ಧಾರ್ಮಿಕ ಸಂಸ್ಕೃತಿ ಪರಂಪರೆ ಉಳಿಸಿ ಬೆಳೆಸುವಲ್ಲಿ ಮಠಗಳ ಪಾತ್ರ ಮಹತ್ವದ್ದು. – ಶ್ರೀ ನಂಜಾವಧೂತ ಸ್ವಾಮೀಜಿ

Surya Pragathi Editor
2 Min Read

ನವೀನ್ ಶಿರಾ

ಶಿರಾ : ಪ್ರತಿ ವರ್ಷದಂತೆ ಶ್ರೀ ಓಂಕಾರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಧಾರ್ಮಿಕ ವಿಧಿ ವಿಧಾನದಂತೆ 03.01.26 ರಿಂದ 15.01.26 ರವರಿಗೆ ನಡೆಯಲಿದೆ. ಮಠಮಾನ್ಯಗಳು ಜನರಿಗೋಸ್ಕರ ತಮ್ಮ ಕಾರ್ಯವಿಧಾನ ರೂಪಿಸುತ್ತವೆ ಎಂದು ಸ್ಪಟಿಕಪುರಿ ಮಹಾ ಸಂಸ್ಥಾನ, ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಸ್ವಾಮೀಜಿ ಹೇಳಿದರು. ತಾಲೂಕಿನ ಪಟ್ಟನಾಯಕನಹಳ್ಳಿ ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಮಡಿತೇರು ಕಟ್ಟುವ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಾತ್ರಾ ಮಹೋತ್ಸವದಲ್ಲಿ ಜಗತ್ತನ್ನೇ ಮರೆತು ಮುಗ್ಧರಾಗುವಂತಹ ಸದಾಾವಕಾಶ ಭಗವಂತ ಕಲ್ಪಿಸಲಿದ್ದಾನೆ, ತೇರು ಹೇಗೆ ಸರಾಗವಾಗಿ ಹರಿಯುವುದು ಅದೇ ರೀತಿ ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿರುವ ಕಷ್ಟ ಕಾರ್ಪಣ್ಯಗಳು ದೂರವಾಗಿ ಒಳ್ಳೆಯ ದಿನಗಳು ಲಭಿಸಲಿ ಎಂದು ಶ್ರೀ ಓಂಕಾರೇಶ್ವರ ಸ್ವಾಮಿಯಲ್ಲಿ ಬೇಡುವ ಸುಸಂದರ್ಭ ಭಕ್ತರಿಗೆ ಸಿಗಲಿದೆ. ಪ್ರತಿಯೊಬ್ಬರಿಗೂ ಒಳ್ಳೆಯದನ್ನೇ ಬಯಸಿದರೆ, ತಮಗೂ ಕೂಡ ಭಗವಂತ ಒಳ್ಳೆಯದನ್ನೇ ಕಳುಹಿಸಲಿದ್ದಾನೆ ಎಂದರು.


ಜ 9.ಐತಿಹಾಸಿಕ ಪ್ರಸಿದ್ಧ ಶ್ರೀ ಓಂಕಾರೇಶ್ವರ ಸ್ವಾಮಿ ಕಲ್ಲುಗಾಲಿ ರಥೋತ್ಸವ : ಸ್ಪಟಿಕಪುರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಸ್ವಾಮೀಜಿಗಳ ದಿವ್ಯ ನೇತೃತ್ವದಲ್ಲಿ ಶ್ರೀ ಓಂಕಾರೇಶ್ವರ ಸ್ವಾಮಿ ಕಲ್ಲುಗಾಲಿ ರಥೋತ್ಸವ ವಿಜೃಂಭಣೆಯಿಂದ ನೆರವೇ ರಲಿದ್ದು, ಆಂಧ್ರ ಪ್ರದೇಶ ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳ ಸಾವಿರಾರು ಭಕ್ತರು ಕಲ್ಲುಗಾಲಿ ರಥೋತ್ಸವದಲ್ಲಿ ಪಾಲ್ಗೊಂಡು ಶ್ರೀ ಓಂಕಾರೇಶ್ವರ ಸ್ವಾಮಿಯ ದರ್ಶನ ಪಡೆದಿದ್ದಾರೆ.


ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ : ನೂತನ ತಂತ್ರಜ್ಞಾನ ಆಧಾರಿತ ಕೃಷಿ ಚಟುವಟಿಕೆಯಲ್ಲಿ ರೈತ ತೊಡಗಿಸಿಕೊಳ್ಳಬೇಕು ಎಂಬ ದೂರ ದೃಷ್ಟಿ ಪರಿಕಲ್ಪನೆ ಯೊಂದಿಗೆ ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ ಪ್ರಾತ್ಯಕ್ಷಿಕೆ ಬೆಳೆಯ ಮೂಲಕ ಕಡಿಮೆ ನೀರು ಮತ್ತು ಕಡಿಮೆ ಖರ್ಚು ಪ್ರಮಾಣದಲ್ಲಿ ಕೈಗೊಳ್ಳುವ ಕೃಷಿಗಳ ಬಗ್ಗೆ ಸಮಗ್ರ ಮಾಹಿತಿಯ ಕೃಷಿ ಪ್ರದರ್ಶನ ಶ್ರೀ ಮಠ ಕಳೆದ 25. ವರ್ಷದಿಂದ ಏರ್ಪಡಿಸುತ್ತಿರುವುದು ಶ್ರೀ ನಂಜಾವಧೂತ ಶ್ರೀಗಳ ರೈತಪರ ಕಾಳಜಿಯನ್ನು ಸಾಕ್ಷಿಕರಿಸುತ್ತದೆ.


ಈ ಸಂದರ್ಭದಲ್ಲಿ ಶ್ರೀ ಮಠದ ಸಾರ್ವಜನಿಕ ಸಂಪರ್ಕಾಧಿಕಾರಿ ತಮ್ಮಣ್ಣ, ಮಹೇಶ್, ನಾದೂರು ಗ್ರಾಮ ಪಂಚಾಯತಿ ಸದಸ್ಯರಾದ ವಿಜಯಕುಮಾರ್, ಮಂಜುನಾಥ ಸ್ವಾಮಿ, ಮೆಡಿಕಲ್ ಉಮೇಶ್, ರಾಜಣ್ಣ ಸೇರಿದಂತೆ ಹಲವಾರು ಭಕ್ತರು ಉಪಸ್ಥಿತರಿದ್ದರು.

Share this Article
Leave a comment