ಭಾರತೀಯ ಸಂವಿಧಾನವನ್ನು ಅನುಷ್ಠಾನಗೊಳಿಸಲು ಹೋರಾಡಿದ ಮಹನೀಯರನ್ನು ಸ್ಮರಿಸುವುದು ನಮ್ಮೆಲ್ಲರ ಆಧ್ಯ ಕರ್ತವ್ಯ 

Surya Pragathi Editor

ಭಾರತೀಯ ಸಂವಿಧಾನವನ್ನು ಅನುಷ್ಠಾನಗೊಳಿಸಲು ಹೋರಾಡಿದ ಮಹನೀಯರನ್ನು ಸ್ಮರಿಸುವುದು ನಮ್ಮೆಲ್ಲರ ಆಧ್ಯ ಕರ್ತವ್ಯ 



ಶಿರಾ : ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯವನ್ನು ಒದಗಿಸುವ ಉದ್ದೇಶದಿಂದಲೇ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ರವರು ಸಂವಿಧಾನವನ್ನು ರಚಿಸಿದ್ದಾರೆ, ಎಲ್ಲರೂ ಸಹ ಜಾತ್ಯತೀತ ಮನೋಭಾವನೆಯನ್ನು ರೂಡಿಸಿಕೊಂಡು ಅಭಿವೃದ್ಧಿಯತ್ತ ನಡೆಯೋಣ ಎಂದು ಶಿರಾ ತಾಲ್ಲೂಕಿನ ಯಲಿಯೂರು ಗ್ರಾಮ ಪಂಚಾಯಿತಿಯ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ವೆಂಕಟರವಣಪ್ಪ ಹೇಳಿದರು.
ಅವರು ಯಲಿಯೂರು ಗ್ರಾಮ ಪಂಚಾಯ್ತಿ ಆವರಣದಲ್ಲಿ ಏರ್ಪಡಿಸಿದ್ದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದರು.
ಗಣರಾಜ್ಯೋತ್ಸವವು ದೇಶದಲ್ಲಿ ಸಂಭ್ರಮಾಚರಣೆಯ ಹಬ್ಬವಾಗಿದೆ.ಸಂವಿಧಾನದ ಮೌಲ್ಯಗಳನ್ನು ಗೌರವಿಸುತ್ತಾ ಸಾಮಾಜಿಕ ಸಾಮರಸ್ಯ,ತ್ಯಾಗ, ಬಲಿದಾನಗಳಿಂದ ರಾಷ್ಟ್ರ ನಿರ್ಮಾಣಕ್ಕೆ ಕಂಕಣ ಬದ್ಧರಾಗಿರುವ ಎಲ್ಲರಿಗೂ ನಾವುಗಳು ಚಿರಋಣಿಗಳಾಗಬೇಕಿದೆ, ಸಂವಿಧಾನದ ಆಶಯಗಳನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಿದಾಗ ಮಾತ್ರ ಸಂವಿಧಾನ ರಚನಕಾರರ ಚಿಂತನೆಗಳನ್ನು ಗೌರವಿಸಿದಂತೆ ಆಗುವುದ.ಈ ನಿಟ್ಟಿನಲ್ಲಿ ಎಲ್ಲರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಯಲಿಯೂರು ಗ್ರಾಮಪಂಚಾಯ್ತಿ ಅಧ್ಯಕ್ಷರಾದ ಪುನೀತ್ ಕುಮಾರ್ ಧ್ವಜಾರೋಹಣ ನೆರೆವೆರಿಸುವ ಮೂಲಕ ಗೌರವ ಸಮರ್ಪಿಸಿದರು, ಗ್ರಾಮ ಪಂಚಾಯಿತಿ ಸದಸ್ಯರಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಮತ್ತು ಸರ್ಕಾರಿ ಶಾಲಾ ಮಕ್ಕಳಿಗೆ ಸೇರಿದಂತೆ ಗ್ರಾಮಸ್ಥರಿಗೆ 77ನೇ ಗಣರಾಜ್ಯೋತ್ಸವದ ಶುಭಾಷಯ ಕೋರಿದರು.

ಯಲಿಯೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾಮಚಂದ್ರ, ಸದಸ್ಯರಾದ ನವೀನ್ ವೈ. ಟಿ., ಸತೀಶ್ ಕುಮಾರ್ ವೈ. ಎಸ್., ಭಾಗ್ಯಮ್ಮ ರಂಗನಾಥ್, ಆಶಾ ಲೋಹಿತ್, ನಾಗವೇಣಿ ವೆಂಕಟರಾಮು, ಸಿದ್ದಗಂಗಮ್ಮ ಶ್ರೀನಿವಾಸ್, ಗಂಗಮ್ಮ ಹನುಮಂತಣ್ಣ , ಸುಷ್ಮಾ ಮೋಹನ್, ಶಿವಮ್ಮ ರಾಜಣ್ಣ, ರಾಮಣ್ಣ, ಲಕ್ಕಮ್ಮ ಗಂಗಣ್ಣ, ಗ್ರಾಮ ಪಂಚಾಯ್ತಿ ಪಿಡಿಒ ತುಳಸಿರಾಮ್ ಕಾರ್ಯದರ್ಶಿ ನಾಗರಾಜು, ಗ್ರಾಮ ಪಂಚಾಯ್ತಿ ಸಿಬ್ಬಂದಿ ವರ್ಗ, ಸರ್ಕಾರಿ ಶಾಲಾ ಶಿಕ್ಷಕರು, ಮಕ್ಕಳು ಮುಖಂಡರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

Share this Article
Leave a comment