Surya Pragathi Editor

ಗುಬ್ಬಿ ಸುದ್ದಿ

ಭಾರತ ಸಾರ್ವಭೌಮ ಗಣತಂತ್ರ ರಾಜ್ಯ :

ಎಸ್.ಡಿ.ಎಂ.ಸಿ ಅಧ್ಯಕ್ಷ ಸಂತೋಷ ಗುಬ್ಬಿ 

ಗುಬ್ಬಿ:- ಭಾರತದ ಸಂವಿಧಾನವನ್ನು 1949 ನವಂಬರ್ 26 ರಂದು ರಚಿಸಲಾಯಿತು. ಆದರೆ 1950 ಜನವರಿ 26 ರಂದು ಜಾರಿಗೆ ಬಂದಿತು ಈ ದಿನದಂದು ಭಾರತವು ತನ್ನನ್ನು ತಾನು ಸಾರ್ವಭೌಮ.ಪ್ರಜಾಪ್ರಭುತ್ವ.ಮತ್ತು ಗಣ ರಾಜ್ಯವೆಂದು ಘೋಷಿಸಿಕೊಂಡಿತು ಎಂದು ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಸಂತೋಷ್ ತಿಳಿಸಿದರು

ತಾಲೂಕಿನ ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಣನಕೆರೆ ಕಾಲೋನಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಜನವರಿ 26 ರಂದು ಗಣರಾಜ್ಯೋತ್ಸವ ದಿನದಂದು ಧ್ವಜಾರೋಹಣ ನೆರವೇರಿಸಿ ನಂತರ ಮಾತನಾಡಿದ ರವರು 1947 ರಲ್ಲಿ ಸ್ವತಂತ್ರ ಸಿಕ್ಕಿದರೂ ಕೂಡ ನಮ್ಮ ದೇಶಕ್ಕೆ ತನ್ನದೇ ಆದ ನಿಯಮಗಳ ಚೌಕಟ್ಟು ಇರಲಿಲ್ಲ. ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ನಮ್ಮ ಸಂವಿಧಾನವನ್ನು ರಚಿಸಲಾಯಿತು. 1950 ಜನವರಿ 26ರಂದು ಈ ಸಂವಿಧಾನವು ಜಾರಿಗೆ ಬಂದಿದ್ದರಿಂದ ಭಾರತವು ಒಂದು ಸರ್ವತಂತ್ರ.ಸ್ವತಂತ್ರ.ಗಣರಾಜ್ಯವಾಯಿತು. ಅಂದಿನಿಂದ ಈ ದಿನವನ್ನು ನಾವು ರಾಷ್ಟ್ರೀಯ ಹಬ್ಬವಾಗಿ ಆಚರಿಸುತ್ತಿದ್ದೇವೆ.
ನಮ್ಮ ಸಂವಿಧಾನವು ಜಗತ್ತಿನಲ್ಲಿ ಅತಿ ದೊಡ್ಡ ಲಿಖಿತ ಸಂವಿಧಾನವಾಗಿದೆ ಈ ನಮ್ಮ ಸಂವಿಧಾನದ ರಚನೆಗೆ ಒಟ್ಟು ಎರಡು ವರ್ಷ 11 ತಿಂಗಳು 18 ದಿನ ಬೇಕಾಯಿತು. ಹಾಗಾಗಿ
ಈ ದಿನವನ್ನು ಗಣ್ಯರಾಜ್ಯ ದಿನವೆಂದು ಆಚರಿಸಲಾಗುತ್ತಿದೆ ಎಂದರು

