ತುಮಕೂರು- ಕನ್ನಡ ಕಲಿಯಲು ಆತ್ಮವಿಶ್ವಾಸ ಬೆಳೆಸುವ ಉದ್ದೇಶದಿಂದ ಸರಳ ಪಠ್ಯಕ್ರಮವನ್ನು ತಯಾರಿಸಲಾಗಿದ್ದು, ಅದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕನ್ನಡ ಅಭಿವೃಧ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಸಲಹೆ ನೀಡಿದರು.

ನಗರದ ಅಲಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕನ್ನಡ ಕಲಿಕಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಭಾಷೆಯು ಅತ್ಯಂತ ಶ್ರೀಮಂತ ಭಾಷೆಯಾಗಿದ್ದು, ಈ ಭಾಷೆಯನ್ನು ಕಲಿಯುವುದು ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕನ್ನಡ ಕಲಿಯಬೇಕು ಎಂದು ಕರೆ ನೀಡಿದರು.
ಕನ್ನಡ ವರ್ಣಮಾಲೆ, ಕಾಗುಣ ತ, ಸರ್ವನಾಮ, ಕ್ರಯಾಪದಗಳು, ನಾಮಪದಗಳನ್ನು ಅರ್ಥ ಮಾಡಿಕೊಂಡಲ್ಲಿ ಅತ್ಯಂತ ಸುಲಭವಾಗಿ ಕನ್ನಡ ಕಲಿಯಬಹುದೆಂದು ಹಲವಾರು ಉದಾಹರಣೆಗಳ ಮೂಲಕ ತಿಳಿ ಹೇಳಿದರು. ಇದರೊಂದಿಗೆ ಅಲ್ಪಸಂಖ್ಯಾತ ಸಮುದಾಯದ ಮುಸಲ್ಮಾನರು ಹಾಗೂ ಅರೇಬಿಕ್ ಶಿಕ್ಷಕರು ಕನ್ನಡವನ್ನು ಕಲಿಯುವ ಮೂಲಕ ಧಾರ್ಮಿಕ ತಾರತಮ್ಯದಿಂದ ಹೊರ ಬರಬಹುದು. ಆದ್ದರಿಂದ ಕನ್ನಡ ಕಲಿಯಲಿಕ್ಕೆ ಪ್ರಾಥಮಿಕ ಪ್ರಾತಿನಿಧ್ಯ ನೀಡಬೇಕು. ಈ ನಿಟ್ಟಿನಲ್ಲಿ ಕನ್ನಡ ಅಭಿವೃಧ್ಧಿ ಪ್ರಾಧಿಕಾರವು ಕನ್ನಡೇತರರು ಹಾಗೂ ಕನ್ನಡ ಬಾರದೇ ಇರುವವರಿಗೆ ಕನ್ನಡ ಕಲಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಇದರಲ್ಲಿ ಮೂರು ತಿಂಗಳ ತರಗತಿಗಳನ್ನು ನಡೆಸಲಾಗುವುದು, ವಾರದಲ್ಲಿ ಮೂರು ಗಂಟೆಯ ತರಗತಿಗಳನ್ನು ಆಯೋಜಿಸಲಾಗುವುದು ಎಂದರು.

ಈ ತರಗತಿಗಳಲ್ಲಿ ಅರೇಬಿಕ್ ಶಿಕ್ಷಕರು ಕನ್ನಡವನ್ನು ಸರಳವಾಗಿ ಓದುವುದನ್ನು ಹಾಗೂ ಬರೆಯುವುದನ್ನು ಕಲಿಯಬಹುದು. ತುಮಕೂರಿನ ಈ ಜಾಮಿಯಾ ಸಯ್ಯದಿನಾ ಅನಸ್ ಬಿನ್ ಮಾಲಿಕ್ ಮದರಸಾದವರು ಅತ್ಯಂತ ಅದ್ಬುತವಾದ ರೀತಿಯಲ್ಲಿ ತುಂಬಾ ವಿಜೃಂಭಣೆಯೊAದಿಗೆ ಕಾರ್ಯಕ್ರಮವನ್ನು ಆಯೋಜಿಸಿರುವುದು ತುಂಬಾ ಸಂತಸ ತಂದಿದೆ ಎಂದರು.
