ರೈತ ಉಳಿದರೆ ದೇಶ ಉಳಿಯುತ್ತದೆ ಇಂತಹ ರೈತರಿಗೆ ನೀರು, ವಿದ್ಯುತ್ ನೀಡಿದರೆ ಅವರು ಸ್ವಾವಲಂಬಿಯಾಗಿ ಬದುಕುತ್ತಾರೆ – ಶಾಸಕ ಸಿ.ಬಿ.ಸುರೇಶ್‌ಬಾಬು

Surya Pragathi Editor
3 Min Read


ಚಿಕ್ಕನಾಯಕನಹಳ್ಳಿ೨೪:-ಅದುನಿಕತೆ ತಂತ್ರಜ್ಞಾನದ ಬರದಲ್ಲಿ ಇಂದು ರಸಗೊಬ್ಬರಗಳು ಕೀಟನಾಶಗಳನ್ನು ಬಳಸುತ್ತ ವಿಷಯುಕ್ತ ಆಹಾರದ ಉತ್ಪಾದನೆ ಹಾಗೂ ಬಳಕೆ ಮಾಡುತ್ತಿರುವ ಪರಿಣಾಮ ನಮ್ಮ ಆಯಸ್ಸು ಹಾಗೂ ಅರೋಗ್ಯ ಎರಡೂ ಕ್ಷೀಣಿಸುತ್ತಿದೆ ಅದ್ದರಿಂದ ನಾವು ಮತ್ತೆ ನಮ್ಮ ಪೂರ್ವಜರ ರೀತಿಯಲ್ಲಿ ಸಾವಯವ ಬೆಳೆಗಳತ್ತ ಮುಖ ಮಾಡಬೇಕಿದೆ ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು.
ಪಟ್ಟಣದ ತೀನಂಶ್ರೀಭವನದಲ್ಲಿ ಬುಧವಾರ ಕೃಷಿ ಇಲಾಖೆ, ಪಶುಸಂಗೋಪನಾ ಇಲಾಕೆ, ತೋಟಗಾರಿಕೆ ಇಲಾಖೆ ಮತ್ತು ರೆಷ್ಮೆ ಇಲಾಖೆಗಳ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ರೈತರ ದಿನಾಚರಣೆ ಕಾರ್ಯಕ್ರಮದ ಅದ್ಯಕ್ಷತೆವಹಿಸಿ ಮಾತನಾಡಿದ ಅವರು ಇಂದು ನಾವು ರೈತರು ಆತ್ಮವಾಲೋಕನ ಮಾಡಿಕೊಳ್ಳಬೇಕಿದೆ ಕಾರಣ ತಮ್ಮ ಬೆಳೆಗಳು ಇಳುವರಿ ಹೆಚ್ಚಾಗಲಿ ಎಂದು ರಾಸಾಯನಿಕಗಳನ್ನು ಹೆಚ್ಚಾಗಿ ಬಳಸುತ್ತಿದ್ದೇವೆ ಇದರಿಂದ ಅದರಲ್ಲಿನ ಸತ್ವವನ್ನು ಮಣ್ಣಿನ ಫಲವತ್ತತೆಯನ್ನು ಕಳೆಯುತ್ತಿದ್ದೇವೆ ಅದ್ದರಿಂದ ರೈತರು ಮನಸ್ಸು ಮಾಡಿ ಸಾವಯವ ಕೃಷಿಪದ್ದತಿಯೊಂದಿಗೆ ಸಮಗ್ರ ಬೆಳೆಯ ಕೃಷಿಪದ್ದತಿಯನ್ನು ಆಳವಡಿಸಿಕೊಳ್ಳುವ ಮೂಲಕ ಸಮಾಜವನ್ನು ಉತ್ತಮ ಆರೋಗ್ಯವನ್ನಾಗಿ ಮಾಡಬಹುದು ಎಂದ ಅವರು ಕೃಷಿ ಇಲಾಖೆಯಿಂದ ೭ಸಾವಿರ ರೈತರಿಗೆ ತುಂತುರು ನೀರಾವರಿ ಯೋಜನೆಯಡಿ ಸ್ಪಿಂಕ್ಲರ್‌ಗಳನ್ನು, ೪೦೦ಜನಕ್ಕೆ ವಿವಿಧ ಯಂತ್ರೋಪಕರಣವಿತರಣೆಯನ್ನು, ಇದರೊಂದಿಗೆ ಬೆಳೆಕಟಾವಿಗೆ ಒಂದು ಯಂತ್ರವನ್ನು, ೩೫೦ಜನರಿಗೆ ಕೃಷಿಭಾಗ್ಯಯೋಜನೆಯಡಿ ಅನುದಾನದ ನೀಡಿದ್ದು ಇದರೊಂದಿಗೆ ರಾಜ್ಯದಲ್ಲೇ ಇರುವಂತಹ ೨ ಸಾವಯವ ಬೆಳೆ ಸಂಸ್ಕರಣಾ ಘಟಕಗಳಲ್ಲಿ ನಮ್ಮ ತಾಲ್ಲೂಕಿಗೆ ೫೦ಲಕ್ಷ ವೆಚ್ಚದಲ್ಲಿ ಒಂದು ಘಟಕವನ್ನು ಇಂದು ಉದ್ಘಾಟನೆ ಮಾಡಲಾಗಿದೆ ಅದ್ದರಿಂದ ರೈತರು ಇರುವಂತಹ ಭೂಮಿಯಲ್ಲಿ ಉತ್ತಮ ಲಾಭದಾಯಕ ಬೆಳೆಗಳನ್ನು ಬೆಳೆಯಿರಿ ಎಂದರು.


ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಲಕ್ಷö್ಮಣ್ ಮಾತನಾಡಿ ರೈತರು ಸಹಕಾರ ಸಂWಗಳಿAದ ತಾವು ಬೆಳೆದ ಬೆಳೆಗೆ ತಾವೇ ಬೆಲೆಗಳನ್ನು ನಿಗದಿಪಡಿಸಿಕೊಳ್ಳಬಹುದಾಗಿದೆ ಎಂದ ಅವರು ಭಾರತದೇಶದ ಬಡತನ ಆಹಾರದ ಅಭಾವವನ್ನು ನೀಗಿಸುವಲ್ಲಿ ರೈತರಿಗಾಗಿ ರೈತರ ಪರವಾಗಿದ್ದಂತಹ ಅವರ ಬಗ್ಗೆ ಕಾಳಜಿಯುಳ್ಳವರಾಗಿದ್ದ ಚೌದರಿಯವರ ಹುಟ್ಟುಹಬ್ಬವನ್ನು ರೈತರ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದು ರೈತರು ತಮ್ಮ ಬೆಳೆಗಳನಡುವೆ ದ್ವಿದಳ ಬೆಳೆಗಳನ್ನು ಬೆಳೆಯುವುದು, ಕೃಷಿ ತ್ಯಾಜ್ಯಗಳನ್ನು , ಹಸಿರುಎಲೆ ಗೊಬ್ಬರವನ್ನು ಬಳಸುವ ಮೂಲಕ ಸಾವಯವ ಗೊಬ್ಬರವನ್ನು ಬಳಸಿ ಎಂದ ಅವರು ಜೀವಾಮೃತ, ಭೂ ಕೃಪಾಮೃತ ಬಳಸಿ ಸಿರಿಧಾನ್ಯ ಬೆಳೆಯಿರಿ ಸ್ವಾವಲಂಬಿ ಸಾಧಿಸಿ ಎಂದು ಸ¯ಹೆ ನೀಡಿದರು.

