ಕಲ್ಲು ಗಣಿಗಾರಿಕೆ ನಡೆಸಲು ಅನುಮತಿ, ನೀಡುವುದನ್ನ ವಿರೋಧಿಸಿ ತಹಸಿಲ್ದಾರ್ ಕಚೇರಿಗೆ ರೈತರು ಮುತ್ತಿಗೆಯನ್ನ  ಹಾಕಿ ಪ್ರತಿಭಟನೆ

Surya Pragathi Editor
3 Min Read

ಕುಣಿಗಲ್ : ಕಲ್ಲು ಗಣಿಗಾರಿಕೆ ನಡೆಸಲು ಅನುಮತಿ, ನೀಡುವುದನ್ನ ವಿರೋಧಿಸಿ ತಹಸಿಲ್ದಾರ್ ಕಚೇರಿಗೆ ರೈತರು ಮುತ್ತಿಗೆಯನ್ನ  ಹಾಕಿ ಪ್ರತಿಭಟನೆ ನಡೆಸಿದರು.

 ತಾಲೂಕಿನ ಹುಲಿಯೂರುದುರ್ಗ ಹೋಬಳಿ ಉಜ್ಜಿನಿ  ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರು ಮತ್ತು ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ  ಹಿತ್ತಲಪುರ ಗ್ರಾಮದ ಸರ್ವೆ ನಂಬರ್ 52 ರಲ್ಲಿ ಕಲ್ಲು ಗಣಿಗಾರಿಕೆ ನಡಿಸುವುದನ್ನು  ವಿರೋಧಿಸಿ ಪ್ರತಿಭಟನೆ ನಡೆಸಿದರು ಈ ಸಂದರ್ಭದಲ್ಲಿ ರೈತ ಮುಖಂಡರು ಆಮ್ ಆದ್ವಿ ಪಕ್ಷದ ಜಿಲ್ಲಾಧ್ಯಕ್ಷರು ಆದ ಎಚ್ಎ ಜಯ ರಾಮಯ್ಯ ಮಾತನಾಡಿ  ಉಜ್ಜನಿ ಗ್ರಾಮ ಪಂಚಾಯಿತಿಯ ಇತ್ತಲಪುರ ಗ್ರಾಮದ ಸರ್ವೆ ನಂಬರ್ 52 ರ ಅಯ್ಯನ ಗುಡ್ಡೆಯಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಈಗಾಗಲೇ ಜಿಲ್ಲಾ ಗಣಿ ಅಧಿಕಾರಿ ಉಪ ವಿಭಾಗಾಧಿಕಾರಿ ತಹಸಿಲ್ದಾರ್ ಕಂದಾಯ ಅಧಿಕಾರಿಗಳು  ಪರಿಶೀಲನೆ ನಡೆಸಿದ್ದು ಈ ಸ್ಥಳವು ಐತಿಹಾಸಿಕ ಪಾರಂಪರಿಕ ಹಿನ್ನೆಲೆ ಉಳ್ಳದ್ದಾಗಿದ್ದು ಸಾದರು ಸಂತರು ಇಲ್ಲಿ ನೆಲೆಸಿದ್ದರು ಎಂಬ ಕುರುಹುಗಳಿದ್ದು ಗುಡ್ಡೆಯಲ್ಲಿ ಪುರಾತನ ಗುಹೆ ಕಲ್ಯಾಣಿ ಇದ್ದು ಪ್ರತಿ ವರ್ಷವೂ ಮಕರ ಸಂಕ್ರಾಂತಿ ಹಬ್ಬದೊಂದು ಸಾವಿರಾರು ಸಂಖ್ಯೆಯಲ್ಲಿ ರೈತರು ಮಹಿಳೆಯರು ಪೂಜೆ ಪುರಸ್ಕಾರಗಳನ್ನ ನಡೆಸುತ್ತಾ ಅಯ್ಯನ ಗುಡ್ಡೆಯಿಂದ ಹೇಮಗಿರಿ ವರದರಾಜು ಸ್ವಾಮಿ ದೇವಾಲಯಕ್ಕೆ ನೇರ ಸಂಪರ್ಕವಿದ್ದು ಈ ಪ್ರದೇಶವು ಐತಿಹಾಸಿಕ ಹಿನ್ನೆಲೆ ಉಳ್ಳದ್ದಾಗಿದೆ ಹಾಗೂ ಈ ಭಾಗದಲ್ಲಿ ಸುತ್ತಲು ಸಾವಿರಾರು ಎಕರೆ ಪ್ರದೇಶದಲ್ಲಿ ರೈತರು ರೇಷ್ಮೆ ಅಡಿಕೆ ತೆಂಗು ಬಾಳೆ ರಾಗಿ ಬತ್ತ ಬೆಳೆಯುತ್ತಿದ್ದು ಕೃಷಿಯನ್ನೇ ನಂಬಿರುವ ರೈತರ ಜೀವನವು ಈ ಕಲ್ಲು ಗಣಿಗಾರಿಕೆಯಿಂದ ನಾಶವಾಗುತ್ತದೆ ಪಕ್ಕದಲ್ಲಿ ಶಿವನಹಳ್ಳಿ ಗ್ರಾಮದ ಕೆರೆ ಇದ್ದು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಜಾಗವು ಕಾಡು ಪ್ರಾಣಿಗಳಾದ ಚಿರತೆ ನವಿಲು ಕರಡಿ ನರಿಗಳು ಕಾಡಂದಿಗಳು ವಾಸ ಮಾಡುತ್ತವೆ ಇಂತಹ ಇತಿಹಾಸ ಪರಂಪರೆ ಉಳ್ಳ ಜಾಗದಲ್ಲಿ ಯಾವುದೇ ಕಾರಣಕ್ಕೂ ಗಣಿಗಾರಿಕೆ ನಡೆಸಬಾರದೆಂದು ಒತ್ತಾಯ ಪಡಿಸಿದರು

