ಕಾಂಗ್ರೆಸ್ ಬಿಜೆಪಿ ಸರ್ಕಾರಗಳು ರೈತರ ಸಂಘಟನೆಗಳನ್ನ ದುರುಪಯೋಗಪಡಿಸಿಕೊಂಡಿದೆ: ಎಚ್.ಎ.ಜಯರಾಮಯ್ಯ

ತುಮಕೂರು: ದೇಶದ ಬೆನ್ನೆಲುಬು ಪ್ರತಿಯೊಬ್ಬರಿಗೂ ಅನ್ನ ನೀಡುವ ಶ್ರಮಿಕ ವರ್ಗವೆಂದರೆ ಅದು ರೈತ ಕುಟುಂಬ ದೇಶಕ್ಕೆ ಅನ್ನ ಹಾಕುವ ಅನ್ನದಾತನ ಬೆನ್ನುಮೂಳೆಯನ್ನ ದೇಶದಲ್ಲಿ ಇದುವರೆಗೂ ಅಧಿಕಾರ ನಡೆಸಿದ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳು ಮುರಿದಿದ್ದು ರೈತ ಮತ್ತು ರೈತರ ಸಂಘಟನೆಗಳನ್ನ ದುರುಪಯೋಗ ಪಡಿಸಿಕೊಂಡು ರಾಜ್ಯದಲ್ಲಿ ಆಡಳಿತ ನೀಡುತ್ತಿದೆ ಎಂದು ಅಮ್‌ಆದ್ಮಿ ಪಾರ್ಟಿಯ ಜಿಲ್ಲಾಧ್ಯಕ್ಷ ಹೆಚ್ ಎ ಜಯರಾಮಯ್ಯ ಅವರು ತಿಳಿಸಿದರು.
ತಮ್ಮ ಕಚೇರಿಯಲ್ಲಿ ವಿಶ್ವ ರೈತರ ದಿನಾಚರಣೆ ಪ್ರಯುಕ್ತ ವರ್ಗಕ್ಕೆ ಅಭಿನಂದನೆಗಳನ್ನು ಸಲ್ಲಿಸಿ ಮಾತನಾಡಿದ ಅವರು ರೈತರ ಪರವಾಗಿ ಒಗ್ಗಟ್ಟಿನಿಂದ ರೈತರಿಗೆ ಸಾಮಾಜಿಕ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಈ ದಿನಾಚರಣೆಯನ್ನು ಸಮರ್ಪಣೆ ಮಾಡುತ್ತಿದ್ದೇವೆ ಅನ್ನದಾತನಿಂದ ಮತ ಪಡೆದು ರೈತರ ಬೆನ್ನು ಮೂಳೆಯನ್ನ ಮುರಿಯುತ್ತಲೇ ಬಂದಿರುವ ಸರ್ಕಾರದ ಹಿಬ್ಬಂದಿ ನೀತಿಯನ್ನ ನಮ್ಮ ಪಕ್ಷ ಖಂಡಿಸುತ್ತದೆ ಎಂದು ತಿಳಿಸಿದರು.

