ಗುಬ್ಬಿ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಪಲ್ಸ್ ಪೋಲಿಯೊ ಲಸಿಕ ವಿತರಣಾ ಕಾರ್ಯಕ್ರಮ

Surya Pragathi Editor
1 Min Read

ವರದಿ ಗುಬ್ಬಿ ಭರತ್

 

ಪಲ್ಸ್ ಪೋಲಿಯೊ ಲಸಿಕ ವಿತರಣಾ ಕಾರ್ಯಕ್ರಮ: ಮಕ್ಕಳ ಅಂಗವಿಕಲತೆಯನ್ನು ಹೋಗಲಾಡಿಸಲು ಹುಟ್ಟಿನಿಂದ ಐದು ವರ್ಷದ ಒಳಗಿನ ಎಲ್ಲಾ ಮಕ್ಕಳಿಗೂ ಪಲ್ಸ್ ಪೋಲಿಯೋ ಲಸಿಕೆಯ ಹನಿಯನ್ನು ಪ್ರತಿಯೊಬ್ಬರು ಹಾಕಿಸಬೇಕು ಎಂದು ಅಂಗನವಾಡಿ ಶಿಕ್ಷಕಿ ಶಿವರತ್ನಮ್ಮ ತಿಳಿಸಿದರು.

ತಾಲೂಕಿನ ಕಸಬಾ ಹೋಬಳಿ ಲಕ್ಕೇನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮದ ಅಂಗವಾಗಿ ಮಕ್ಕಳಿಗೆ ಪೋಲಿಯೋ ಲಸಿಕೆ ವಿತರಣ ಅಂಗವಾಗಿ ಮಾತನಾಡಿದ ಅವರು ಪೋಷಕರು ತಮ್ಮ ಮಕ್ಕಳಿಗೆ ತಪ್ಪದೇ ಪೋಲಿಯೋ ಲಸಿಕೆಯನ್ನು ಹಾಕಿಸಬೇಕು ಇದರಿಂದ ಮಕ್ಕಳಿಗೆ ಮುಂದೆ ಆಗುವಂತಹ ಅಂಗವಿಕಲತೆಯನ್ನ ತಡೆಯಬಹುದು. ಎರಡು ದಿನಗಳ ಕಾಲ ಮನೆ ಮನೆಗೆ ಭೇಟಿ ನೀಡಲಿದ್ದು ಆ ಸಂದರ್ಭದಲ್ಲಿಯೂ ಸಹ ಲಸಿಕೆ ಹಾಕಿಸದ ಮಕ್ಕಳಿಗೆ ತಪ್ಪದೆ ಪೋಲಿಯೋ ಲಸಿಕೆಯನ್ನು ಹಾಕಿಸಬೇಕು ಎಂದು ತಿಳಿಸಿದರು.

ಬೆಳಿಗ್ಗೆಯಿಂದಲೇ ಪೋಷಕರು ಸಾಲುಗಟ್ಟಾಗಿ ನಿಂತು ತಮ್ಮ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆಯನ್ನು ಹಾಕಿಸುವ ದೃಶ್ಯ ಕಂಡು ಬಂತು.

ಉಪ್ಪರುಪಾಳ್ಯ, ಚಿಕ್ಕನ್ ನೆಟ್ಕುಂಟೆ ಗೊಲ್ಲರಹಟ್ಟಿ, ಲಕ್ಕೆನಹಳ್ಳಿ, ತುಳಸಿ ಕಟ್ಟೆ, ಗೊಲ್ಲರಹಟ್ಟಿ, ರಂಗನಾಥಪುರ ಕೋಣನಕಲ್ಲು ಗ್ರಾಮದಿಂದ ಪೋಷಕರು ತಮ್ಮ ಮಕ್ಕಳನ್ನು ಕರೆದುಕೊಂಡು ಬಂದು ಲಸಿಕೆಯನ್ನು ಹಾಕಿಸುತ್ತಿದ್ದರು.

ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರಾದ ಗೌರಮ್ಮ, ಮಂಗಳಮ್ಮ,
ಆಶಾ ಕಾರ್ಯಕರ್ತರಾದ ಮಾಲಿನಿ ಕೆ. ಟಿ, ಸಿದ್ಧಗಂಗಮ್ಮ, ಸುಜಾತ ಬಾಯಿ ಸೇರಿದಂತೆ ಪೋಷಕರು ಮಕ್ಕಳು ಇದ್ದರು.

Share this Article
Leave a comment