 ಕರ್ನಾಟಕ ರಾಜ್ಯ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಆನಂದ್ ಪಟೇಲ್ ಹುಲಿಕಟ್ಟೆ ಮಾತನಾಡುತ್ತಾ ಇತ್ತಲಪುರ ಗ್ರಾಮದ ಸುತ್ತಮುತ್ತ ಐತಿಹಾಸಿಕ ದೇವಾಲಯಗಳು ಇದ್ದು ಸುತ್ತಲೂ ಅರಣ್ಯ ಪ್ರದೇಶ ಬಿದ್ದು ಕಾಣದ ಕೈಗಳು ಈ ಒಂದು ಗಣಿಗಾರಿಕೆ ನಡೆಸಲು ಬೇನಾಮಿ ಹೆಸರಿನಲ್ಲಿ ಮುಂದಾಗುತ್ತಿರುವುದು ಈ ತಾಲೂಕಿನ ಎಲ್ಲಾ ಪ್ರದೇಶಗಳಲ್ಲೂ ಗಣಿಗಾರಿಕೆ ನಡೆಸುವ ಮೂಲಕ ಅಕ್ರಮ ವಸಿಗುತ್ತಿದ್ದಾರೆ ಇದಕ್ಕೆ ತಾಲೂಕಿನ ರೈತರು ತಮ್ಮ ಹೊಲಗದ್ದೆ ಮನೆ ಮಠಗಳನ್ನು ರಕ್ಷಿಸಿಕೊಳ್ಳಲು ಮುಂದಾಗಬೇಕು ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿರುವ ಶಿವನಹಳ್ಳಿ ಕೆರೆ ಇದ್ದು ಜಾನುವಾರುಗಳು ಇಂತಹ ಭವ್ಯವಾದ ಅಯ್ಯನ ಗುಡ್ಡೆಯನ್ನು ಆಶ್ರಯ ಮಾಡಿಕೊಂಡಿರುತ್ತಾರೆ ಈ ಸ್ಥಳದಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ನೀಡಿದರೆ ಇತ್ತಲಪುರ ಉಜ್ಜಿನಿ ಬಿಜಿಕೊಪ್ಪಲು ಬೆಣಚಕಲ್ಲು ಗ್ರಾಮಗಳ ಸಾವಿರಾರು ರೈತರಿಗೆ ಜಾನುವಾರುಗಳಿಗೆ ಪರಿಸರ ಮಾಲಿನ್ಯ ಉಂಟಾಗುತ್ತದೆ ಎಂದು ದೂರಿದರು 

