ತುಮಕೂರು:ದೇಶದ ಸ್ವಾತಂತ್ರಕ್ಕಾಗಿದುಡಿದ 140 ವರ್ಷಗಳ ಇತಿಹಾಸವಿರುವಕಾಂಗ್ರೆಸ್ ಪಕ್ಷವನ್ನುದೇಶದಿಂದ ಮುಕ್ತ ಮಾಡುತ್ತೇವೆಎಂಬುದು ಭ್ರಮೆ.ಆರಂಭದಿAದಇಲ್ಲಿಯವರೆಗೂದೇಶದಎಲ್ಲಾಧರ್ಮ, ಜಾತಿಯಜನರನ್ನು ಸಮಾನವಾಗಿಕಾಣುವ ಪಕ್ಷಎಂದರೆಆದುಕಾAಗ್ರೆಸ್ ಮಾತ್ರಎಂದುಜಿಲ್ಲಾಕಾAಗ್ರೆಸ್ಅಧ್ಯಕ್ಷಜಿ.ಚAದ್ರಶೇಖರಗೌಡ ತಿಳಿಸಿದ್ದಾರೆ.
ನಗರದಜಿಲ್ಲಾಕಾಂಗ್ರೆಸ್ಕಚೇರಿಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ 140 ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಅಧ್ಯಕ್ಷತೆ ವಹಿಸಿ ಮಾತನಾಡುತಿದ್ದಅವರು,ಸಂವಿಧಾನದಆಶಯದAತೆ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ನೀತಿಯನ್ನುಕಾಂಗ್ರೆಸ್ ಅನುಸರಿಸಿಕೊಂಡು ಬಂದಿದೆ.ಸಾರಿಗೆ,ಬ್ಯಾAಕುಗಳ ರಾಷ್ಟೀಕರಣ,ಉಳುವವನೇ ಭೂಮಿಯಒಡೆಯಇನ್ನಿತರ ಕಾಯ್ದೆಗಳು ಬಡವರು ಶ್ರೀಮಂತರ ನಡುವಿನ ತಾರತಮ್ಯವನ್ನುಕಡಿಮೆ ಮಾಡುವಲ್ಲಿ ಸಹಕಾರಿಯಾಗಿದ್ದವು. ಆದರೆ ಇಂದಿನ ಪ್ರಧಾನಿಯ ಯೋಜನೆಗಳು ಬಡವರು ಮತ್ತು ಶ್ರೀಮಂತರ ನಡುವಿನ ಅಂತರವನ್ನು ಮತ್ತಷ್ಟು ಹೆಚ್ಚಿಸಿದೆ.ಕಾರ್ಪೋರೇಟ ಪರ ಕಾಯ್ದೆಗಳಿಂದ ಜನರತಲಾಆದಾಯದಲ್ಲಿಅಜಗಜಾಂತರ ವೆತ್ಯಾಸವಿದ್ದು, ಅಲ್ಲದೆಒಂದೊAದೆ ಕಾಯ್ದೆಗಳ ಮೂಲಕ ಸಂವಿಧಾನದ ಅಸ್ಥಿತ್ವವನ್ನು ಇಲ್ಲವಾಗಿಸುವ ಪ್ರಯತ್ನ ನಡೆದಿದೆ.ಇದನ್ನುಎಲ್ಲಾಕಾಂಗ್ರೆಸ್ಕಾರ್ಯಕರ್ತರು ವಿರೋಧಿಸಬೇಕಿದೆ.2026ರ ಜನವರಿಗೆ 05ರಂದು ನಡೆಯುವಎಂ.ಎನ.ಆರ್.ಜಿ.ಎ ಪರ ಹೋರಾಟದಲ್ಲಿ ನಾವೆಲ್ಲರೂ ಪಾಲ್ಗೊಳ್ಳೊಣ ಎಂದರು.

