ಗುಬ್ಬಿ ಭರತ್
ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಸಾಮಾಜಿಕ ಜಾಲತಾಣ ಕಾರ್ಯಾಗಾರದ ಸಭೆಯನ್ನು ಆಯೋಜನ ಮಾಡಲಾಗಿತ್ತು.
21.12.2025 ಗುಬ್ಬಿ ಸುದ್ದಿ 01
ರಾಜ್ಯದಲ್ಲಿ ಜೆಡಿಎಸ್ ಪಕ್ಷವು ಹಮ್ಮಿಕೊಳ್ಳುವ ಕಾರ್ಯಕ್ರಮ ಹಾಗೂ ಯೋಜನೆಗಳ ಬಗ್ಗೆ ಮಾಹಿತಿಯನ್ನು ಸಾಮಾಜಿಕ ಜಾಲತಾಣದ ಮೂಲಕ ತಾಲೂಕಿನ ಜನರಿಗೆ ತಿಳಿಸುವ ಕಾರ್ಯಗಾರವನ್ನು ಮಾಡಲಾಗುವುದು ಎಂದು ಜೆಡಿಎಸ್ ಸಾಮಾಜಿಕ ಜಾಲತಾಣ ಕಾರ್ಯಾಗಾರದ ರಾಜ್ಯಾಧ್ಯಕ್ಷ ಚಂದನ್ ತಿಳಿಸಿದರು.
ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಆಯೋಜಿಸಲಾಗಿದ ಜೆಡಿಎಸ್ ಯುವ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು,ಪ್ರಾರಂಭದಲ್ಲಿ ಸುಮಾರು ನೂರು ವಿಧಾನ ಸಭಾ ಕ್ಷೇತ್ರದಲ್ಲಿ ಈ ಕಾರ್ಯಾಗಾರವನ್ನು ಅಯೋಜನೆ ಮಾಡಲಾಗಿದ್ದು, ಅದರಲ್ಲಿ ಗುಬ್ಬಿ ಕ್ಷೇತ್ರವು ಒಂದಾಗಿದೆ. ರಾಜ್ಯದಲ್ಲಿ ಜೆಡಿಎಸ್ ಪಕ್ಷ ಸಂಘಟನೆಯ ಮೂಲಕ ಮಾನ್ಯ ಕುಮಾರಸ್ವಾಮಿ ಅವರು ಮಾಡುತ್ತಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ತಾಲೂಕಿನ ಜನತೆಗೆ ತಿಳಿಸಲಾಗುವುದು ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಆರ್ ಸಿ ಅಂಜಿನಪ್ಪ ಮಾತನಾಡಿ, ಎಚ್ ಡಿ ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾದ ಮೇಲೆ ದೇಶಾದ್ಯಂತ ಪ್ರವಾಸ ಮಾಡಿ ಹಲವು ಕಾರ್ಖಾನೆಗಳನ್ನು ಪುನಶ್ಚೇತನ ಗೊಳಿಸುತ್ತಿದ್ದು ಅದರಲ್ಲಿ ನಮ್ಮ ರಾಜ್ಯದ ಭದ್ರಾವತಿಯ ಉಕ್ಕಿನ ಕೈಗಾರಿಕೆಯನ್ನು ಆರಂಭ ಮಾಡಿರುವುದು ಸಂತಸ ತಂದಿದೆ. ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಸಂಘಟನೆ ಮಾಡುವುದರ ಮೂಲಕ ಅತಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವನ್ನು ಸಾಧಿಸಿ ಮುಂದಿನ ಅವಧಿಗೆ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿಯನ್ನಾಗಿ ನೋಡುವುದೇ ನಮ್ಮ ಗುರಿಯಾಗಿದೆ ಈ ಸಾಮಾಜಿಕ ಜಾಲತಾಣ ಕಾರ್ಯಕ್ರಮ ಮೂಲಕ ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನ ಒಟ್ಟುಗೂಡಿಸಿಕೊಂಡು ಸಂಘಟನೆ ಮಾಡಲಾಗುವುದು ಎಂದರು.