ತಾಲೂಕು ಜೆಡಿಎಸ್ ಅಧ್ಯಕ್ಷ ಬಿ ಎನ್ ಜಗದೀಶ್ ನಾಗರಾಜಯ್ಯ ಮಾತನಾಡುತ್ತಾ ಈ ಭಾಗದ ಪರಿಸರ ಮಾಲಿನ್ಯ ಕಾಡು ನಾಶ ಉಂಟಾಗುತ್ತದೆ ಈಗಾಗಲೇ ಬೀಸಿ ಗೌಡ ದೊಡ್ಡಿ ಗ್ರಾಮದಲ್ಲಿ ಕಲ್ಲು ಗಣಿಗಾರಿಕೆ ಕಾರಣದಿಂದ ನೂರಾರು ಮಂದಿ ವಿವಿಧ ರೋಗಗಳಿಗೆ ತುತ್ತಾಗಿ ಅದರ ನೈರ್ಮಲ್ಯ ಗಣಿಗಾರಿಕೆ ಶಬ್ದಕ್ಕೆ ಹೆದರಿ ಮಕ್ಕಳು ಒಯ್ಯುವರುದ್ದರೂ ಮಹಿಳೆಯರು ನಾನಾ ಬಗಿಯ ಕಾಯಿಲೆಗಳಿಗೆ ತುತ್ತಾಗುತ್ತಿದ್ದು ಇಂತಹ ಗಂಭೀರ ಸಮಸ್ಯೆ ಇರುವ ಕಾರಣ ಯಾವುದೇ ಕಾರಣಕ್ಕೂ ಇತ್ತಲಪುರ ಗ್ರಾಮದ ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಅವಕಾಶ ನೀಡುವುದಿಲ್ಲ  ಎಂತಹ ಹೋರಾಟಕ್ಕೂ ತಾವು ಸದಾ ಸಿದ್ಧ ಇರುವುದಾಗಿ ಎಚ್ಚರಿಕೆ ನೀಡಿದರು 

 ತಹಸಿಲ್ದಾರ್ ರಶ್ಮಿಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರೊಂದಿಗೆ ಮಾತನಾಡುತ್ತಾ ಈ ಭಾಗದಲ್ಲಿ ಕಲ್ಲು ಗಣಿಗಾರಿಕೆ  ನಡಿಸಲು ಒಂದು ಅರ್ಜಿ ಬಂದಿದ್ದು ಇದನ್ನು ಪರಿಶೀಲಿಸಲು ಜಿಲ್ಲಾ ಗಣಿ ಅಧಿಕಾರಿ ಹಾಗೂ ಉಪವಿಭಾಗಾಧಿಕಾರಿ  ತಹಸೀಲ್ದಾರ್ ಕಂದಾಯ ಇಲಾಖೆಯ ಸರ್ವೆರು ಸ್ಥಳ ಪರಿಶೀಲನೆ ನಡೆಸಲು ಹೋಗಿದ್ದು ಇನ್ಯಾವುದೇ ದುರುದ್ದೇಶದಿಂದ ಹೋಗಿರುವುದಿಲ್ಲ ಜೊತೆಗೆ ಗಣಿಗಾರಿಕೆ ನಡೆಸಲು 12 ಅರ್ಜಿಗಳು ಈಗಾಗಲೇ ಬಂದಿರುವುದರಿಂದ ಉಜ್ಜಿನಿ ಗ್ರಾಮದ ಅಕ್ಕ ಪಕ್ಕ ಯಾವುದೇ ಗಣಿಗಾರಿಕೆ ನಡೆಸಲು  ಚೌಡೇಶ್ವರಿ ದೇವರ ನಂಬಿಕೆಯಿಂದ ಯಾವುದೇ ಅನುಮತಿ ನೀಡುವುದಿಲ್ಲ ಎಂದು ಭರವಸೆ ನೀಡಿದರು

 ಈ ಸಂದರ್ಭದಲ್ಲಿ ಚಿಂತಕ ಹೋರಾಟಗಾರ ಜಿಕೆ ನಾಗಣ್ಣ. ಉಜ್ಜಿನಿ ಚನ್ನೇಗೌಡ. ವಕೀಲಾ ಶಿವರಾಂ. ರೈತ ಸಂಘದ ವೆಂಕಟೇಶ್ .ಜೆಡಿಎಸ್ ಪಕ್ಷದ ವಕ್ತಾರ ತರೀಕೆರೆ ಪ್ರಕಾಶ್. ಕೊಂಡಯ್ಯ. ಗವಿರಾಜ್. ಬೋರಲಿಂಗಯ್ಯ. ಅರುಣ್. ಕುಮಾರ್. ರಾಮಣ್ಣ. ಕೃಷ್ಣಪ್ಪ. ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು

Share this Article
Leave a comment