ಶಿರಾ : ರೈತರು ಹೈನುಗಾರಿಗೆಯತ್ತ ಹೆಚ್ಚು ಆಕರ್ಷಣೆ ಹೊಂದಿ ಕ್ರೀಯಾಶೀಲತೆಯಿಂದ ಉದ್ಯಮದಲ್ಲಿ ತೊಡಗಿಸಿಕೊಂಡು ಆರ್ಥಿಕ ಶಕ್ತಿ ವೃದ್ಧಿಯೊಂದಿಗೆ ಜೀವನ ಮಟ್ಟ ಸುಧಾರಿಸುವ ದೃಷ್ಟಿಯಿಂದ
ತಾಲ್ಲೂಕಿನ ರೈತರಲ್ಲಿ ಸ್ಪರ್ಧಾತ್ಮಕ ಭಾವನೆ ಹಾಗೂ ಗುಣಮಟ್ಟದ ಹಾಲು ಉತ್ಪಾದನೆ ಮಾಡುವ ನಿಟ್ಟಿನಲ್ಲಿ ತಾಲ್ಲೂಕು ಮಟ್ಟದ ಹಾಲು ಕರೆಯುವ ಸ್ಪರ್ಧೆ ಏರ್ಪಡಿಸಿ ಹೈನುಗಾರಿಕೆಯನ್ನು ಉತ್ತೇಜುಸುತ್ತಿದ್ದೇವೆ ಎಂದು ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್. ಆರ್. ಗೌಡ ಹೇಳಿದರು.
ಶಿರಾ ತಾಲ್ಲೂಕಿನ ಪಟ್ಟನಾಯಕನಹಳ್ಳಿ ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಹಾಗೂ 23 ನೇ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದ ಅಂಗವಾಗಿ ಪಶುಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆ ಹಾಗೂ ತುಮಕೂರು ಹಾಲು ಒಕ್ಕೂಟದ ಸಹಯೋಗದೊಂದಿಗೆ ತಾಲ್ಲೂಕು ಮಟ್ಟದ ಹಾಲು ಕರೆಯುವ ಸ್ಪರ್ಧೆ ಹಾಗೂ ರಾಜ್ಯ ಮಟ್ಟದ ಹಳ್ಳಿಕಾರ್ ತಳಿಗಳ ಪ್ರದರ್ಶನ ಹಾಗೂ ಜಿಲ್ಲಾ ಮಟ್ಟದ ಶ್ವಾನಗಳ ಪ್ರದರ್ಶನ ಜ.9 ಮತ್ತು 10 ರಂದು ನಡೆಯಲಿದೆ ಎಂದು ನಗರದ ಪಶು ಇಲಾಖೆಯಲ್ಲಿ ಮಾಹಿತಿ ನೀಡಿ ಮಾತನಾಡಿದರು.
ಹಾಲು ಕರೆಯುವ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಥಮ ಬಹುಮಾನ 50 ಸಾವಿರವನ್ನು ತುಮಕೂರು ಹಾಲು ಒಕ್ಕೂಟದಿಂದ ನೀಡಲಾಗುವುದು, ದ್ವಿತೀಯ ಬಹುಮಾನ 30 ಸಾವಿರ, ತೃತೀಯ ಬಹುಮಾನ 20 ಸಾವಿರ ನಗದು ಬಹುಮಾನ ಜೊತೆ ಆಕರ್ಷಕ ಪಾರಿತೋಷಕ
ಹಾಗೂ ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ತಲಾ 2 ಸಾವಿರ ನಗದು ಜೊತೆಗೆ ಸಮಾಧಾನಕರ ಬಹುಮಾನ ಪಶು ಇಲಾಖೆಯಿಂದ ವಿತರಣೆ ಮಾಡಲಾಗುವುದು ಎಂದರು.
ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವೆ ಇಲಾಖೆ ಉಪ ನಿರ್ದೇಶಕ ಡಾ ಹೆಚ್. ಎಂ. ಶಿವಪ್ರಸಾದ್ ಮಾತನಾಡಿ:
ಹಾಲು ಕರೆಯುವ ಸ್ಪರ್ಧೆಯಲ್ಲಿ ಶಿರಾ ತಾಲೂಕಿನ ರೈತರಿಗೆ ಮಾತ್ರ ಅವಕಾಶವಿದ್ದು, ಜ.9ರ ಮಧ್ಯಾಹ್ನ 12 ರಿಂದ ನೊಂದಣಿ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ಸಂಜೆ 6 ಗಂಟೆಯ ನಂತರ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಹಸುಗಳಿಗೆ ತಂಗಲು ಸುಸಜ್ಜಿತವಾದ ವ್ಯವಸ್ಥೆ ಕಲ್ಪಿಸಲಾಗಿದ್ದು, ಜ.10ರ ಬೆಳಗ್ಗೆ ಕರೆಯುವ ಹಾಲಿನ ಆಧಾರದ ಮೇಲೆ ಬಹುಮಾನ ಘೋಷಣೆ ಮಾಡಲಾಗುವುದು ಎಂದರು.
ಪಶು ಪಾಲನ ಮತ್ತು ಪಶು ವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕರು ಡಾ. ಜೆ .ಸಂಪತ್ ಕುಮಾರ್ ಮಾತನಾಡಿ: ಶ್ರೀ ನಂಜಾವಧೂತ ಸ್ವಾಮಿಜಿಗಳ ಒತ್ತಾಸೆಯಂತೆ ರಾಜ್ಯಮಟ್ಟದ ಹಳ್ಳಿಕಾರ್ ತಳಿ ಪ್ರದರ್ಶನ ಹಾಗೂ
ಜಿಲ್ಲಾ ಮಟ್ಟದ ಶ್ವಾನ ಪ್ರದರ್ಶನ ಏರ್ಪಡಿಸಲಾಗಿದ್ದು, ಕೃಷಿ ಮಾರಾಟ ಇಲಾಖೆ ವತಿಯಿಂದ ಉತ್ತಮ ರಾಸುಗಳಿಗೆ ಪ್ರಥಮ ಬಹುಮಾನ 10 ಸಾವಿರ, ದ್ವಿತೀಯ 7 ಸಾವಿರ ತೃತೀಯ 5 ಸಾವಿರ ಬಹುಮಾನ ನೀಡಲಾಗುವುದು ಜೊತೆಗೆ ಜ. 10ರಂದು ನಡೆಯುವ ಜಿಲ್ಲಾ ಮಟ್ಟದ ಸ್ವಾನ ಪ್ರದರ್ಶನದಲ್ಲಿ ಉತ್ತಮ ಶ್ವಾನಗಳಿಗೆ ಪ್ರಥಮ ಬಹುಮಾನ 25 ಸಾವಿರ, ದ್ವಿತೀಯ ಬಹುಮಾನ 15 ಸಾವಿರ ಹಾಗೂ ತೃತೀಯ ಬಹುಮಾನ 10 ಸಾವಿರ ನೀಡಲಾಗುವುದು ಎಂದರು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಡಾ. ನಾಗೇಶ್ :9916142011.
ಮುಖ್ಯ ಪಶು ವೈದ್ಯಧಿಕಾರಿ ಡಾ. ಎಚ್. ನಾಗೇಶ್ ಸೇರಿದಂತೆ ತಾಲೂಕಿನ ಹಲವಾರು ಪಶು ವೈದ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
