ರಾಜ್ಯಮಟ್ಟದ ಕ್ರಿಕೆಟ್ ಟೂರ್ನಿ: ಜಯಕರ್ನಾಟಕ ತಂಡ ಚಾಂಪಿಯನ್

Surya Pragathi Editor
3 Min Read

ತುಮಕೂರು- ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಡಾ. ರಾಜ್ ಸಾಂಸ್ಕöÈತಿಕ ಹಾಗೂ ಕ್ರೀಡಾ ಸಂಘ ಮತ್ತು ಚಕ್ರವರ್ತಿ ಸ್ಪೋರ್ಟ್್ಸ ಅಸೋಸಿಯೇಷನ್ ವತಿಯಿಂದ ನಾಲ್ಕು ದಿನಗಳ ಕಾಲ ಖ್ಯಾತ ವೈದ್ಯರಾದ ದಿ. ಡಾ. ಸಿ. ಜಯರಾಮರಾವ್ ಸ್ಮರಣಾರ್ಥ ಹಮ್ಮಿಕೊಂಡಿದ್ದ ಡಾ.ಪುನೀತ್ ರಾಜ್ ಕಪ್ ರಾಜ್ಯಮಟ್ಚದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬೆಂಗಳೂರಿನ ಜಯಕರ್ನಾಟಕ ತಂಡ ಜಯಗಳಿಸಿ ಚಾಂಪಿಯನ್ ಆಗಿ ಹೊರ ಹೊಮ್ಮಿತು.
ಕಳೆದ 4 ದಿನಗಳಿಂದ ನಡೆದ ಹೊನಲು ಬೆಳಕಿನ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧೆಡೆಗಳಿಂದ 16 ತಂಡಗಳು ಭಾಗವಹಿಸಿದ್ದವು. ಅಂತಿಮವಾಗಿ ಫೈನಲ್ ಪಂದ್ಯದಲ್ಲಿ ಬೆಂಗಳೂರು ಜಯಕರ್ನಾಟಕ ಮತ್ತು ಜಾನ್ಸನ್ ಜೇನುಗೂಡು ಕುಂದಾಪುರ ತಂಡಗಳ ನಡುವೆ ಹಣಾಹಣಿ ನಡೆದು ಕೊನೆಗೆ ಬೆಂಗಳೂರಿನ ಜಯಕರ್ನಾಟಕ ತಂಡ ಉತ್ತಮ ಪ್ರದರ್ಶನ ನೀಡಿ ಗೆಲುವು ಸಾಧಿಸಿತು. ಜಾನ್ಸನ್ ಜೇನುಗೂಡು ಕುಂದಾಪುರ ತಂಡ ರನ್ನರ್ ಅಪ್ ಸ್ಥಾನ ಪಡೆದುಕೊಂಡಿತು.
4 ದಿನಗಳ ಕಾಲ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿ ಪ್ರಥಮ ಸ್ಥಾನ ಪಡೆದ ಬೆಂಗಳೂರು ಜಯಕರ್ನಾಟಕ ತಂಡಕ್ಕೆ ಪಿ.ಎನ್.ಕೃಷ್ಣಮೂರ್ತಿ ರವರು ನೀಡಿದ 5 ಲಕ್ಷ ರೂ. ನಗದು ಬಹುಮಾನ ಹಾಗೂ ಟ್ರೋಫಿ ಹಾಗೂ ರನ್ನರ್ ಅಪ್ ಜಾನ್ಸನ್ ಜೇನುಗೂಡು ಕುಂದಾಪುರ ತಂಡಕ್ಕೆ 2.50 ಲಕ್ಷ ರೂ. ನಗದು ಬಹುಮಾನ ಹಾಗೂ ಟ್ರೋಫಿ ನೀಡಲಾಯಿತು.
ಕ್ರಿಕೆಟ್ ಟೂರ್ನಿಯಲ್ಲಿ ಗೆಲುವು ಸಾಧಿಸಿದ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಶಾಸಕ ಜ್ಯೋತಿಗಣೇಶ್, ಡಾ. ರಾಜ್ ಸಾಂಸ್ಕöÈತಿಕ ಹಾಗೂ ಕ್ರೀಡಾ ಸಂಘ ಮತ್ತು ಚಕ್ರವರ್ತಿ ಸ್ಪೋರ್ಟ್್ಸ ಅಸೋಸಿಯೇಷನ್‌ನ ವತಿಯಿಂದ ಕಳೆದ 4 ದಿನಗಳಿಂದ ನಡೆದ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ನಗರದ ನಾಗರಿಕರು ಉತ್ತಮ ಸಹಕಾರ ನೀಡಿದ್ದಾರೆ. ಇಂತಹ ಕ್ರೀಡೆಗಳಿಗೆ ಸರ್ಕಾರಿ ಜೂನಿಯರ್ ಕಾಲೇಜು ಮೈದಾನ ಹೆಚ್ಚು ಹೆಚ್ಚು ಬಳಕೆಯಾಗಬೇಕು ಎಂದರು.
ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಅತಿ ಹೆಚ್ಚು ಸಾಂಸ್ಕöÈತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಕ್ರೀಡಾಕೂಟಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯಲಿ ಎಂದ ಅವರು, ಇತ್ತೀಚೆಗೆ ನಡೆದ ಮಹಿಳಾ ಅಂಧರ ತಂಡದ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಜಿಲ್ಲೆಯ ಇಬ್ಬರು ಮಹಿಳೆಯರು ಭಾಗವಹಿಸಿ ಗೆಲುವು ಸಾಧಿಸಿದ್ದಾರೆ. ಇದನ್ನೇ ಸ್ಫೂರ್ತಿಯಾಗಿಸಿಕೊಂಡು ಮಹಿಳೆಯರಿಗೆ ಈ ಮೈದಾನದಲ್ಲಿ ತರಬೇತಿ ನೀಡುವ ಕೆಲಸ ಆಗಬೇಕಿದೆ ಎಂದು ಹೇಳಿದರು.