ಮಾಜಿ ಶಾಸಕ ಡಾ.ಎಸ್.ಷಪಿ ಅಹಮದ್ ಮಾತನಾಡಿ,ಕಾಂಗ್ರೆಸ್ಕಾರ್ಯಕರ್ತರು ಪಕ್ಷದ ಹುಟ್ಟಿನ ಹಿಂದಿರುವ ಮಹತ್ವವನ್ನುಅರ್ಥ ಮಾಡಿಕೊಳ್ಳಬೇಕು.ಪಕ್ಷ ನಿಷ್ಠರಾಗಿದ್ದರೆ ಒಂದಿಲೊAದು ದಿನ ಅಧಿಕಾರ ನಿಮ್ಮನ್ನು ಹುಡುಕಿಕೊಂಡು ಬರಲಿದೆ.ಅಧಿಕಾರಕ್ಕೆಇದುವರೆಗೂ ಬದುಕು ನೀಡಿದ ಪಕ್ಷಕ್ಕೆದ್ರೋಹ ಬಗೆಯಬಾರದು.ಪಕ್ಷಕಟ್ಟುವತ್ತ ನಾವೆಲ್ಲರೂಗಮನಹರಿಸಬೇಕಾಗಿದೆಎಂದರು.
ಜಿ.ಪA.ಮಾಜಿಅಧ್ಯಕ್ಷ ಹಾಗೂ ಡಿಸಿಸಿ ಮಾಜಿಅಧ್ಯಕ್ಷಕೆಂಚಮಾರಯ್ಯ ಮಾತನಾಡಿ,ಬ್ರಿಟಿಷರ ದಬ್ಬಾಳಿಕೆಯನ್ನು ಕೊನೆಗಾಣಿಸುವಉದ್ದೇಶದಿಂದ ಮೋತಿಲಾಲ್ ನೆಹರು, ಗೋಕಲೆ ಸೇರಿದಂತೆ ಹಲವು ನಾಯಕರು ಸೇರಿ ಎ.ಓ,ಹ್ಯೂಮ್ಎನ್ನುವ ಬ್ರಿಟಿಷ್ಅಧಿಕಾರಿ ಮುಂದಾಳತ್ವದಲ್ಲಿ 1885ರಲ್ಲಿ ಕಾಂಗ್ರೆಸ್ಕಟ್ಟಿದರು.ಗಾAಧಿಆಗಮನವದವರೆಗೂತೀವ್ರಗಾಮಿ ಸ್ವರೂಪದಲ್ಲಿದ್ದ ಚಳವಳಿ,ಸತ್ಯ, ಅಹಿಂಸೆ,ಶಾAತಿ ಎಂಬ ಮೂರು ಅಂಶಗಳ ಮೇಲೆ ರೂಪಗೊಂಡು, ಬ್ರಿಟಿಷರನ್ನು ಭಾರತದಿಂದತೊಲಗಿಸಲು ಸಹಾಯವಾಯಿತು.ಆದರೆಇಂದುದೇಶದಜನರುಗಾAಧಿ ಹೆಸರು ಹೇಳಲು ಹಿಂಜರಿಯವAತಹ ವಾತಾವರಣ ಸೃಷ್ಟಿಯಾಗಿದೆ.ದೇಶದಯುವಜನರಿಗೆ ಸ್ವಾತಂತ್ರ ಹೋರಾಟದಅನುಭವವೇಇಲ್ಲದಂತಾಗಿದೆ.ಯುವಜನರಿಗೆ ತಿಳಿ ಹೇಳುವ ಕೆಲಸ ಆಗಬೇಕು.ಹಾಗೆಯೇಕಾಂಗ್ರೆಸ್ ಪಕ್ಷದಲ್ಲಿದ್ದು, ಎಲ್ಲವನ್ನು ಅನುಭವಿಸಿದ ನಂತರ ಬೇರೆ ಪಕ್ಷಕ್ಕೆ ಹೋಗುವವ ಅವಕಾಶವಾದಿಗಳನ್ನು ಪಕ್ಷದಿಂದ ಹೊರ ಹಾಕಬೇಕಾಗಿದೆಎಂದರು.
