಗೆ ಎಲ್ಲ ದೊಡ್ಡ ದೇಶಗಳು ಬಿದ್ದವು. ದೊಡ್ಡ ಆರ್ಥಿಕತೆ ಇದ್ದ ದೇಶಗಳಲ್ಲಿ ಸುಳ್ಳು ಹೇಳಲು ಫೇಕ್ ಅಕೌಂಟ್ ಗಳನ್ನು ಅವರ ಶತ್ರು ದೇಶಗಳ ಗುಪ್ತಚರ ಇಲಾಖೆಗಳು ತಯಾರು ಮಾಡಿ ಕೆಲಸ ಮಾಡಿದರು.
ಆದರೆ ನಿಜವಾಗಿ ಎಲ್ಲ ಕಡೆ ಆಯಾಯ ದೇಶಗಳ ಬೀಳಿಸುವ ಮಟ್ಟಕ್ಕೆ ಕೇಡು ಬಗೆದದ್ದು ಆಯಾಯ ದೇಶಗಳ ಒಳಗೆ ಇದ್ದುಕೊಂಡು ದ್ರೋಹ ಮಾಡಿದ ವಿಕೃತ ಶಕ್ತಿಗಳು.
ಇವತ್ತು ಯಾವುದೇ ದೇಶಗಳಲ್ಲಿ, ಧರ್ಮ, ಸಿದ್ಧಾಂತ, ಸಮುದಾಯಗಳ ನಡುವೆ ಜನ ಹೊಡೆದಾಡಿಕೊಂಡರೆ ಅಲ್ಲಿ ಮೊದಲು ಆ ಮಟ್ಟಕ್ಕೆ ತರಲು ಫೇಕ್ ಅಕೌಂಟ್ ಪ್ರಚೋದಕ ಶಕ್ತಿಗಳು ಕೆಲಸ ಮಾಡುತ್ತವೆ.
ಒಂದಿಷ್ಟು ನಿಜವಾದ ಆಯಾಯ ಧರ್ಮ ಸಿದ್ಧಾಂತ ಸಮುದಾಯದ ಜನ ಇದಕ್ಕೆ ಪ್ರತಿಕ್ರಿಯೆ ನೀಡಿ ನಿಜವಾಗಿ ಬಹಳ ಜನ ಬೆಂಬಲ ಕೊಡುವ ಸುಳ್ಳು ವಾತಾವರಣ ಸೃಷ್ಟಿ ಮಾಡಲು ಈ ಫೇಕ್ ಅಕೌಂಟ್ ಗಳು ಅವರಿಗೆ ಲೈಕ್ ಒತ್ತಿ ಪೋಸ್ಟ್ ಕಾಮೆಂಟ್ ಹರಡುತ್ತವೆ.
ಕಡೆಗೆ ಎಲ್ಲವೂ ಬೀಳುವಾಗ ನೋಡುತ್ತಾ ಇರುತ್ತವೆ. ಜನರು ಒಂದಾಗಿ ಒಂದಿಷ್ಟು ಎದ್ದರೆ ಮತ್ತೆ ಬರುತ್ತವೆ. ಮತ್ತೆ ಅದೇ ಕೆಲಸ ಮಾಡುತ್ತವೆ.
ಇವತ್ತು ಜಗತ್ತಿನ ಎಲ್ಲ ಆಡಳಿತಗಾರರು, ರಾಜರು, ದೇವರು ಹೊಂದಿಲ್ಲದ ಶಕ್ತಿಯನ್ನು ಯಾವುದೋ ಒಂದು ಕಡೆ ಮೂಲೆಯಲ್ಲಿ ಅಡಗಿ ಕುಳಿತ ಅಯೋಗ್ಯ ಟ್ರೊಲ್ ಗಳು ಹೊಂದಿರುತ್ತಾರೆ.
ಯಾಕೆಂದರೆ ಅವರು ಯಾವ ಯಾವ ಸಮುದಾಯ ಸಿದ್ಧಾಂತ ಧರ್ಮ ಹಾಗೂ ವ್ಯಕ್ತಿಗಳ ಮೇಲೆ ಗುರಿ ಇಡುತ್ತಾರೆ, ಅದರ ಮೇಲೆ ಒಂದು ಪ್ರೋಪಗಂಡ ಕಟ್ಟಲಾಗುತ್ತದೆ.
ಅಲ್ಲಿ ನಿಜವಾಗಿ ಇತರೆ ಸಮುದಾಯಗಳ ಜನ ಕಾಮೆಂಟ್ ಮಾಡದೆ ಇದ್ದರೂ ಮೊದಲು ಇವರೇ ಫೇಕ್ ಅಕೌಂಟ್ ಗಳಲ್ಲಿ ಮಾಡಿ ಜನರಿಗೆ ನಂಬಿಕೆ ಹುಟ್ಟಿಸುತ್ತವೆ. ಆಮೇಲೆ ಜನರು ಜಗಳ ವಾದ ವಿವಾದ ಹೊಡೆದಾಟ ಶುರು ಮಾಡುತ್ತಾರೆ. ಕಡೆಗೆ ಇಡೀ ದೇಶವೆ ರೋಷ ಆವೇಶಗಳಿಂದ ತುಂಬಿ, ಜಗತ್ತಿನಲ್ಲಿ ತಮ್ಮ ಜನರು ಹೇಗಿದ್ದಾರೆ, ಏನೆಲ್ಲ ಸಮಸ್ಯೆಗಳು ಮುಂದಿನ ಜನರಿಗೆ ಬರಲಿವೆ ಎಂದು ನೋಡದೆ ಬೀಳುವ ಹಂತಕ್ಕೆ ಬರುತ್ತಿವೆ.