ಮುಖ್ಯ ಶಿಕ್ಷಕಿ ಶಿವಲೀಲಾ ಮಾತನಾಡಿ ನಮ್ಮ ಶಾಲೆಯಲ್ಲಿ ಪ್ರತಿ ವರ್ಷ ಗಣರಾಜ್ಯೋತ್ಸವ ದಿನವನ್ನು ಆಚರಿಸಲಾಗುತ್ತಿದೆ. ಪ್ರತಿ ವರ್ಷದಂತೆ ಶಾಲೆಯ ಮಕ್ಕಳನ್ನು ಗ್ರಾಮದ ಪ್ರಮುಖ ಬೀದಿಯಲ್ಲಿ ವಾದ್ಯಗೋಷ್ಠಿಯ ಮೂಲಕ ಸಂಚರಿಸಿ ತದನಂತರ ವಿದ್ಯಾರ್ಥಿಗಳಿಂದ ಭಾಷಣ ಹಾಗೂ ನೃತ್ಯ ನೆರವೇರುತ್ತದೆ.
ನಾವು ಈ ಸುಂದರವಾದ ನಾಡಲ್ಲಿ ಬದುಕುತ್ತಿದ್ದೇವೆ ಎಂದರೆ ಹಿಂದೆ ಮಹಾತ್ಮ ಗಾಂಧಿ.ಸುಭಾಷ್ ಚಂದ್ರ ಬೋಸ್. ಭಗತ್ ಸಿಂಗ್ ಮತ್ತು ಡಾ. ಬಿಆರ್ ಅಂಬೇಡ್ಕರ್ ಅವರಂತಹ ನೂರಾರು ಮಹಾನ್ ನಾಯಕರ ಶ್ರಮವಿದೆ ಅವರ ತ್ಯಾಗದ ಫಲವಾಗಿ ಇಂದು ನಾವು ಈ ಸುಂದರ ಭಾರತದಲ್ಲಿ ನೆಮ್ಮದಿಯಿಂದ ಇದ್ದೇವೆ ಎಂದರು.
ಈ ಕಾರ್ಯಕ್ರಮಕ್ಕೆ ಆಗಮಿಸಿದಂತಹ ಗ್ರಾಮಸ್ಥರು ಹಾಗೂ ಬಂಧುಗಳಿಗೆ ಲಘು ಉಪಹಾರವನ್ನು ಸಹ ಏರ್ಪಡಿಸಲಾಗುತ್ತದೆ ಎಂದು ತಿಳಿಸಿದರು‌.

ಸಹ ಶಿಕ್ಷಕರಾದ ರಮೇಶ್ ಮಾತನಾಡಿ ಜನವರಿ 26 ರಂದು ಪ್ರತಿ ವರ್ಷ ಗಣರಾಜ್ಯೋತ್ಸವ ದಿನವೆಂದು ಆಚರಿಸುತ್ತಿದ್ದೇವೆ, ಅದೇ ರೀತಿ ಎಲ್ಲಾ ಮಕ್ಕಳು ತಮ್ಮಲ್ಲಿ ಇರುವ ಪ್ರತಿಭೆಗಳನ್ನು ನೃತ್ಯದ ಮೂಲಕ ಹಾಗೂ ಭಾಷಣದ ಮೂಲಕ ಹೊರತರಲು ಸುವರ್ಣ ಸಂಭ್ರಮ ಹಾಗಾಗಿ ಪ್ರತಿ ವಿದ್ಯಾರ್ಥಿಗಳು ಪಾಠ ಪ್ರವಚನಗಳ ಮಧ್ಯದಲ್ಲಿ ಇಂತಹ ಕಲೆಗಳಿಗೆ ಪ್ರೋತ್ಸಾಹ ನೀಡಬೇಕು ಎಂದರು.

- Advertisement -
Ad imageAd image
- Advertisement -
Ad imageAd image

ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷರಾದ ಕಲಾವತಿ.
ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ನಾಗರತ್ನ.ಅಂಗನವಾಡಿ ಕಾರ್ಯದರ್ಶಿ ಪ್ರೇಮ, ಮಂಜುನಾಥ್ , ಪುಟ್ಟಯ್ಯ,.ಲಕ್ಕಮ್ಮ. ಶಾಲಾ ಅಡಿಗೆಯವರು ಮತ್ತು ಗ್ರಾಮಸ್ಥರು ವಿದ್ಯಾರ್ಥಿಗಳು ಹಾಜರಿದ್ದರು.

Share this Article
Leave a comment