ಮುಖAಡರಾದಇಕ್ಬಾಲ್ಅಹಮದ್ ಮಾತನಾಡಿ,ಕಾಂಗ್ರೆಸ್ ಪಕ್ಷದಅನೇಕರತ್ಯಾಗ ಬಲಿಧಾನದಿಂದದೇಶಕ್ಕೆ ಸ್ವಾತಂತ್ರ ಲಭಿಸಿದೆ. ಇಂತಹ ಪಕ್ಷದ ಬಗ್ಗೆ ಕೆಟ್ಟದಾಗಿ ಮಾತನಾಡುವವರಿಗೆ ಸರಿಯಾಗಿತಿರುಗೇಟುಕೊಡುವ ನಿಟ್ಟಿನಲ್ಲಿಕಾರ್ಯಕರ್ತರು ಪ್ರಜ್ಞಾವಂತಿಕೆ ಬೆಳೆಸಿಕೊಳ್ಳಬೇಕು.ಎಸ್.ಐ.ಆರ್.ಮೂಲಕ ಕಾಂಗ್ರೆಸ್ ಬೆಂಬಲಿಗರ ಮತ ಕಸಿಯುವ ಪ್ರಯತ್ನಕ್ಕೆ ಅವಕಾಶ ನೀಡದೆ ಮತದಾರರ ಪಟ್ಟಿ ಪರಿಷ್ಕರಣೆಯನ್ನುಎಚ್ಚರಿಕೆಯಿಂದ ಗಮನಿಸಿ, ಪ್ರತಿ ಮತದಾರರ ಹಕ್ಕನ್ನುರಕ್ಷಿಸಬೇಕಾಗಿದೆಎಂದರು.
ಮಹಿಳಾ ಮುಖಂಡರಾದಡಾ.ಅರುAಧತಿ ಮಾತನಾಡಿ,ಸುಳ್ಳನ್ನು ವಿಜೃಂಭಿಸಿ ಬಿಜೆಪಿ ಅಧಿಕಾರ ಹಿಡಿಯುತ್ತಿದೆ. ಇಂತಹ ಸುಳ್ಳಿನ ಮುಖವಾಡ ಕಳಚಬೇಕು.ರಾಜ್ಯದಲ್ಲಿ ಕಾಂಗ್ರೆಸ್ನನ್ನು ಬಲಗೊಳಿಸಲು ನಾವೆಲ್ಲರೂ ಪ್ರಯತ್ನಿಸಬೇಕಾಗಿದೆಎಂದರು.
ಗೃಹ ಹಾಗೂ ಜಿಲ್ಲಾಉಸ್ತುವಾರಿ ಸಚಿವರುಕಾಂಗ್ರೆಸ್ ಸಂಸ್ಥಾಪನಾ ದಿನದ ಅಂಗವಾಗಿ ಹಿರಿಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.ಈ ವೇಳೆ ಕೆಪಿಸಿಸಿ ರಾಜ್ಯಉಪಾಧ್ಯಕ್ಷರಾದಆರ್.ರಾಮಕೃಷ್ಣ,ಗ್ರಾಮಾಂತರ ಬ್ಲಾಕ್ಕಾಂಗ್ರೆಸ್ಅಧ್ಯಕ್ಷಕೆAಪಣ್ಣ,ಪಾಲಿಕೆ ಮಾಜಿಉಪಮೇಯರ್ಅಸ್ಲಾಂಪಾಷ,ಮಾಜಿ ಶಾಸಕರಾದಗಂಗಹನುಮಯ್ಯ ಸೇರಿದಂತೆ ಹಲವರು ಮಾತನಾಡಿದರು. ಕಾರ್ಯಕ್ರಮದಲ್ಲಿಯುವಕಾಂಗ್ರೆಸ್ ಮುಖಂಡಜೈನ್ ಷೇಕ್ ಫಯಾಜ್,ಜಿಲ್ಲಾಉಪಾಧ್ಯಕ್ಷರಾದರಂಗಸ್ವಾಮಯ್ಯ ಸಿದ್ದಾಪುರ,ನರಸೀಯಪ್ಪ, ಬಿ.ಜಿ.ಲಿಂಗರಾಜು,ಶಿವಾಜಿ,ಅತೀಕ್ಅಹಮದ್,ಸುಜಾತ,ವಿಜಯಲಕ್ಷಿö್ಮ, ಮುಬೀನ, ಭಾಗ್ಯ, ಜಯಮೂರ್ತಿ,ಸೇವಾದಳದ ಬೈಲಪ್ಪ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