ಗ್ಯಾರಂಟಿ ಯೋಜನೆಗಳ ಅದ್ಯಕ್ಷ ಸಿ.ಡಿ.ಚಂದ್ರಶೇಖರ್ ಮಾತನಾಡಿ ಕೇಂದ್ರದಲ್ಲಿ ವಾಜಪೇಯಿ ಪ್ರಧಾನ ವiಂತ್ರಿಗಳಾಗಿದ್ದ ಸಂದರ್ಭದಲ್ಲಿ ೨೦೦೧ರ ಡಿಸೆಂಬರ್ ೨೩ರಂದು ರಾಷ್ಟಿçÃಯ ರೈತರ ದಿನಾಚರಣೆಯನ್ನು ಘೋಷಿಸಿತು ಅಂದಿನಿAದ ಆಚರಣೆ ಮಾಡುತ್ತಿದ್ದು ಈ ದಿನ ನಾವು ಕರ್ನಾಟಕದಲ್ಲಿ ರೈತರ ಪರವಾಗಿ ಹೋರಾಡಿದಂತಹ ಶಾಂತವೀರ ಗೋಪಾಲಕೃಷ್ಣ, ಪ್ರೋ.ನಂಜುAಡಸ್ವಾಮಿಯAತವರನ್ನು ನೆನೆಪು ಮಾಡಿಕೊಳ್ಳಬೇಕಿದೆ ಎಂದರು.
ಕೃಷಿಕ ಸಮಾಜದ ಅದ್ಯಕ್ಷ ಗಂಗಾಧರ್ ಮಾತನಾಡಿ ಕೃಷಿ ಅರಂಭವೇ ಹೊರತು ಅಂತ್ಯವಲ್ಲ ಇಂದು ರೈತರು ಅನೇಕ ಸವಾಲುಗಳನ್ನು ಹೆದರಿಸಬೇಕಿದೆ ರೈತರು ಮಳೆಯನ್ನೇ ನಂಬಿ ಬದುಕಬೇಕಿದೆ ನೈಸರ್ಗಿಕವಾಗಿ ಮಳೆ ಬರುವಂತಹ ಸ್ಥಿತಿ ಇಲ್ಲ ಎಂದ ಅವರು ಕೇವಲ ಸೈಕ್ಲೋನ್ ಬರಬೇಕು ಅಷ್ಟೇ ಅದರಲ್ಲೂ ಇಂದು ಸರ್ಕಾರ ರೈತರು ಕಾರಿನಲ್ಲಿ ಓಡಾಡುವುದು ಕಷ್ಟವಾಗಿದೆ ಇದ್ದಂತಹ ಬಿಪಿಎಲ್ ಕಾರ್ಡ್ನ್ನು ರದ್ದುಪಡಿಸಿದ್ದಾರೆ ಅದು ಸರಿಯಲ್ಲ ಅದ್ದರಿಂದ ಈ ಅದೇಶವನ್ನು ಹಿಂಪಡೆಯಬೇಕು ಈ ಬಗ್ಗೆ ಶಾಸಕರು ಗ್ಯಾರಂಟಿ ಅಧ್ಯಕ್ಷರು ಸರ್ಕಾರz ಗಮನಕ್ಕೆ ತರಬೇಕು ಎಂದರು.
ಪ್ರಾಸ್ತವಿಕರ ನುಡಿಗಳನ್ನಾಡಿ ಕೃಷಿ ಇಲಾಖೆಯ ಉಪನಿರ್ದೇಶಕ ಹುಲಿರಾಜ್ ಮಾತನಾಡಿ ನಮ್ಮದೇಶದ ಪ್ರಧಾನಿಯಾಗಿದ್ದ ಚರಣ್‌ಸಿಂಗ್ ಚೌಧರಿಯವರ ಹುಟ್ಟಿದ ದಿನವನ್ನು ಅಂದರೆ ಡಿಸೆಂಬರ್ ೨೩ರನ್ನು ರಾಷ್ಟಿçÃಯ ರೈತರ ದಿನಾಚರಣೆಯನ್ನು ಆಚರಿಸಲು ತೀರ್ಮಾನಿಸಿದಂತೆ ಇಂದು ಆಚರಣೆ ಮಾಡುತ್ತಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಜ್ಞಾನೇಶ್, ಕೃಷಿ ವಿಜ್ಞಾನಿ ಡಾ.ಶಂಕರ್ ಸೇರಿದಂತೆ ಕೆಡಿಪಿ ಸಭೆಯ ಸದಸ್ಯರಾದ ಶಂಕರ್, ಗೌಸ್‌ಪೀರ್, ರಾಮಚಂದ್ರಯ್ಯ, ರೈತ ಮುಖಂಡರಾದ ಲಿಂಗಯ್ಯ, ಚಂದ್ರಣ್ಣ, ಮಲ್ಲಿಕಾರ್ಜುನಯ್ಯ, ಉಮೇಶ್‌ಗೌಡ, ಸಿದ್ದಪ್ಪ, ತೊಂಟಾರಾದ್ಯ, ರೇಣುಕಮ್ಮ, ಪುಷ್ಪಾವತಿ ಹಾಗೂ ಕೃಷಿ ಇಲಾಖೆಯ ಶಿವರಾಜ್‌ಕುಮಾರ್, ಪಶುಇಲಾಖೆ ಸಹಾಯಕ ನಿರ್ದೇಶಕ ಕಾಂತರಾಜು, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ರಾಜಪ್ಪ ಸೇರಿದಂತೆ ಇತರರು ಇದ್ದರು.

TAGGED:
Share this Article
Leave a comment