ಇದುವರೆಗೂ ರಾಜ್ಯದಲ್ಲಿ 40ಕ್ಕಿಂತ ಹೆಚ್ಚು ಕೇಂದ್ರಗಳನ್ನು ಪ್ರಾರಂಭಿಸಲಾಗಿದ್ದು, ಅತ್ಯಂತ ಸಂಭ್ರಮದಿAದ ಕಾರ್ಯಕ್ರಮ ಮಾಡುತ್ತಿರುವ ಮೊದಲ ಸಂಸ್ಥೆ ಇದಾಗಿದೆ. ಇದೊಂದು ಐತಿಹಾಸಿಕ ಕ್ಷಣವಾಗಿದೆ ಎಂದು ಅಭಿಪ್ರಾಯಪಟ್ಟರು.
ನಾನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮೇಲೆ ಅಲ್ಪಸಂಖ್ಯಾತರಿಗೆ ಮತ್ತು ಇತರೆ ಭಾಷೆಯವರಿಗೆ ಕನ್ನಡ ಕಲಿಸುವ ನಿಟ್ಟಿನಲ್ಲಿ ಪ್ರಾಧಿಕಾರ ಹೆಜ್ಜೆಯನ್ನಿಟ್ಟಿದೆ. ಈಗಾಗಲೇ 45 ಕಡೆ ಅನ್ಯಭಾಷಿಗರಿಗೆ ಕನ್ನಡ ಕಲಿಸುವ ಕಾರ್ಯ ಮಾಡಲಾಗುತ್ತಿದೆ. ಕೇವಲ 3 ತಿಂಗಳಲ್ಲಿ ಕನ್ನಡವನ್ನು ಸರಳವಾಗಿ ಕಲಿಯುವ ಪುಸ್ತಕವನ್ನು ರಚನೆ ಮಾಡಲಾಗಿದೆ. ಮೊದಲು ಕನ್ನಡವನ್ನು ಇಲ್ಲಿನ ಮೌಲಿಗಳಿಗೆ ಕಲಿಸುತ್ತೇವೆ. ಆ ನಂತರ ಮೌಲಿಗಳ ಮುಖಾಂತರ ಮಕ್ಕಳಿಗೆ ಕನ್ನಡ ಕಲಿಸಲಾಗುವುದು ಎಂದರು.

ಕನ್ನಡ ಸಾಹಿತ್ಯ ಬರೆಯುವ ಲೇಖಕರಲ್ಲಿ ಸುಮಾರು 890 ಕ್ಕಿಂತ ಹೆಚ್ಚು ಮುಸ್ಲಿಂ ಸಾಹಿತಿಗಳಿದ್ದಾರೆ ಎಂದ ಅವರು, ಅಲ್ಪಸಂಖ್ಯಾತರು ಹಾಗೂ ಬಹುಸಂಖ್ಯಾತರ ನಡುವೆ ವ್ಯತ್ಯಾಸ ಹೆಚ್ಚಾಗುತ್ತಿದ್ದು, ಇದನ್ನು ನಿವಾರಿಸುವ ನಿಟ್ಟಿನಲ್ಲಿ ಕನ್ನಡ ಭಾಷೆಯನ್ನು ಕಲಿಯುವ ಮೂಲಕ ಬಾಂಧವ್ಯ ವೃದ್ಧಿಸಿಕೊಳ್ಳಬಹುದು ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗ ಮಾತನಾಡಿ, ಜಿಲ್ಲಾ ಕಸಾಪ ವತಿಯಿಂದ ಕಲಿಕಾ ಕೇಂದ್ರಕ್ಕೆ ಬೇಕಾಗುವ ಪರಿಕರಗಳನ್ನು ಒದಗಿಸಲಿದೆ. ಕನ್ನಡ ಭಾಷೆಗೆ ಅನ್ಯ ಭಾಷಿಗರು ಸಹ ಹೆಚ್ಚಿನ ಕೊಡುಗೆಯನ್ನು ಕೊಟ್ಟಿದ್ದಾರೆ. ಅಲ್ಪಸಂಖ್ಯಾತರು ಸಹ ಕನ್ನಡವನ್ನು ಹೆಚ್ಚಾಗಿ ಕಲಿಯಬೇಕು ಎಂದು ಹೇಳಿದರು.