ಜೆಡಿಎಸ್ ಮುಖಂಡ ಬಿ ಎಸ್ ನಾಗರಾಜು ಮಾತನಾಡಿ, ಗುಬ್ಬಿ ಕ್ಷೇತ್ರದಲ್ಲಿ ಕಳೆದ 25 ವರ್ಷಗಳಿಂದ ಯಾವುದೇ ಶಾಶ್ವತವಾದ ಅಭಿವೃದ್ಧಿ ಕೆಲಸ ನಡೆದಿಲ್ಲ ಇದರಿಂದ ಕ್ಷೇತ್ರದ ಜನರು ಉತ್ತಮ ಸೌಲಭ್ಯಗಳನ್ನ ಪಡೆದುಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ ಪ್ರಸ್ತುತ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಸೇಮ್ ಕುರುಚಿಗಾಗಿ ಪರಸ್ಪರ ಪೈಪೋಟಿ ನಡೆಯುತ್ತಿದ್ದು ಈ ಸರ್ಕಾರದಿಂದ ಕ್ಷೇತ್ರದ ಅಭಿವೃದ್ಧಿಯನ್ನು ಕಾಣಲು ಕಷ್ಟ ಸಾಧ್ಯವಾಗಿದೆ. ಆಡಳಿತ ಸರ್ಕಾರದ ಲೋಪ ದೋಷಗಳನ್ನು ನಮ್ಮ ಸಾಮಾಜಿಕ ಜಾಲತಾಣ ಕಾರ್ಯಗಾರದ ಮೂಲಕ ಕ್ಷೇತ್ರದ ಜನರಿಗೆ ಮನವರಿಕೆ ಮಾಡಿಕೊಡಲಾಗುವುದು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಸುಮಾರು 43,000 ಮತಗಳನ್ನು ನೀಡಿರುವ ಜನತೆಯ ಜೊತೆಗೆ ಮತ್ತಷ್ಟು ಯುವ ಸಮೂಹವನ್ನು ನಮ್ಮ ಜೆಡಿಎಸ್ ಪಕ್ಷಕ್ಕೆ ಸದಸ್ಯತ್ವ ಅಭಿಯಾನದ ಮೂಲಕ ಸುಮಾರು 25 ಸಾವಿರಕ್ಕೂ ಹೆಚ್ಚು ಸದಸ್ಯತ್ವವನ್ನು ನೀಡುವ ಗುರಿಯನ್ನು ಹೊಂದಲಾಗಿದೆ ಎಂದರು.
ಎ ಪಿ ಎಂ ಸಿ ಮಾಜಿ ಅಧ್ಯಕ್ಷ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ, ಜೆಡಿಎಸ್ ಪಕ್ಷದಲ್ಲಿ ಈ ಕಾರ್ಯಕ್ರಮವು ಒಂದು ವಿನೂತನವಾಗಿದ್ದು ಪಕ್ಷ ಸಂಘಟನೆಯನ್ನು ಮಾಡಲು ಬಹಳ ಸಹಕಾರಿಯಾಗಿದೆ ಈ ಸೌಲಭ್ಯವನ್ನು ಕಾರ್ಯಕರ್ತರು ಮುಖಂಡರುಗಳು ಯಶಸ್ವಿಯಾಗಿ ಬಳಸಿಕೊಂಡು ಕ್ಷೇತ್ರದ ಎಲ್ಲಾ ಜನರಿಗೂ ಜೆಡಿಎಸ್ ಪಕ್ಷದ ಕಾರ್ಯಕ್ರಮಗಳನ್ನ ಹಾಗೂ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಯುವ ಸಮೂಹವನ್ನ ಸಂಘಟಿತರನ್ನಾಗಿ ಮಾಡುವ ಗುರಿಯನ್ನು ಹೊಂದಿದೆ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿಯವರನ್ನ ಮುಖ್ಯಮಂತ್ರಿಯಾಗಿ ಹಾಗೂ ಗುಬ್ಬಿ ಕ್ಷೇತ್ರದಲ್ಲಿ ಮುಖಂಡ ನಾಗರಾಜು ಅವರನ್ನು ಶಾಸಕರಾಗಿ ನೋಡುವಂತಹ ಗುರಿಯನ್ನು ಹೊಂದಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ವಕೀಲರ ಸಂಘದ ಅಧ್ಯಕ್ಷೆ ರೇಖಾ,ಮುಖಂಡರಾದ ಯೋಗಾನಂದ ಕುಮಾರ್,ವಕೀಲ ಶಿವಣ್ಣ, ಎಂ ಎಚ್ ಪಟ್ಟಣ ಲಕ್ಷ್ಮಿಕಾಂತ್,ದಿನೇಶ್, ಕಂಠಿ, ಕೆಂಪರಾಜು,ಸೇರಿದಂತೆ ಹಲವು ಯುವ ಕಾರ್ಯಕರ್ತರು ಭಾಗವಹಿಸಿದ್ದರು.
