ಎಸ್ಸಿ ಜಾತಿಯಲ್ಲಿ ಹುಟ್ಟಿದ್ದೇನೆ ಎಂಬ ಕಾರಣಕ್ಕೆ ಮುಖ್ಯಮಂತ್ರಿ ಸ್ಥಾನದಿಂದ ನನ್ನನ್ನು ವಂಚಿಸಲಾಗುತ್ತಿದೆ – ಡಾ.ಜಿ.ಪರಮೇಶ್ವರ್ ಅಳಲು

Surya Pragathi Editor
3 Min Read
ತುಮಕೂರು:ಭಾರತೀಯ ಸಂಸ್ಕೃತಿ, ಪರಂಪರೆಯ ಹೆಸರಿನಲ್ಲಿ ಸಮಾಜದಕಟ್ಟಕಡೆಯ ವ್ಯಕ್ತಿಅನುಭವಿಸುವ ನೋವು, ಸಂಕಷ್ಟಗಳ ಬಗ್ಗೆ ಮಾತನಾಡದಿರುವುದುಯಾವ ಭಾರತೀಯತೆ.ಇದೇನಾ ನಿಮ್ಮ ಸಹೋದರ,ಸಹೋದರಿಯನ್ನು ನಡೆಸಿ ಕೊಳ್ಳುವ ರೀತಿಎಂದು ಗೃಹ ಹಾಗೂ ತುಮಕೂರುಜಿಲ್ಲಾಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ಪ್ರಶ್ನಿಸಿದ್ದಾರೆ.
ನಗರದ ಶ್ರೀದೇವಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠವತಿಯಿಂದ ಆಯೋಜಿಸಿದ್ದ “ತಲ್ಲಣಸದಿರುವ ಮನವೇ”ಸಂಸ್ಕೃತಿ ಸಂಸ್ತಕೃತಿ ಚಾರಣ ಕಾರ್ಯಕ್ರಮ ಉದ್ಘಾಟಿಸಿ, ಉದ್ಯೋಗ ಸಿರಿ ಯೋಜನೆಗೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ಆರ್ಹತೆಗಳಿದರೂ ಜಾತಿಯ ಕಾರಣಕ್ಕೆಅವಕಾಶದಿಂದ ವಂಚಿಸುವುದು ಎಷ್ಟು ಸರಿ. ಡಾ.ಜಿ.ಪರಮೇಶ್ವರ್ ಒಳ್ಳೆಯ,ಸಜ್ಜನ,ವಿದ್ಯಾವಂತ,ಆದರೆ ಎಸ್ಸಿ ಜಾತಿಯಲ್ಲಿ ಹುಟ್ಟಿದ್ದಾನೆ ಎಂಬ ನೆಪ ಮಾಡಿ, ಮುಖ್ಯಮಂತ್ರಿ  ಸ್ಥಾನದಿಂದ   ವಂಚಿಸಲಾಗುತ್ತಿದೆ. ನನ್ನಂತೆಯೇ ಅರ್ಹತೆ ಇರುವ ಸಮುದಾಯದ ಪ್ರತಿಭಾವಂತರು ಉನ್ನತ ಹುದ್ದೆಗಳಿಂದ ವಂಚಿತರಾಗಿದ್ದಾರೆ. ಇದನ್ನು ಯಾವ ಸಂಸ್ಕೃತಿ, ಪರಂಪರೆ ಎನ್ನಬೇಕು ಎಂದು ತನ್ನನ್ನೇ ತಾನೇ ಉದಾಹರಿಸುವ ಮೂಲಕ ದೇಶದಲ್ಲಿರುವ ಜಾತಿಯತೆಯ ಕರಾಳ ಮುಖವನ್ನು ತೆರೆದಿಟ್ಟರು.
