ದಲಿತ ಯುವಕನನ್ನು ಪ್ರೀತಿಸಿ ಗರ್ಭಿಣಿಯಾದ ಕಾರಣಕ್ಕೆ ಮಗಳನ್ನ ಕೊಂದ‌ ತಂದೆಗೆ ತಕ್ಕ ಶಿಕ್ಷೆ ಯಾಗಲಿ

Surya Pragathi Editor
1 Min Read

ತುಮಕೂರು : ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ಅಂತರಜಾತಿ ವಿವಾಹವಾಗಿದ್ದ ಕಾರಣಕ್ಕೆ ಶ್ರೀಮತಿ ಮಾನ್ಯ ವಿವೇಕಾನಂದ ದೊಡ್ಡಮನಿ ರವರ ಹತ್ಯೆಯನ್ನು ತುಮಕೂರು ಜಿಲ್ಲಾ ಒಳ ಮಿಸಲಾತಿ ಹೋರಾಟ ಸಮಿತಿ  ಖಂಡಿಸುತ್ತದೆ ಎಂದು ಸಮಿತಿ  ಗೌರವ ಅಧ್ಯಕ್ಷ  ಡಾ‌.ಕೆ.ದೊರೈ ರಾಜು ಅವರು ತಿಳಿಸಿದರು.

ರಾಜ್ಯದ ಹುಬ್ಬಳ್ಳಿ ತಾಲ್ಲೂಕಿನ ಇನಾಂ ವೀರಾಪುರ ಗ್ರಾಮದ ವಿವೇಕಾನಂದ ದೊಡ್ಡಮನಿ ಎಂಬ ಗರ್ಭಿಣಿ ಯುವತಿಯನ್ನು ಅವರ ತಂದೆ ಹಾಗೂ ಪೋಷಕರೇ ದಲಿತ ಯುವಕನನ್ನು ಪ್ರೀತಿಸಿ ವಿವಾಹವಾಗಿದ್ದಕ್ಕೆ ಅತ್ಯಂತ ಅಮಾನುಷವಾಗಿ ಕೊಲೆಗೈದು ಗಂಡ ಮತ್ತು ಅವರ ಪೋಷಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವುದನ್ನು “ಜಿಲ್ಲಾ ಒಳಮೀಸಲಾತಿ ಹೋರಾಟ ಸಮಿತಿ” ಉಗ್ರವಾಗಿ ಖಂಡಿಸುತ್ತದೆ. ಈ ಅಮಾನುಷ ಕೃತ್ಯವನ್ನು ಎಲ್ಲಾ ಜಾತ್ಯಾತೀತ ಮಾನವೀಯಾ ತುಡಿತವಿರುವ ಮನಸ್ಸುಗಳು ಹಾಗೂ ಸಂಘಟನೆಗಳು ಖಂಡಿಸಿ ಉಗ್ರಕ್ರಮಕ್ಕೆ ಸರ್ಕಾರವನ್ನು ಒತ್ತಾಯಿಸಬೇಕೆಂದು ಮನವಿ ಮಾಡುತ್ತದೆ ಎಂದು ತಿಳಿಸಿದರು.

ಜಿಲ್ಲಾದ್ಯಕ್ಷ ಡಾ.ವೈ .ಕೆ ಬಾಲಕೃಷ್ಣ ಮಾತನಾಡಿ    ಸಮಾಜದಲ್ಲಿ ಜಾತಿ ವ್ಯವಸ್ಥೆ ಎಷ್ಟು ಕ್ರೂರವೆಂದರೆ ಹೆತ್ತ ಪೋಷಕರೇ ಸ್ವಂತ ಮಗಳನ್ನೇ ಕೊಲ್ಲುವಂತಹ ಹೀನಾ ಪರಿಸ್ಥಿತಿ ಇರುವುದು ಅತ್ಯಂತ ಖಂಡನೀಯ. ಆದುದ್ದರಿಂದ ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಸಂಬಂಧಿಸಿದವರ ಮೇಲೆ ಉಗ್ರಕ್ರಮ ತೆಗೆದುಕೊಂಡು ಅಂತರಜಾತಿ ವಿವಾಹಿತರ ರಕ್ಷಣೆಗೆ ಒಂದು ಕಾನೂನು ರೂಪಿಸಬೇಕೆಂದು ಈ ಮೂಲಕ ಒತ್ತಾಯಿಸುತ್ತೇವೆ ಎಂದು ತಿಳಿಸಿದರು.

 

Share this Article
Leave a comment