
ತುಮಕೂರು : ತುಮಕೂರು ಗ್ರಾಮಾಂತರ, ಹೆಬ್ಬೂರು ಹೋಬಳಿ, ನಾಗವಲ್ಲಿ ಗ್ರಾಮ ಪಂಚಾಯಿತಿ ಕಛೇರಿಯ ಮುಂಭಾಗದಲ್ಲಿ ಕರುನಾಡ ವಿಜಯಸೇನೆ ವತಿಯಿಂದ ಬೃಹತ್ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರವನ್ನು ಬೆಂಗಳೂರಿನ ಆರ್.ವಿ.ಎಸ್. ಆರ್ಯುವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಎಂ.ಎಸ್.ರಾಮಯ್ಯ ಮೆಮೋರಿಯಲ್ ಆಸ್ಪತ್ರೆ ಇವರುಗಳ ಸಹಯೋಗದಲ್ಲಿ ದಿನಾಂಕ 20-12-2025ರಂದು ಶನಿವಾರ ಆಯೋಜಿಸಲಾಗಿದೆಂದು ಕರುನಾಡ ವಿಜಯಸೇನೆ ಹೆಬ್ಬೂರು ಹೋಬಳಿ ಘಟಕದ ಅಧ್ಯಕ್ಷರಾದ ಶ್ರೀನಿವಾಸ್ (ಸೋಪನಹಳ್ಳಿ) ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿರುತ್ತಾರೆ.
ಸಾರ್ವಜನಿಕರು ಈ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಧುಮೇಹ ಪರೀಕ್ಷೆ, ಬಿಪಿ ಪರೀಕ್ಷೆ, ನೇತ್ರ ತಪಾಸಣೆ, ಸುಟ್ಟ ಗಾಯಗಳ ತಪಾಸಣೆ, ಮೂತ್ರಪಿಂಡದ ತಪಾಸಣೆ, ಸಾಮಾನ್ಯ ರೋಗ ಪರೀಕ್ಷೆ, ನರರೋಗ ತಪಾಸಣೆ, ಮೂಳೆ & ಕೀಲು ನೋವುಗಳ ತಪಾಸಣೆ, ಹೃದ್ರೋಗ ತಪಾಸಣೆ, ಸ್ತಿçà ರೋಗಗಳು, ಕಿವಿ, ಮೂಗು, ಗಂಟಲು ತಪಾಸಣೆ ಸೇರಿದಂತೆ ಇನ್ನೂ ಹತ್ತು ಅನೇಕ ಖಾಯಿಲೆಗಳಿಗೆ ನುರಿತ ವೈದ್ಯರುಗಳಿಂದ ತಪಾಸಣೆ ಮತ್ತು ಸ್ಥಳದಲ್ಲಿಯೇ ಉಚಿತವಾಗಿ ಔಷಧಿಗಳನ್ನು ವಿತರಿಸಲಾಗುವುದು ಸಾರ್ವಜನಿಕರು ಶನಿವಾರ ಬೆಳಿಗ್ಗೆ 9.00 ರಿಂದ ಮಧ್ಯಾಹ್ನ 2.00 ರವರೆಗೆ ಇದರ ಸದುಪಯೋಗವನ್ನು ಪಡಿಸಿಕೊಳ್ಳಬಹುದಾಗಿದೆ, ಆರೋಗ್ಯ ತಪಾಸಣೆ ಆಗಮಿಸುವವರಿಗೆ ಊಟದ ವ್ಯವಸ್ಥೆಯನ್ನು ಸಹ ಏರ್ಪಡಿಸಲಾಗಿದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಕರುನಾಡ ವಿಜಯಸೇನೆ ಹೆಬ್ಬೂರು ಹೋಬಳಿ ಘಟಕದ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಉಪಾಧ್ಯಕ್ಷರಾದ ನವನೀತ್ ಕುಮಾರ್, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಸೇಠು, ಕಾರ್ಯದರ್ಶಿಗಳಾದ ವಸೀಂ ಖಾನ್, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