ದೇಶದ ಸ್ವಾತಂತ್ರ, ಸಮಾನತೆಗಾಗಿ ಹೋರಾಟ ಮಾಡಿದ ಗಾಂಧೀಜಿಯ ಹೆಸರನ್ನು ಹೇಳಲು ಹಿಂಜರಿಯುವಂತಹ ಮಟ್ಟಕ್ಕೆ ಇಳಿದಿದ್ದೇವೆ. ಇದು ಯಾವ ಭಾರತ ಎಂದು ಪ್ರಶ್ನಿಸಿದ ಡಾ.ಜಿ.ಪರಮೇಶ್ವರ್, AI ಯುಗದಲ್ಲಿರುವ ನಾವು ಬುದ್ದ, ಬಸವ, ಗಾಂಧಿ ಹೇಳಿದ ಸಮಾನತೆಯ ಬಗ್ಗೆ ಮಾತನಾಡುತಿದ್ದೇವೆಯೇ ಹೊರತು ಅದನ್ನು ಅನುಸರಿಸುತ್ತಿಲ್ಲ. ವಿದ್ಯಾವಂತರು, ಪದವಿಧರರ ಸಂಖ್ಯೆ ಹೆಚ್ಚಾದಂತೆ ಅಸಮಾನತೆ ತೊಲಗಬೇಕಿತ್ತು.ಆದರೆ ಅದು ಮತ್ತೊಂದು ರೂಪದಲ್ಲಿ ನಮ್ಮೊಳಗೆ ಬೇರೂರುತ್ತಿದೆ. ವೇದಿಕೆಗಳಲ್ಲಿ ಮಾತನಾಡುವ ರೀತಿಯಲ್ಲಿ ನಾವು ನಡೆದುಕೊಳ್ಳುತ್ತಿಲ್ಲ. ನಮ್ಮ ನಡತೆ ಸರಿ ಹೋಗದ ಸಮಾನತೆ ಎಂಬುದು ಸಾಧ್ಯವಿಲ್ಲ. ಕೆಳ ಜಾತಿಯ ವ್ಯಕ್ತಿಯನ್ನು ಮದುವೆಯಾದಳು ಎಂಬ ಕಾರಣಕ್ಕೆ ತಂದೆಯೇ ಗರ್ಭೀಣಿ ಮಗಳನ್ನೇ ಕೊಲ್ಲುವಾಗ, ಭಾರತದ ಸಂಸ್ಕೃತಿ, ಪರಂಪರೆ ಎಷ್ಟು ಎತ್ತರಕ್ಕೆ ಬೆಳೆದು ಎನು ಪ್ರಯೋಜನ ಎಂದು ಡಾ.ಜಿ.ಪರಮೇಶ್ವರ್ ಪ್ರಶ್ನಿಸಿದರು.

ಸಮಾಜದಲ್ಲಿ ಸಮಾನತೆ ತರಲು ಹಲವರು ನಿರಂತರವಾಗಿ ಶ್ರಮಿಸಿದ್ದಾರೆ. ಅವರ ಸಾಲಿಗೆ ಕಾಗಿನೆಲೆ ಕನಕ ಗುರುಪೀಠ ಸಹ ಒಂದು ಹೆಜ್ಜೆ ಮುಂದಿರಿಸಿದೆ.ಇದು ಕಠಿಣ ಹಾದಿ,ಇಂತಹ ಸ್ವಾಮೀಜಿಗಳ ಸಂಖ್ಯೆ ಹೆಚ್ಚಬೇಕು.ನಮ್ಮಲ್ಲಿ ಆದರ್ಶಗಳಿಗೆ, ವಿಚಾರಧಾರೆಗಳಿಗೆ ಕೊರತೆಯಿಲ್ಲ. ಆದರೆ ಅವುಗಳನ್ನು ಪಾಲಿಸುತ್ತಿಲ್ಲ. ಮನುಷ್ಯತ್ವ, ಮಾನವೀಯತೆ ಕಲಿಸುವ ಕೆಲಸ ಆಗಬೇಕು. ಸಮಾಜದ ಪರಿವರ್ತನೆಯಲ್ಲಿ ತೊಡಗುವವರನ್ನು ನಾನು ಎಂದಿಗೂ ಗೌರವಿಸುತ್ತೇನೆ. ಹಾಗಾಗಿ ಕಾಗಿನೆಲೆ ಗುರುಪೀಠದ ಎಲ್ಲಾ ಕಾರ್ಯಗಳಿಗೆ ಬೆಂಬಲ ವಿದೆ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.
