
ತುಮಕೂರು- ತಾಲ್ಲೂಕಿನ ಗೊಲ್ಲಹಳ್ಳಿ ಬಳಿ ಇರುವ ಜವಹರ್ ನವೋದಯ ವಿದ್ಯಾಲಯದಲ್ಲಿ ಏರ್ಪಡಿಸಿದ್ದ 37ನೇ ವಾರ್ಷಿಕೋತ್ಸವವನ್ನು ಸಡಗರ ಸಂಭ್ರಮದಿAದ ಆಚರಿಸಲಾಯಿತು.
ನವೋದಯ ವಿದ್ಯಾಲಯದ ಆವರಣದಲ್ಲಿ ನಡೆದ ಶಾಲೆಯ 37ನೇ ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಮನಮೋಹಕ ನೃತ್ಯ ಪ್ರದರ್ಶನ, ಗಾಯನ ಹಾಗೂ ಇನ್ನಿತರ ಸಾಂಸ್ಕöÈತಿಕ ಚಟುವಟಿಕೆಗಳ ಅಮೋಘ ಪ್ರದರ್ಶನ ನೆರೆದಿದ್ದ ಪೋಷಕರ ಮನಸೂರೆಗೊಂಡವು.
ಸಮಾರAಭ ಉದ್ಘಾಟಿಸಿದ ನವೋದಯ ವಿದ್ಯಾಲಯದ ಪೋಷಕ ಮತ್ತು ಶಿಕ್ಷಕರ ಮಂಡಳಿ ಸದಸ್ಯ ಹಾಗೂ ಮಧುಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರೊ. ಗೋವಿಂದರಾಯ ಮಾತನಾಡಿ, ಪ್ರತಿಯೊಬ್ಬ ಪೋಷಕರು ಮಕ್ಕಳಿಗೆ ಹಣ, ಆಸ್ತಿ ಸಂಪಾದನೆ ಮಾಡದೆ ಶಿಕ್ಷಣ ಕೊಡಿಸುವ ಮೂಲಕ ಮಕ್ಕಳನ್ನು ಸಮಾಜದ ಆಸ್ತಿಯನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದರು.
ಶ್ರೀಮಂತಿಕೆಯನ್ನು ಹಣ, ಆಸ್ತಿ, ತೆಂಗು-ಅಡಿಕೆ ತೋಟಗಳ ಆಧಾರದ ಮೇಲೆ ಅಳೆಯುವ ಕಾಲ ಹೊಂದಿತ್ತು. ಆದರೆ ಇಂದು ಶಿಕ್ಷಣಕ್ಕೆ ಬಹಳ ಪ್ರಾಮುಖ್ಯತೆ ಇದೆ. ನಮ್ಮ ಶ್ರೀಮಂತಿಕೆಯನ್ನು ಶಿಕ್ಷಣದ ಆಧಾರದ ಮೇಲೆ ಅಳೆಯುವಂತಹ ಕಾಲದಲ್ಲಿ ನಾವಿದ್ದೇವೆ. ವಿದ್ಯೆಗಿಂತ ಶ್ರೀಮಂತಿಕೆ ಮತ್ತೊಂದಿಲ್ಲ. ಇದನ್ನು ಪೋಷಕರು, ಮಕ್ಕಳು ಸೇರಿದಂತೆ ಪ್ರತಿಯೊಬ್ಬರು ಅರಿತುಕೊಳ್ಳಬೇಕು ಎಂದರು.

ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೋಷಕರು ಮತ್ತು ಶಿಕ್ಷಕರ ಪ್ರೋತ್ಸಾಹ ಅತ್ಯಗತ್ಯ ಎಂದ ಅವರು, ಪ್ರಸ್ತುತ ಪ್ರತಿಯೊಬ್ಬರ ಬಳಿಯೂ ಹ್ಯಾಂಡ್ ಸೆಟ್ಗಳಿವೆ. ಹ್ಯಾಂಡ್ಸೆಟ್ ಇಲ್ಲದೆ ಬದುಕಿಲ್ಲ ಎಂಬ ಮಟ್ಟಕ್ಕೆ ತಲುಪಿದ್ದೇವೆ. ಆದರೆ ಮೈಂಡ್ ಸೆಟ್ನ್ನು ನಾವು ಸರಿಯಾಗಿ ಇಟ್ಟುಕೊಳ್ಳದಿದ್ದರೆ ಏನೆಲ್ಲಾ ತೊಂದರೆ, ಸಮಸ್ಯೆ ಅನುಭವಿಸಬೇಕಾಗುತ್ತದೆ ಎಂಬುದನ್ನು ಯಾರೂ ಮರೆಯಬಾರದು. ಹ್ಯಾಂಡ್ಸೆಟ್ ರಿಪೇರಿ ಮಾಡಿಸಬಹುದು. ಆದರೆ ನಮ್ಮ ಮೈಂಡ್ ಸೆಟ್ ಅನ್ನು ರಿಪೇರಿ ಮಾಡಿಸಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬ ಮಕ್ಕಳು ನಮ್ಮ ಮೈಂಡ್ ಸೆಟ್ನ್ನು ಸಮರ್ಪಕವಾಗಿ ಇಟ್ಟುಕೊಂಡು ಶಿಕ್ಷಣದ ಕಡೆಗೆ ಗಮನಹರಿಸಬೇಕು. ಇದರಿಂದ ಹೆತ್ತ ತಂದೆ-ತಾಯಿ ಹಾಗೂ ಕಲಿತ ಶಾಲೆಗೆ ಕೀರ್ತಿ ಬರುತ್ತದೆ ಎಂದರು.
ಮಕ್ಕಳು ಹತ್ತರಲ್ಲಿ ಹನ್ನೊಂದು ಆಗದೆ ಹನ್ನೊಂದರಲ್ಲಿ ಇನ್ನೊಂದು ಆಗಬೇಕು. ಆಗ ಮಾತ್ರ ಸಮಾಜದಲ್ಲಿ ಉತ್ತಮ ಹೆಸರು ಗಳಿಸಲು ಸಾಧ್ಯ ಎಂದು ಅವರು ತಿಳಿಸಿದರು.
ಪೋಷಕರು ಮಕ್ಕಳಿಗೆ ಶಿಕ್ಷಣ ಕೊಡಿಸಿ ಅವರ ಅಭಿವೃದ್ಧಿಯಲ್ಲಿ ಸಾರ್ಥಕತೆ ಕಾಣಬೇಕು ಎಂದು ಹೇಳಿದರು.
ಜವಹರ್ ನವೋದಯ ವಿದ್ಯಾಲಯ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಾ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ನೀಡುತ್ತಿದೆ. ಅದರಲ್ಲೂ ತುಮಕೂರು ನವೋದಯ ಶಾಲೆ ಉತ್ತಮವಾಗಿ, ಬಹಳ ವ್ಯವಸ್ಥಿತವಾಗಿ ಶಿಕ್ಷಣ ನೀಡುವ ಮೂಲಕ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸುತ್ತಿದೆ ಎಂದು ಅವರು ಪ್ರಶಂಸೆ ವ್ಯಕ್ತಪಡಿಸಿದರು.
ಜವಹರ್ ನವೋದಯ ವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದು ಹೆಮ್ಮೆಯ ಸಂಗತಿ ಎಂದರು.
ನವೋದಯ ವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಕಲಾ ಮಾತನಾಡಿ, ನಮ್ಮ ಶಾಲೆಯಲ್ಲಿ ಮಕ್ಕಳಿಗೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳನ್ನು ಕ್ರಮ ಬದ್ಧವಾಗಿ ನಡೆಸಲಾಗುತ್ತಿದೆ. ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸುವುದೇ ನಮ್ಮ ವಿದ್ಯಾಲಯದ ಪ್ರಮುಖ ಗುರಿಯಾಗಿದೆ ಎಂದರು.