ಕನ್ನಡ ಕಲಿಕಾ ಕೇಂದ್ರದಲ್ಲಿ ಕನ್ನಡ ಕಲಿಸಲು ಸರ್ಕಾರದ ವತಿಯಿಂದ ನೇಮಕಗೊಂಡಿರುವ ಅಲಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶೇಕ್ ಮೊಹಮ್ಮದ್ ಅನ್ವರ್ ಮಾತನಾಡಿ, ಇಂದು ನಮ್ಮೆಲ್ಲರಿಗೂ ಅತ್ಯಂತ ಹೆಮ್ಮೆಯ ಹಾಗೂ ಐತಿಹಾಸಿಕ ದಿನ. ಕನ್ನಡ ಭಾಷೆಯ ಸಂರಕ್ಷಣೆ, ಪ್ರಚಾರ ಮತ್ತು ಅಭಿವೃದ್ದಿಯ ಮಹತ್ವದ ಹೆಜ್ಜೆಯಾಗಿ ಕನ್ನಡ ಕಲಿಕಾ ಕೇಂದ್ರದ ಉದ್ಘಾಟನೆಗೊಂಡಿದೆ ಎಂದರು.
ಭಾಷೆ ಎನ್ನುವುದು ಸಂಸ್ಕöÈತಿಯ ಉಸಿರು. ಅದನ್ನು ಉಳಿಸುವುದು ನಮ್ಮೆಲ್ಲರ ಹೊಣೆ. ಕನ್ನಡ ಕೇವಲ ಭಾಷೆಯಲ್ಲ, ಅದು ನಮ್ಮ ಭಾವನೆ, ನಮ್ಮ ಅಸ್ತಿತ್ವ ಮತ್ತು ನಮ್ಮ ಸಂಸ್ಕöÈತಿಯ ಪ್ರತೀಕ. ಇಂದಿನ ತಂತ್ರಜ್ಞಾನ ಯುಗದಲ್ಲಿ ಮಾತೃಭಾಷೆಯ ಮಹತ್ವದ ಬಗ್ಗೆ ಯುವಜನತೆಗೆ ಅರಿವು ಮೂಡಿಸುವುದು ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಕನ್ನಡ ಕಲಿಕಾ ಕೇಂದ್ರವು ಹೊಸ ಪೀಳಿಗೆಗೆ ಕನ್ನಡ ಕಲಿಸುವ ದೀಪಸ್ತಂಭವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಕನ್ನಡ ಅಭಿವೃಧ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಡಾ. ಸಂತೋಷ್ ಹಾನಗಲ್ಲ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಡಾ. ಬಾಲಗುರುಮೂರ್ತಿ, ಸಂಸ್ಥೆಯ ಕಾರ್ಯದರ್ಶಿ ಹಾಜಿ ಮಿರ್ಜಾ ಅಸ್ಲಂ ಪಾಷ, ಅಧ್ಯಕ್ಷರಾದ ಹಾಜಿ ಅಬ್ದುಲ್ ರೆಹಮಾನ್, ಮದರಸಾ ಮುಖ್ಯಸ್ಥರಾದ ಮುಫ್ತಿತೌಹಿದ್ ಉರ್ ರೆಹಮಾನ್, ಕಾಲೇಜಿನ ಪ್ರಾಂಶುಪಾಲರಾದ ಶೇಕ್ ಮೊಹಮ್ಮದ್ ಅನ್ವರ್, ಶಾಹೀದ್ ಅಫ್ರಿದಿ, ಸಮಾಜ ಸೇವಕರಾದ ಅಪ್ಸರ್ಖಾನ್, ಹಮೀದ್ ಬೇಗ್, ಹಾನಿ ಹುಸೇನ್, ಅಲ್ ಫುರ್ಖಾನ್ ಮದರಸಾದ ಮಹಮ್ಮದ್ ಯೂಸುಫ್, ಇಕ್ಬಾಲ್ ಅಹಮದ್, ರ್ಫಾನ್, ಮುಸ್ಲಿಂ ಧರ್ಮಗುರುಗಳು, ಮದರಸಾದ ಅರೇಬಿಕ್ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

