ಜಿಲ್ಲಾಧಿಕಾರಿಗೆ ಮಹಿಳಾ ಕನ್ನಡ ರಾಜ್ಯೋತ್ಸವದ ಗೌರವ ಪ್ರಶಸ್ತಿ

Surya Pragathi Editor
2 Min Read

 

ಚಿಕ್ಕನಾಯಕನಹಳ್ಳಿ : ರೂಪಾಂತರ ಮಹಿಳಾ ಸಶಕ್ತಿಕರಣ ಮತ್ತು ಸಮುದಾಯ ಅಭಿವೃದ್ದಿ ಸಂಸ್ಥೆ ವತಿಯಿಂದ ಮೊದಲನೇ ವರ್ಷದ ಮಹಿಳಾ ಕನ್ನಡ ರಾಜ್ಯೋತ್ಸವವನ್ನು ಡಿಸೆಂಬರ್ 23 ರಂದು ಬೆಳಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ ಎಂದು ರೂಪಾಂತರ ಮಹಿಳಾ ಸಶಕ್ತಿಕರಣದ ಸಂಸ್ಥಾಪಕ ಕಾರ್ಯದರ್ಶಿ ರೂಪಶ್ರೀ ಟಿ ತಿಳಿಸಿದರು.

ಪಟ್ಟಣದ ತೀ.ನಂ.ಶ್ರೀ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವು ತೀ.ನಂ.ಶ್ರೀ ಸಭಾಂಗಣದಲ್ಲಿ ನಡೆಯಲಿದ್ದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಸಿ.ಬಿ.ಸುರೇಶ್ ಬಾಬು ವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿ.ಪಂ.ಕಾರ್ಯನಿರ್ವಹಣಾಧಿಕಾರಿ ಪ್ರಭು ಜಿ, ಪೋಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ ಆಗಮಿಸಲಿದ್ದಾರೆ.

ತಾಲ್ಲೂಕು ದಂಡಾಧಿಕಾರಿ ಮಮತ ಕೆ, ಕೆ.ಪಿ.ಸಿ.ಸಿ ಉಪಾಧ್ಯಕ್ಷ ಮುರಳೀಧರ ಹಾಲಪ್ಪ, ಆರಕ್ಷಕ ವೃತ್ತ ನಿರೀಕ್ಷಕ ಪಿ.ಆರ್.ಜನಾರ್ಧನ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಲ್.ಯೋಗೇಶ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎಸ್.ರವಿಕುಮಾರ್ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಕಾರ್ಯಕ್ರಮದಲ್ಲಿ ಮಹಿಳಾ ಕನ್ನಡ ರಾಜ್ಯೋತ್ಸವದ ಗೌರವ ಪ್ರಶಸ್ತಿ ಪುರಸ್ಕೃತರಾಗಿ ಜಿಲ್ಲಾಧಿಕಾರಿ ಶುಭಕಲ್ಯಾಣ್, ಉಪವಿಭಾಗಾಧಿಕಾರಿ ನಾಹಿದ ಝಮ್ ಝಮ್, ತಹಶೀಲ್ದಾರ್ ಮಮತ, ಕಸಾಪ ಮಾಜಿ ಜಿಲ್ಲಾಧ್ಯಕ್ಷೆ ಬ.ಹ.ರಮಾಕುಮಾರಿ, ಮಹಿಳಾ ಹೋರಾಟಗಾರ್ತಿ ಮತ್ತು ಸಾಮಾಜಿಕ ಕಾರ್ಯಕರ್ತೆ ಮಲ್ಲಿಗೆ ಸಿರಿಮನೆ, ಸೃಜನ ಮಹಿಳಾ ಸಂಘದ ಅಧ್ಯಕ್ಷೆ ಎನ್.ಇಂದಿರಮ್ಮ, ಕನ್ನಡ ಉಪನ್ಯಾಸಕರಾದ ಮೇ.ನಾ.ತರಂಗಿಣಿ, ಯೋಗ ಗುರುಗಳಾದ ವೇದಶ್ರೀ, ವಿಕಲಚೇತನ ಶಾಲೆಯ ಶಿಕ್ಷಕರಾದ ಸಂಜಶ್ರೀ, ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್ ಸಂಸ್ಥಾಪಕ ಕಾರ್ಯದರ್ಶಿ ಕವಿತಾ ಕಿರಣ್ ಕುಮಾರ್, ಮಹಾನಟಿ ಕಲಾವಿದೆ ದೀಪಿಕ ರವರಿಗೆ ಸನ್ಮಾನ ನಡೆಯಲಿದೆ.

ಸಮಾರಂಭದಲ್ಲಿ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ನಡೆಯಲಿದ್ದು ಕುಮಾರ್ ಹಾಸ್ಪಿಟಲ್ ನ ಡಾ.ಶ್ರೀಧರ್ ಜಿ.ಎಸ್, ಶೇಖರ್ ಬ್ಲಡ್ ಸೆಂಟರ್ ನ ಡಾ.ಸೋಮಶೇಖರ್, ಆಡಳಿತ ವೈದ್ಯಾಧಿಕಾರಿ ಡಾ.ಜಯಶ್ರೀ, ತಜ್ಞ ವೈದ್ಯೆ ಡಾ.ವೀಣಾ ಕೆ, ಡಾ.ಆಶಾವತಿ ಎನ್ ಸಹಕಾರದಲ್ಲಿ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮಕ್ಕೂ ಮುನ್ನ ಮಹಿಳಾ ಸದಸ್ಯರುಗಳಿಂದ ಬೈಕ್ ರ್‍ಯಾಲಿ ನಡೆಯಲಿದೆ. ನೂರಕ್ಕೂ ಹೆಚ್ಚು ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರೂಪಾಂತರ ಮಹಿಳಾ ಸಶಕ್ತಿಕರಣ ಮತ್ತು ಸಮುದಾಯದ ಅಧ್ಯಕ್ಷೆ ಶಕುಂತಲ, ಸದಸ್ಯರುಗಳಾದ ಹರ್ಷಿತ, ಉಷಾ, ಸರಿತ ಇದ್ದರು.

- Advertisement -
Ad imageAd image
- Advertisement -
Ad imageAd image

 

ಚಿಕ್ಕನಾಯಕನಹಳ್ಳಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರೂಪಾಂತರ ಮಹಿಳಾ ಸಶಕ್ತಿಕರಣ ಮತ್ತು ಸಮುದಾಯ ಅಭಿವೃದ್ದಿ ಸಂಸ್ಥೆ ವತಿಯಿಂದ ನಡೆಯುವ ಮೊದಲನೇ ವರ್ಷದ ಮಹಿಳಾ ಕನ್ನಡ ರಾಜ್ಯೋತ್ಸವ ನಡೆಯುವ ಬಗ್ಗೆ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ರೂಪಶ್ರೀ ಟಿ ತಿಳಿಸಿದರು. ರೂಪಾಂತರ ಮಹಿಳಾ ಸಶಕ್ತಿಕರಣ ಮತ್ತು ಸಮುದಾಯದ ಅಧ್ಯಕ್ಷೆ ಶಕುಂತಲ, ಸದಸ್ಯರುಗಳಾದ ಹರ್ಷಿತ, ಉಷಾ, ಸರಿತ ಇದ್ದರು.

Share this Article
Leave a comment