ಪ್ರಸ್ತುತ ಭಾರತ ಮತ್ತು ಗಾಂಧೀ ಚಿಂತನೆಗಳ ಪ್ರಸುತ್ತತೆ ಎಂಬ ವಿಷಯ ಕುರಿತು ಮಾತನಾಡಿದ ಪತ್ರಕರ್ತ ದಿನೇಶ್‌‌ಅಮೀನ‌ ಮಟ್ಟು,ಒಂದು ಕಾಲದಲ್ಲಿ ಭಾರತದ ರಾಜಕೀಯ ಸ್ವಾತಂತ್ರ,ಗ್ರಾಮ ಸ್ವರಾಜ್, ಅಸ್ಪೃಷ್ಯತೆ ನಿವಾರಣೆ, ಕೋಮು ಸೌಹಾರ್ಧತೆಗಾಗಿ ಹೋರಾಟ ಮಾಡಿದ ಗಾಂಧೀಜಿ, ಇಂದು ಯಾರಿಗೂ ಬೇಡದ ನಾಯಕನಾಗಿದ್ದಾರೆ.‌ ಮುಸ್ಲಿಂರನ್ನು ಪರ ಎಂಬ ಕಾರಣಕ್ಕೆ ಹಿಂದುಗಳು,‌ ಪಾಕಿಸ್ಥಾನ ವಿಭಜನೆಗೆ ಕಾರಣ ಎಂಬ ಕಾರಣಕ್ಕೆ ಮುಸ್ಲಿಂರು, ಅಂಬೇಡ್ಕರನ್ನು ವಿರೋಧಿಸಿದ್ದರು ಎಂದು ದಲಿತರು ಗಾಂಧೀಜಿಯನ್ನು ದೂರ ಇಟ್ಟಿದ್ದಾರೆ.ಆದರೆ ಗಾಂಧೀಜಿ ಅವರು ಪ್ರತಿಪಾದಿಸಿದ ಸ್ವಾತಂತ್ರ, ಸಮಾನತೆ, ಅಸ್ಪೃಷ್ಯತೆ ನಿವಾರಣೆ ಮತ್ತು ಕೋಮು ಸೌಹಾರ್ಧತೆ ಇವುಗಳು ಇಂದಿಗೂ ಪೂರ್ಣಗೊಂಡಿಲ್ಲ. ಧರ್ಮತಪ್ಪಲ್ಲ, ಆದರೆ ಧರ್ಮದ ಹೆಸರಿನಲ್ಲಿ ಕೋಮುವಾದಿಯಾಗುವುದು ತಪ್ಪು.
ಅತಿ ಅಸಮಾನತೆಯಿಂದ ಕೂಡಿದ ಮನುಸೃತಿಯನ್ನು ಅಂಬೇಡ್ಕರ್ ಸುಟ್ಟು ಹಾಕಿ,ಅದರ ಸ್ಥಾನದಲ್ಲಿ ಸಂವಿಧಾನವನ್ನುು ತಂದು,ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸುವ ಕನಸು ಕಂಡರು.ಆದರೆ ಮನುಸೃತಿಯನ್ನು ಮತ್ತೆ ಹುಟ್ಟು ಹಾಕುವ ಪ್ರಯತ್ನ ಈ ದೇಶದಲ್ಲಿ ನಡೆಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಅಸ್ಪೃಷ್ಯತೆ ಇಲ್ಲ ಎಂದು ಕೆಲವರಿದ್ದಾರೆ.ಆದರೆ  ಜಾತಿಗಣತಿಯನ್ನು ವಿರೋಧಿಸುತ್ತಾರೆ. ಅಸ್ಪೃಷ್ಯತೆ ಈ ದೇಶಕ್ಕೆ ಅಂಟಿದರೋಗ. ಮೊದಲು‌ರೋಗವಿದೆ ಎಂಬು ಒಪ್ಪಿಕೊಳ್ಳಬೇಕು. ತದನಂತರ‌ಅದರ ಪರಿಹಾರಕ್ಕೆ ಪ್ರಯತ್ನಿಸಬೇಕೇ ಹೊರತು, ರೋಗವೇಇಲ್ಲಎಂಬುದು ಸರಿಯಲ್ಲ.ಅಸ್ಪೃಷ್ಯತೆಆಗೋಚರವಾಗಿ ವ್ಯಾಪಕವಾಗಿ ಹರಡಿದೆ.ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯೊಬ್ಬ ಸಾಮಾನ್ಯ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆಲ್ಲುವುದು ಇಂದಿಗೂ ಕಷ್ಟವಿದೆ.ಗಾಂಧೀಜಿಯಕೈಯಲ್ಲಿನ ಕೋಲು ನೋಡಿದಾಗ ಭಯ ಮಾಯವಾಗಿ,ಭದ್ರತೆ ನಮ್ಮನ್ನುಆವರಿಸುತಿತ್ತು.ಇಂದು ಕೋಲು ಹಿಡಿದು ಮೆರವಣಿಗೆ ಹೊರಟರೆ ಭಯ ನಮ್ಮನ್ನುಆವರಿಸುತ್ತದೆ.ಅಹಿಂದ ಎಂಬ ಘೋಷಣೆ ಕೇವಲ ರಾಜಕೀಯ ಲಾಭಕ್ಕೆ ನಡೆದರೆ ಪ್ರಯೋಜನವಿಲ್ಲ.ಅದುಅರ್ಥಿಕ, ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ, ಸಾಹಿತ್ಯಕ, ಸಾಂಸ್ಕೃತಿಕ ವಲಯಗಳನ್ನು ಆವರಿಸಿಕೊಳ್ಳಬೇಕು.ಆಗ ಮಾತ್ರ ಯಶಸ್ವಿಯಾಗಲು ಸಾಧ್ಯಎಂದು ದಿನೇಶ ಅಮೀನಮಟ್ಟು ತಿಳಿಸಿದರು.

Share this Article
Leave a comment