ಭೂಮಿ ಬಿಟ್ಟುಕೊಟ್ಟರೆ ಮುಂದಿನ ಅವಧಿಗೆ ನವಿಲೆ ಹಾಗೂ ಚಿಕ್ಕನಾಯಕನಹಳ್ಳಿ ಕೆರೆಗೆ ಹೇಮೆ – ಶಾಸಕ ಸಿ.ಬಿ.ಸುರೇಶ್‌ಬಾಬು

Surya Pragathi Editor
3 Min Read

ಚಿಕ್ಕನಾಯಕನಹಳ್ಳಿ; -ತಾಲ್ಲೂಕಿನ ೨೨ಕೆರೆಗಳಿಗೆ ನೀರು ಹರಿಸುವ ಹೇಮಾವತಿ ನಾಲಾ ಕಾಮಗಾರಿಗೆ ಭೂಸ್ವಾದೀನ ಪ್ರಕ್ರಿಯೆಯಲ್ಲಿ ಈಗಾಗಲೇ ಆ ಭಾಗದ ರೈತರಿಗೆ ಅವಾರ್ಡ್ಗಳನ್ನು ನೀಡಿದ್ದು ರೈತರು ಅದಷ್ಟು ಬೇಗ ತಮ್ಮ ದಾಖಲೆಗಳನ್ನು ನೀಡಿ ಪರಿಹಾರದ ಹಣ ಪಡೆಯಬೇಕು ಹಾಗೂ ಕಾಮಗಾರಿಗೆ ಭೂಮಿ ಬಿಟ್ಟುಕೊಟ್ಟರೆ ಮುಂದಿನ ಅವಧಿಗೆ ನವಿಲೆ ಹಾಗೂ ಚಿಕ್ಕನಾಯಕನಹಳ್ಳಿ ಕೆರೆಗೆ ಹೇಮಾವತಿಯನ್ನು ಹರಿಸಲಾಗುವುದು ಎಂದರು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು.
ಪಟ್ಟಣದ ತಾಲ್ಲೂಕು ಆಡಳಿತ ಸೌಧದ ಶಾಸಕರ ಕಾರ್ಯಲಯದಲ್ಲಿ ನಡೆದ ಹೇಮಾವತಿ ಹೋರಾಟಗಾರರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ಕಂದಾಯ ಇಲಾಖೆಯ ದಾಖಲೆಗಳನ್ನು ನೀಡಲು ತಹಸೀಲ್ದಾರ್ ಇದ್ದಾರೆ, ಹಣ ಕೊಡಿಸಲು ನಾನು ಇದ್ದೇನೆ, ಹಣ ನೀಡಲು ಎಸ್‌ಎಲ್‌ಒ ಇದ್ದಾರೆ ಇಂಜನಿಯರ್ ಕೆಲಸ ಮಾಡಿಸಲು ಇದ್ದಾರೆ. ರೈತರು ತಮ್ಮ ದಾಖಲೆಗಳನ್ನು ಸರಿಯಾಗಿ ನೀಡಬೇಕಿದೆ ಅಷ್ಟೇ ರೈತರು ಸಹಕಾರ ನೀಡಿದರೆ ತಕ್ಷಣ ನೀರನ್ನು ಹರಿಸಲಾಗುವುದು ಇದರೊಂದಿಗೆ ಈಗಾಗಲೇ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರ ಹತ್ತಿರ ಈಗಾಗಲೇ ಕಟ್ ಆಂಡ್ ಕವರ್ ಕಾಮಗಾರಿಗೆ ೧೫೦ಕೋಟಿ ಅನುದಾನ ನೀಡಿದ್ದು ಅದಕ್ಕೆ ಸಂಬAದಿಸಿದAತೆ ಡಿಪಿಆರ್ ಮಾಡಲು ತಿಳಿಸಿದ್ದಾರೆ ಅದು ಆದರೆ ನಮಗೆ ಶಾಶ್ವತವಾಗಿ ನಮಗೆ ಹಂಚಿಕೆಯಾದ ನೀರು ಹರಿಯಲು ಸಾದ್ಯವಾಗುತ್ತದೆ ಇಲ್ಲವಾದರೆ ಪ್ರತಿವರ್ಷ ಸಮಸ್ಯೆ ಉದ್ಬವಿಸುತ್ತದೆ ಕೋಟಿಹಣ ಖರ್ಚು ಮಾಡಿ ಚಾನಲ್‌ನಲ್ಲಿ ಶಿಲ್ಟ್ ಕಟ್ಟಿಕೊಂಡು ಹೂಳು ಎತ್ತುವ ಕೆಲಸ ಮಾಡಬೇಕಾಗುತ್ತದೆ ಅದ್ದರಿಂದ ಈ ಕಟ್ ಆಂಡ್ ಕವರ್‌ಗೆ ಅನುದಾನವನ್ನು ಮುಂದಿನ ದಿನಗಳಳ್ಲಿ ಮುಖ್ಯಮಂತ್ರಿಬಳಿ ಚರ್ಚಿಸುವುದಾಗಿ ತಿಳಿಸಿದ ಅವರು ರೈತರು ದಾಖಲೆಗಳನ್ನು ಅದಷ್ಟು ಬೇಗ ನೀಡಬೇಕು ಇಲ್ಲವೇ ನಿಮ್ಮಯಾವುದಾದರು ತಕರಾರುಗಳಿದ್ದರೆ ನಿಮ್ಮ ಪರಿಹಾರದ ಹಣವನ್ನು ನ್ಯಾಯಾಲಯದಲ್ಲಿ ಠೇವಣಿ ಮಾಡಿ ಮುಂದಿನ ಕೆಲಸವನ್ನು ಮಾಡಲಾಗುತ್ತದೆ ರೈತರು ತಮ್ಮ ಗೊಂದಲವನ್ನು ನಿವಾರಿಸಿಕೊಂಡು ತೀರ್ಮಾನ ಮಾಡಿದರೆ ಅಂತವರಿಗೆ ಆ ಪರಿಹಾರದ ಹಣ ನೀಡಲಾಗುತ್ತದೆ ಅದ್ದರಿಂದ ಸಾದ್ಯವಾದಷ್ಟು ರೈತರು ತಮ್ಮ ಪಾಲಿನ ಭೂ ಪರಿಹಾರದ ಹಣವನ್ನು ಅಗತ್ಯ ದಾಖಲೆಗಳನ್ನು ನೀಡಿ ಪಡೆದುಕೊಂಡು ಭೂಮಿಯನ್ನು ನಾಲಾಕಾಮಗಾರಿಗೆ ಬಿಟ್ಟುಕೊಡುವಂತೆ ತಿಳಿಸಿದ ಅವರು ಸಂಬಸಂಧ ಪಟ್ಟ ಭೂ ಸ್ವಾದೀನ ಇಲಾಕೆಯ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿ ರೈತರ ಕೆಲಸ ಮಾಡುವಂತೆ ಸೂಚಿಸಿದರು.


ತಹಸೀಲ್ದಾರ್ ಮಮತ ಎಂ ಮಾತನಾಡಿ ನಮ್ಮ ಕಂದಾಯ ಇಲಾಖೆಯಿಂದ ಈ ಭೂಸ್ವಾದಿನ ಪ್ರಕ್ರಿಯೆಯಲ್ಲಿ ಪರಿಹಾರ ಪಡೆಯಲು ಅಗತ್ಯವಿರುವಂತಹ ದಾಖಲೆಗಳನ್ನು ಪಡೆಯಲು ನೇರವಾಗಿ ನನ್ನ ಬಳಿ ಬನ್ನಿ ನಿಮಗೆ ಸಾದ್ಯವಾದಷ್ಟು ಬೇಗ ದಾಖಲೆಗಳನ್ನು ನೀಡುತ್ತೇವೆ ಹಾಗೂ ನೀವು ನಿಮ್ಮ ಪರಿಹಾರದ ಹಣವನ್ನು ಪಡೆಯಲು ಸಾದ್ಯವಿಲ್ಲವೆಂದು ನಿರಾಕರಿಸಿದರೆ, ಇಲ್ಲವೆ ಭೂಮಿಯ ವಾರಸುದಾರರ ಬಗ್ಗೆ ಗೊಂದಲಗಳಿದ್ದು ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದರೆ ಅಂತಹವರ ಪರಿಹಾರದ ಹಣವನ್ನು ನ್ಯಾಯಲಯದಲ್ಲಿ ಠೇವಣಿ ಮಾಡುವ ಮೂಲಕ ಈ ಯೋಜನೆಯ ಕೆಲಸವನ್ನು ಮಾಡಬಹುದು ಅದ್ದರಿಂದ ನಮ್ಮ ಕಂದಾಯ ಇಲಾಖೆಯಿಂದ ಆಗಬೇಕಾದ ಕೆಲಸಗಳಿಗೆ ನೇರವಾಗಿ ನಮ್ಮಬಳಿಯೇ ಬಂದು ನಿಮ್ಮ ದಾಖಲೆ ಪಡೆಯಿರಿ ಎಂದರು.