[12/21, 8:59 PM] Life is Like A Cricket: ವರದಿ ಗುಬ್ಬಿ ಭರತ್
ಪಲ್ಸ್ ಪೋಲಿಯೊ ಲಸಿಕ ವಿತರಣಾ ಕಾರ್ಯಕ್ರಮ
21.12.2025 ಗುಬ್ಬಿ ಸುದ್ದಿ 02: ಮಕ್ಕಳ ಅಂಗವಿಕಲತೆಯನ್ನು ಹೋಗಲಾಡಿಸಲು ಹುಟ್ಟಿನಿಂದ ಐದು ವರ್ಷದ ಒಳಗಿನ ಎಲ್ಲಾ ಮಕ್ಕಳಿಗೂ ಪಲ್ಸ್ ಪೋಲಿಯೋ ಲಸಿಕೆಯ ಹನಿಯನ್ನು ಪ್ರತಿಯೊಬ್ಬರು ಹಾಕಿಸಬೇಕು ಎಂದು ಅಂಗನವಾಡಿ ಶಿಕ್ಷಕಿ ಶಿವರತ್ನಮ್ಮ ತಿಳಿಸಿದರು.
ತಾಲೂಕಿನ ಕಸಬಾ ಹೋಬಳಿ ಲಕ್ಕೇನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮದ ಅಂಗವಾಗಿ ಮಕ್ಕಳಿಗೆ ಪೋಲಿಯೋ ಲಸಿಕೆ ವಿತರಣ ಅಂಗವಾಗಿ ಮಾತನಾಡಿದ ಅವರು ಪೋಷಕರು ತಮ್ಮ ಮಕ್ಕಳಿಗೆ ತಪ್ಪದೇ ಪೋಲಿಯೋ ಲಸಿಕೆಯನ್ನು ಹಾಕಿಸಬೇಕು ಇದರಿಂದ ಮಕ್ಕಳಿಗೆ ಮುಂದೆ ಆಗುವಂತಹ ಅಂಗವಿಕಲತೆಯನ್ನ ತಡೆಯಬಹುದು. ಎರಡು ದಿನಗಳ ಕಾಲ ಮನೆ ಮನೆಗೆ ಭೇಟಿ ನೀಡಲಿದ್ದು ಆ ಸಂದರ್ಭದಲ್ಲಿಯೂ ಸಹ ಲಸಿಕೆ ಹಾಕಿಸದ ಮಕ್ಕಳಿಗೆ ತಪ್ಪದೆ ಪೋಲಿಯೋ ಲಸಿಕೆಯನ್ನು ಹಾಕಿಸಬೇಕು ಎಂದು ತಿಳಿಸಿದರು.
ಬೆಳಿಗ್ಗೆಯಿಂದಲೇ ಪೋಷಕರು ಸಾಲುಗಟ್ಟಾಗಿ ನಿಂತು ತಮ್ಮ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆಯನ್ನು ಹಾಕಿಸುವ ದೃಶ್ಯ ಕಂಡು ಬಂತು.
ಉಪ್ಪರುಪಾಳ್ಯ, ಚಿಕ್ಕನ್ ನೆಟ್ಕುಂಟೆ ಗೊಲ್ಲರಹಟ್ಟಿ, ಲಕ್ಕೆನಹಳ್ಳಿ, ತುಳಸಿ ಕಟ್ಟೆ, ಗೊಲ್ಲರಹಟ್ಟಿ, ರಂಗನಾಥಪುರ ಕೋಣನಕಲ್ಲು ಗ್ರಾಮದಿಂದ ಪೋಷಕರು ತಮ್ಮ ಮಕ್ಕಳನ್ನು ಕರೆದುಕೊಂಡು ಬಂದು ಲಸಿಕೆಯನ್ನು ಹಾಕಿಸುತ್ತಿದ್ದರು.
ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರಾದ ಗೌರಮ್ಮ, ಮಂಗಳಮ್ಮ,
ಆಶಾ ಕಾರ್ಯಕರ್ತರಾದ ಮಾಲಿನಿ ಕೆ. ಟಿ, ಸಿದ್ಧಗಂಗಮ್ಮ, ಸುಜಾತ ಬಾಯಿ ಸೇರಿದಂತೆ ಪೋಷಕರು ಮಕ್ಕಳು ಇದ್ದರು.

