ಕುಣಿಗಲ್ : ಪುರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ವಿಚಾರದಲ್ಲಿ ಸಾರ್ವಜನಿಕರಲ್ಲಿ ಗೊಂದಲ ಉಂಟು ಮಾಡುತ್ತಿರುವ ಮಾಜಿ ಪುರಸಭಾ ಅಧ್ಯಕ್ಷ ಕೆಎಲ್ ಹರೀಶ್
ಎಂದು ಮಾಜಿ ಪುರಸಭಾ ಅಧ್ಯಕ್ಷರು ಹಾಗೂ ಸದಸ್ಯರು ತಿಳಿಸಿದರು.
ಎಂದು ಮಾಜಿ ಪುರಸಭಾ ಅಧ್ಯಕ್ಷರು ಹಾಗೂ ಸದಸ್ಯರು ತಿಳಿಸಿದರು. ಪಟ್ಟಣದ ಮಾಜಿ ಪುರಸಭಾ ಅಧ್ಯಕ್ಷ ರಂಗಸ್ವಾಮಿ ರವರು ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಮೂರು ಬಾರಿ ಅಧ್ಯಕ್ಷರಾಗಿ ಆಡಳಿತ ನಡೆಸಿದಂತಹ ಜೆಡಿಎಸ್ ಪಕ್ಷದ ಕೆಎಲ್ ಹರೀಶ್ ಅವರು ಪಟ್ಟಣದ ಕುಡಿಯುವ ನೀರಿನ ವ್ಯವಸ್ಥೆ ಬಗ್ಗೆ ಜನತೆಗೆ ತಪ್ಪು ಮಾಹಿತಿ ನೀಡುತ್ತಾ ಶಾಸಕರು ಏನು ಕೆಲಸ ಮಾಡಿಲ್ಲ ಎಂದು ಆರೋಪ ಮಾಡುತ್ತಿರುವುದು ವಿಪರ್ಯಾಸವಾಗಿದೆ ಶಾಸಕ ಡಾಕ್ಟರ್ ಎಚ್ ಡಿ ರಂಗನಾಥ್ ಅವರು ನೀರಾವರಿ ಯೋಜನೆಗಳ ಬಗ್ಗೆ ಕಾರ್ಯ ಕಾರ್ಯರೂಪಕ್ಕೆ ತರುತ್ತಿರುವುದನ್ನು ಕೆ ಎಲ್ ಹರೀಶ್ ಅವರು ಆತ್ಮವಲೋಕನ ಮಾಡಿಕೊಳ್ಳಬೇಕಾಗಿದೆ ಕೇವಲ ಸಾರ್ವಜನಿಕ ಜೀವನದಲ್ಲಿರುವ ನಾವುಗಳು ಸುಳ್ಳು ಅಪಪ್ರಚಾರ ಮಾಡುವುದನ್ನು ಕೈ ಬಿಡಬೇಕು ಈ ಹಿಂದೆ ಕೆ ಎಲ್ ಹರೀಶ್ ಅವರ ಆಡಳಿತ ಅವಧಿಯಲ್ಲಿ 76 ಬೋರ್ವೆಲ್ ಗಳು ಕಾರ್ಯನಿರ್ವಹಿಸುತ್ತಿದ್ದವು ಶಾಸಕರಾದ ರಂಗನಾಥ್ ಅವರ ಆಡಳಿತ ಅವಧಿಯಲ್ಲಿ 123 ಬೋರ್ವೆಲ್ ಗಳು ಕಾರ್ಯ ನಿರ್ವಹಿಸುತ್ತಾ ದಿನ ಬಿಟ್ಟು ದಿನ ಪಟ್ಟಣದ ನಾಗರಿಕರಿಗೆ ಕುಡಿಯುವ ನೀರು ನೀಡುತ್ತಿದ್ದೇವೆ ಎಂದು ತಿಳಿಸುತ್ತ ಈ ಹಿಂದೆ ಇದ್ದಂತಹ ನೀರು ಫಿಲ್ಟರ್ ಘಟಕ 5.8ml ಇದ್ದುದ್ದನ್ನು ಈಗ 8 ಎಂಎಲ್ ಘಟಕವಾಗಿ ಪರಿವರ್ತಿಸಲಾಗುತ್ತಿದೆ ಸುಮಾರು ಪಟ್ಟಣದಲ್ಲಿ ಕುಡಿಯುವ ನೀರಾವರಿ ಯೋಜನೆಗೆ 100 ಕೋಟಿಗೂ ಹೆಚ್ಚು ಅನುದಾನದಲ್ಲಿ ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ 52km ಪೈಪ್ ಲೈನ್ ಈಗಾಗಲೇ ಪೂರ್ಣಗೊಂಡಿದ್ದು