ತುಮಕೂರು ದಸರಾ–2026ರ ಲಾಂಛನ ಬಿಡುಗಡೆ: ಎಲ್ಲರ ಸಹಭಾಗಿತ್ವಕ್ಕೆ ಮಾನ್ಯ ಡಾ. ಜಿ. ಪರಮೇಶ್ವರ ರವರು ಕರೆ

Surya Pragathi Editor

ತುಮಕೂರು ದಸರಾ–2026ರ ಲಾಂಛನ ಬಿಡುಗಡೆ: ಎಲ್ಲರ ಸಹಭಾಗಿತ್ವಕ್ಕೆ ಮಾನ್ಯ ಡಾ. ಜಿ. ಪರಮೇಶ್ವರ ರವರು ಕರೆ


 

2024 ಮತ್ತು 2025ನೇ ಸಾಲಿನಲ್ಲಿ ಎಲ್ಲರನ್ನು ಒಳಗೊಂಡಂತೆ ಅತ್ಯಂತ ವಿಜೃಂಭಣೆಯಿಂದ ನಡೆದ ತುಮಕೂರು ದಸರಾ, ಜಿಲ್ಲೆಯ ಜನರ ಅಪಾರ ಬೆಂಬಲ, ಸಹಕಾರ ಹಾಗೂ ಸಕ್ರಿಯ ಭಾಗವಹಿಸುವಿಕೆಯಿಂದ ಮನೆಮಾತಾಗಿದೆ. ಕಲೆ, ಸಂಸ್ಕೃತಿ, ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ ಹಾಗೂ ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಆದ್ಯತೆ ನೀಡಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು.

ಈ ಬಾರಿಯೂ ಮತ್ತಷ್ಟು ವೈಭವ ಹಾಗೂ ವೈವಿಧ್ಯತೆಯಿಂದ ಆಚರಿಸಲಾಗುತ್ತಿದೆ. ತುಮಕೂರು ದಸರಾ ಕೇವಲ ಧಾರ್ಮಿಕ ಆಚರಣೆಗೆ ಸೀಮಿತವಾಗದೆ, ಜಿಲ್ಲೆಯ ಅಭಿವೃದ್ಧಿ, ಜನಪರ ಕಾರ್ಯಕ್ರಮಗಳು, ಕಲೆ, ಸಂಸ್ಕೃತಿ ಹಾಗೂ ಜನಸಹಭಾಗಿತ್ವವನ್ನು ಒಗ್ಗೂಡಿಸುವ ಉತ್ಸವವಾಗಿ ರೂಪುಗೊಳ್ಳುತ್ತಿದೆ.

 

ಈ ಹಿನ್ನೆಲೆಯಲ್ಲಿ ತುಮಕೂರು ದಸರಾ–2026ರ ಲಾಂಛನವನ್ನು ಇಂದು ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು. ಲಾಂಛನ ಬಿಡುಗಡೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ, ದಸರಾ ಮಹೋತ್ಸವದ ಉದ್ದೇಶ, ಕಳೆದ ಎರಡು ವರ್ಷಗಳ ಯಶಸ್ಸು ಹಾಗೂ ಈ ಬಾರಿಯ ಕಾರ್ಯಕ್ರಮಗಳ ಕುರಿತು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರ ಶಾಸಕರು, ತುಮಕೂರು ದಸರಾ ಸೇರಿದಂತೆ ಜಿಲ್ಲೆಯ ಎಲ್ಲಾ ಅಭಿವೃದ್ಧಿ ಮತ್ತು ಜನಪರ ಕಾರ್ಯಕ್ರಮಗಳಿಗೆ ತಮ್ಮ ಹಾಗೂ ತಮ್ಮ ಕ್ಷೇತ್ರದ ವತಿಯಿಂದ ಸದಾ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಪಂಜಿನ ಕವಾಯತು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗುತ್ತಿದೆ.

 

- Advertisement -
Ad imageAd image
- Advertisement -
Ad imageAd image

ಉಪಮುಖ್ಯಮಂತ್ರಿಗಳು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ. ಪರಮೇಶ್ವರ ಅವರು ಮಾತನಾಡಿ, ತುಮಕೂರು ದಸರಾ–2026ರ ಎಲ್ಲಾ ಕಾರ್ಯಕ್ರಮಗಳಲ್ಲಿ ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಮಹೋತ್ಸವವನ್ನು ಯಶಸ್ವಿಗೊಳಿಸುವಂತೆ ಅತ್ಯಂತ ಗೌರವಪೂರ್ವಕವಾಗಿ ಮನವಿ ಮಾಡಿದರು. ಸಾರ್ವಜನಿಕರು, ಚುನಾಯಿತ ಪ್ರತಿನಿಧಿಗಳು ಹಾಗೂ ಮಾಧ್ಯಮಗಳು ಸಹಕಾರ ನೀಡಿ ದಸರಾ ವೈಭವವನ್ನು ಮತ್ತಷ್ಟು ಹೆಚ್ಚಿಸಬೇಕೆಂದು ಕೋರಿದರು.

Share this Article
Leave a comment