ಇವತ್ತು ಅಂತದ್ದು ಎಲ್ಲಾ ಕಡೆ ಅಲ್ಲದೆ ನಮ್ಮ ನೆರೆಹೊರೆ ರಾಷ್ಟ್ರಗಳಲ್ಲಿ ಅತಿಯಾಗಿ ಆಗಿ ಭಾರತದ ಸುತ್ತಲೂ ಸಮಸ್ಯೆಗಳು ತುಂಬಿವೆ.
ಅಲ್ಲಿ ನಾಯಕತ್ವ ಕೊಡಬೇಕಾದ ಸಮಯದಲ್ಲಿ ನಮ್ಮ ದೇಶದ ಒಳಗೆ ಜನರ ಹೊಡೆದಾಡಿಸುವ ಅಯೋಗ್ಯ ನೀಚರು ಇವತ್ತು ನಿಜವಾದ ದೇಶ ಹಾಗೂ ನಾಡ ದ್ರೋಹಿಗಳು.
ಎಲ್ಲೋ ಕುಳಿತ ಈ ಜನ ಒಂದು ಪ್ರಚೋದನೆ ಪೋಸ್ಟ್ ಹಾಕಿ, ಹತ್ತು ಸಮುದಾಯಗಳ ಜನರ ಹಾಗೆ ಹೆಸರು ಇರುವ ಹತ್ತು ಫೇಕ್ ಅಕೌಂಟ್ ಬಳಸಿ ಸಮಾಜದ ಹತ್ತು ಸಮುದಾಯಗಳ ಒಡೆದು ಬಿಸಾಕಿ ಹತ್ತು ಭಾಗಗಳು ಹೊಡೆದಾಡಿಕೊಳ್ಳುವ ಹಾಗೆ ಮಾಡಿ ಮಹಾಭಾರತದ ರಾಮಾಯಣದ ಯುದ್ಧಗಳ ಒಳಗೆ ಮಾಡಿಸಬಲ್ಲವು.
ಅಲ್ಲಿಗೆ ಈ ನೀಚರಿಗೆ ತಮ್ಮ ಮಕ್ಕಳಿಗೆ ತಾವು ಏನು ಕೊಡುತ್ತಾ ಇದ್ದೇವೆ ಎಂಬ ಅರಿವು ಇದೆಯೇ?
ಈ ದೇಶದ್ರೋಹಿ ಅಯೋಗ್ಯರು ಅಷ್ಟೆಲ್ಲ ಯೋಗ್ಯತೆ ಹೊಂದಿದ್ದರೆ ಭಾರತ ಇವತ್ತು ಇಲ್ಲಿರುತ್ತಾ ಇರಲಿಲ್ಲ.
ಇವರನ್ನು ನೋಡಿ, ಭಾರತ ದೇಶದ ಶಿಕ್ಷಣ ಪಡೆದು, ಗೊತ್ತಿದ್ದು ಇಂಥದ್ದು ಮಾಡುವ ಜನರಿಗೆ ಪ್ರೋತ್ಸಾಹ ನೀಡುವ ಜನರು, ಈ ದೇಶಕ್ಕೆ ಮತ್ತು ಜಗತ್ತಿನ ಎಲ್ಲ ಕಡೆ ಅವರ ದೇಶಗಳಿಗೆ ಕೇಡು ಮಾಡಿದ ಅತಿ ದೊಡ್ಡ ದೇಶದ್ರೋಹಿಗಳು.
ಇದರ ಫಲ ಆಗಲೇ ಜಗತ್ತು ನೋಡುತ್ತಾ ಇದೆ.
ಆದ್ದರಿಂದ ಯಾವುದೇ ಫೇಕ್ ಅಕೌಂಟ್ ವ್ಯಕ್ತಿಗಳು ಭಾರತದಂತಹ ದೊಡ್ಡ ಸಂಕೀರ್ಣ ದೇಶದಲ್ಲಿ ಇತರೆ ಜನರ ಸೋಗಿನಲ್ಲಿ ಜನರ ಜಗಳ ಆಡಿಸುವ ಕೆಲಸ ಮಾಡುವುದು ಯಾವುದೇ ರೀತಿಯ ಸಂವಿಧಾನಿಕ ಹಕ್ಕಲ್ಲ. ದೇಶ ದ್ರೋಹ ಎಂದು ಅರಿಯಬೇಕು.