ಇನ್ನೂ ಕೇಲವೆ ದಿನಗಳಲ್ಲಿ ಸಮರ್ಪಕವಾಗಿ ಕುಡಿಯುವ ನೀರಿನ ಒದಗಿಸುವ ವ್ಯವಸ್ಥೆ ಕೈಗೊಂಡಿದ್ದು ಈಗ ಕಾಮಗಾರಿ ನಡೆಯುತ್ತಿರುವುದರಿಂದ ಕಾಮಗಾರಿಯ ಅವ್ಯವಸ್ಥೆ ಇರುವುದು ಸಾರ್ವಜನಿಕರಿಗೆ ಈಗಾಗಲೇ ಪುರಸಭೆಯು ಮನವರಿಕೆ ಮಾಡಿದೆ ಹಿಂದೆ ಆಡಳಿತ ಮಾಡಿದ ಹರೀಶ್ ಅವರ ಕಾಲದಲ್ಲಿ ಖಾಸಗಿ ಬಸ್ ನಿಲ್ದಾಣ ಒಡೆದು ನೆಲ ಸಮ ಮಾಡಿ 80ಕ್ಕೂ ಹೆಚ್ಚು ಸಣ್ಣಪುಟ್ಟ ವ್ಯಾಪಾರಿಗಳನ್ನು ಬೀದಿ ಪಾಲು ಮಾಡಿದ್ದೀರಿ ಆದರೆ ಶಾಸಕ ಡಾಕ್ಟರ್ ಎಚ್ ಡಿ ರಂಗನಾಥ್ ಅವರು 10 ಕೋಟಿ ವೆಚ್ಚದಲ್ಲಿ ಬಸ್ ನಿರ್ಮಾಣ ಕೈಗೊಂಡಿದ್ದಾರೆ ಒಳಚರಂಡಿ ವ್ಯವಸ್ಥೆಯು ಅವ್ಯವಸ್ಥೆಯಿಂದ ಕೂಡಿದ್ದು 38 ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭಿಸುವುದರೊಂದಿಗೆ ಒಂಬತ್ತು ಕಡೆ ಎಸ್ಟಿಪಿ ನಿರ್ಮಿಸಲಾಗುವುದು ಶಾಸಕರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಕೆಎಲ್ ಹರೀಶ್ ಬಿಟ್ಟು ಮೊದಲು ತಾವು ರೈಜಿಂಗ್ ಮೇನ್ ನಿಂದ ಎಷ್ಟು ನೀರು ಪಡೆದಿದ್ದೀರಿ ಎಂಬುದನ್ನು ಸಾರ್ವಜನಿಕರಿಗೆ ತಿಳಿಸಿ ಎಂದರು. .
ಮಾಜಿ ಪುರಸಭಾ ಉಪಾಧ್ಯಕ್ಷರಾದ ಅರುಣ್ ಕುಮಾರ್ ಮಾತನಾಡಿ ಶಾಸಕರ ಅವಧಿಯಲ್ಲಿ ಪಟ್ಟಣದ ಅಭಿವೃದ್ಧಿಗೆ ಸಾಕಷ್ಟು ಕೆಲಸ ಕಾರ್ಯಗಳು ನಡೆಯುತ್ತಿದ್ದು ಸುದ್ದಿಕರಣಘಟ್ಟದ ಕಾಮಗಾರಿ ನಡೆಯುತ್ತಿರುವುದರಿಂದ ವಿಳಂಬವಾಗಿರುವುದು ಸ್ವಾಭಾವಿಕವಾಗಿದೆ ಕುಡಿಯುವ ನೀರಿನ ವಿತರಣೆ ಕೈಗೊಳ್ಳಲು ವಿಶೇಷ ಪರಿಣಿತರ ತಂಡ ರಚಿಸುವಂತೆ ಶಾಸಕರಲ್ಲಿ ಕೋರುತ್ತಾ ಈಗಾಗಲೇ ಬಿದನಗೆರೆ ಜಿಕೆ ಬಿಎಂಎಸ್ ಕೆ ಆರ್ ಎಸ್ ಅಗ್ರಾರ ಭಾಗದಲ್ಲಿ ಓವರ್ ಟ್ಯಾಂಕ್ ನಿರ್ಮಿಸಲಾಗಿದೆ ಎಂಬುದನ್ನು ಮಾಜಿ ಅಧ್ಯಕ್ಷರು ತಿಳಿಯಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಪುರಸಭಾ ಸದಸ್ಯರಾದ ದೇವರಾಜ್, ಉದಯ್, ಜಬಿವುಲ್ಲಾ, ನಾಗರಾಜ್, ಬಿದನಗೆರೆ ಕೃಷ್ಣಪ್ಪ ಇದ್ದರು.