ಕಾವೇರಿ ನೀರಾವರಿ ನಿಗಮದ ಇಇ ಚಂದ್ರಶೇಖರ್ ಮಾತನಾಡಿ ರೈತರು ಸರಿಯಾದ ಭೂ ದಾಖಲೆ ನೀಡಿ ನಿಮ್ಮ ಭೂ ಪರಿಹಾರದ ಹಣವನ್ನು ಪಡೆದು ನಿಮ್ಮ ಭೂಮಿಗಳನ್ನು ಬಿಟ್ಟುಕೊಟ್ಟರೆ ಕಾಮಗಾರಿಯನ್ನು ಮುಗಿಸಿ ಮುಂದಿನ ಅವಧಿಗೆ ನೀರನ್ನು ಹರಿಸಲಾಗುವುದು ಎಂದರು.
ಸಭೆಯಲ್ಲಿ ರೈತ ಮುಖಂಡರುಗಳು ಮಾತನಾಡಿ ಈಗಾಗಲೇ ಈ ಯೋಜನೆ ಮಂಜೂರಾಗಿ ದಶಕಗಳೇ ಕಳೆದಿವಿ ಅದರೂ ಇನ್ನು ಇದು ಸಂಪೂರ್ಣವಾಗಿಲ್ಲ ಇನ್ನಾದರು ಈ ಕಾಮಗಾರಿಯನ್ನು ಪೂರ್ಣಗೊಳಿಸಿ ನಮ್ಮ ಭಾಗದ ರೈತರನ್ನು ಕಾಪಾಡುವಂತೆ ಒತ್ತಾಯಿಸಿದರು. ಭೂಸ್ವಾದಿನ ಪಡಿಸಿಕೊಂಡಿರುವ ರೈತರು ಅಗತ್ಯ ದಾಖಲೆಗಳನ್ನು ನೀಡುವ ಹಾಗೂ ಪರಿಹಾರದ ಹಣ ಖಾತೆಗಳಿಗೆ ಜಮಾ ಅಗದಿರುವ ಬಗ್ಗೆ, ಭೂಮಿಯನ್ನು ಕಾಮಗಾರಿಗೆ ಬಿಟ್ಟುಕೊಡುವ ಬಗ್ಗೆ ಚರ್ಚೆಗಳು ನಡೆದವು.
ಸಭೆಯಲ್ಲಿ ಕಾವೇರಿ ನೀರಾವರಿ ನಿಗದಮ ಎಇಇ ಪ್ರಭಾಕರ್, ಎಇ ಸೌಜನ್ಯ, ಭೂಸ್ವಾದೀನ ಇಲಾಕೆಯ ಆರ್ ಐ ಕೆಂಪರಾಜು ಸೇರಿದಂತೆ ಸಭೆಯಲ್ಲಿ ತಾಲ್ಲೂಕಿನ ಹೇಮಾವತಿ ನೀರಾವರಿ ಹೋರಾಟ ಸಮಿತಿ, ರೈತಸಂಘದ ಪದಾದಿಕಾರಿಗಳು, ಭೂಸ್ವಾಧಿನಕ್ಕೊಳಗಾಗಿರುವ ರೈತರು ಭಾಗವಹಿಸಿದ್ದರು. 

Share this Article
Leave a comment