ಸ್ವಾತಂತ್ರ್ಯ ನಂತರದಲ್ಲೂ ರೈತರಿಗೆ ಸಂವಿಧಾನ ಬದ್ಧವಾಗಿ ಸಲ್ಲಬೇಕಾದ ಸವಲತ್ತುಗಳು ಇದುವರೆಗೂ ದೊರೆಯುತ್ತಿಲ್ಲ ದೇಶಕ್ಕೆ ಅನ್ನ ನೀಡುವ ಪ್ರತಿ ರೈತ ಕುಟುಂಬಗಳು ನೆಮ್ಮದಿಯಿಂದ ಬದುಕುವಂತಹ ಯೋಜನೆಯ ವಾತಾವರಣವನ್ನು ಯಾವುದೇ ಸರ್ಕಾರ ನೀಡಲಿಲ್ಲ ಗೊಬ್ಬರ, ಬೀಜ, ಬೆಂಬಲ ಬೆಲೆ ಸೇರಿದಂತೆ ಅನೇಕ ಕೃಷಿ ನೀತಿಗಳ ವಿರುದ್ಧ ಅನ್ನದಾತ ಇಂದು ಬೀದಿಗೆ ಇಳಿದು ಹೋರಾಟ ಮಾಡುತ್ತಲೇ ಇದ್ದಾನೆ ಈಗಾಗಿ ಅಧಿಕಾರದಲ್ಲಿರುವ ಪಕ್ಷಗಳು ಕಿಮ್ಮತ್ತು ನೀಡುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದರು.
ರೈತರು ಬೆಳೆಯುವ ಬೆಳೆಗಳಿಗೆ ಶಾಶ್ವತ ಬೆಂಬಲ ಬೆಲೆ ನಿಗದಿಗೊಳಿಸದಿರುವುದು, ಸಮರ್ಪಕವಾಗಿ ವಿದ್ಯುತ್ ಸಂಪರ್ಕ ಮತ್ತು ನೀರಾವರಿ ಯೋಜನೆಗಳನ್ನು ಒದಗಿಸದೆ ಸಂದರ್ಭನುಸಾರ ರೈತರ ಪರವಾಗಿ ಮಾತನಾಡುತ್ತಾ ಕಾಲಹರಣ ಮಾಡುವ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳನ್ನು ದೇಶದ ರೈತರು ತಿರಸ್ಕರಿಸಬೇಕು ಮುಂಬರುವ ಚುನಾವಣೆಯಲ್ಲಿ ಅಮ್ ಆದ್ಮಿ ಪಾರ್ಟಿಗೆ ಬಹುಮತ ನೀಡಿದ್ದಲ್ಲಿ ಇಂತಹ ಭಾವನೆಗಳನ್ನು ನೀಗಿಸುವ ಸರ್ವ ಪ್ರಯತ್ನವನ್ನು ಮಾಡಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್ ರಾಮಾಂಜಿನಪ್ಪ ಅವರು ಮಾತನಾಡುತ್ತಾ ದೇಶಕ್ಕೆ ಅನ್ನ ಹಾಕುವ ರೈತನಿಗೆ ಅನೇಕ ಸಮಸ್ಯೆಗಳಿವೆ ಸರ್ಕಾರಗಳು ಹಸಿರು ಶಾಲು ಹಾಕಿಕೊಂಡು ರೈತರ ಪರವಾಗಿದ್ದೇವೆ ಎಂಬ ಮಾತುಗಳನ್ನು ಹೇಳುತ್ತಾ ರೈತರಿಗೆ ಅನ್ಯಾಯ, ಮೋಸವನ್ನು ಮಾಡಲಾಗುತ್ತಿದೆ ಆದರೆ ಇದಕ್ಕೆ ಪೂರಕವಾಗಿ ಅಮ್ ಆದ್ಮಿ ಪಕ್ಷವು ಪಂಜಾಬ್ ರಾಜ್ಯದ ರೈತರ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನದಲ್ಲಿ ಯಶಸ್ಸು ಕಂಡಿದೆ ಈಗಾಗಲೇ ಪಂಜಾಬ್ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ನಮ್ಮ ಪಕ್ಷ ಗೆಲುವನ್ನು ಸಾಧಿಸಿ ರೈತಪರವಾದ ನಿಲುವುಗಳನ್ನ ಕೈಗೊಂಡಿದೆ ಎಂದರು.
ನಮ್ಮ ರಾಜ್ಯದ ಎಲ್ಲಾ ರೈತಪರ ಸಂಘಟನೆಗಳು ಮತ್ತು ಇನ್ನಿತರ ಸಂಘಟನೆಗಳು ಸಹ ಅನ್ನದಾತರ ಪರವಾಗಿ ಒಗ್ಗಟ್ಟಿನಿಂದ ಹೋರಾಟ ಮಾಡಿ ಸಾಮಾಜಿಕ ನ್ಯಾಯವನ್ನು ರೈತನಿಗೆ ದೊರಕಿಸಿ ಕೊಡಬೇಕಿದೆ ಈಗಾಗಲೇ ತುಮಕೂರು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ರೈತಪರ ಸಂಘಟನೆಗಳ ಸಹಯೋಗದೊಂದಿಗೆ ಅನೇಕ ಹೋರಾಟಗಳನ್ನ ರೂಪಿಸಿದ್ದು ತುಮಕೂರು ಜಿಲ್ಲೆಯಲ್ಲೂ ಕೂಡ ಅಮ್ ಆದಿ ಪಾರ್ಟಿ ಗ್ರಾಮಮಟ್ಟದಿಂದ ಸಂಘಟನೆ ಮಾಡುತ್ತಾ ಬಂದಿದ್ದು ಮುಂಬರುವ ದಿನಗಳಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಅಧಿಕಾರ ದೊರಕಿದ್ದೆ ಆದರೆ ರೈತ ಪರವಾದ ಹೋರಾಟಗಳನ್ನು ರೂಪಿಸಿ ರೈತರಿಗೆ ನೆರವಾಗುವ ಹೆಬ್ಬುಲಿಯನ್ನ ನಮ್ಮ ಪಕ್ಷ ಒಂದಲಾಗಿದೆ ಎಂದು ನುಡಿದರು.

ಈ ಸಂದರ್ಭದಲ್ಲಿ ಪಕ್ಷದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜಿಲ್ಲಾಧ್ಯಕ್ಷರಾದ ಪಿ ಬಸವರಾಜು, ಪಾವಗಡ ತಾಲೂಕು ಉಪಾಧ್ಯಕ್ಷರಾದ ಡಿ ಎಚ್ ದೇವರಾಜು, ಅಮ್ ಆದ್ಮಿ ಪಾರ್ಟಿಯ ಸೋಶಿಯಲ್ ಮೀಡಿಯಾ ಸಂಚಾಲಕರಾದ ಡಿಕೆ ಪ್ರಕಾಶ್ ಯಾದವ್ ಮುಖಂಡರಾದ ಈರಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