ಡಾ. ಜಯರಾಮರಾವ್ ಸ್ಮರಣಾರ್ಥ ಈ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡಿದ್ದು ಉತ್ತಮ ಕಾರ್ಯವಾಗಿದೆ. ಡಾ. ಜಯರಾಮರಾವ್ ರವರು ಸಹ ಕ್ರಿಕೆಟ್ ಪಂದ್ಯಾವಳಿಗಳಿಗೆ ಉತ್ತಮ ಪ್ರೋತ್ಸಾಹ ನೀಡುತ್ತಿದ್ದರು ಎಂದು ಹೇಳಿದರು.
ಪಿ.ಎನ್. ಕೃಷ್ಣಮೂರ್ತಿಯವರು ಸ್ವತಃ ಕ್ರೀಡಾಪಟುಗಳಾಗಿದ್ದು, ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದರು.
ಮುಖಂಡರಾದ ಪಿ.ಎನ್. ಕೃಷ್ಣಮೂರ್ತಿ ಮಾತನಾಡಿ, ಯಾರೇ ಶಾಸಕರಾದರೂ ಜಿಲ್ಲೆಯಲ್ಲಿ ಕ್ರೀಡೆಗೆ ಹೆಚ್ಚು ಪ್ರಾಶಸ್ತ÷್ಯ ನೀಡಬೇಕು. ಮೈದಾನಗಳನ್ನು ನವೀಕರಣ ಮಾಡಿಸುವ ಮೂಲಕ ಕ್ರೀಡಾಪಟುಗಳಿಗೆ ಉತ್ತೇಜನ ನೀಡಬೇಕು ಎಂದರು.
ಪ್ರತಿ ವರ್ಷವೂ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜನೆ ಮಾಡುತ್ತಾ ಬಂದಿದ್ದೇವೆ. ಮುಂದಿನ ವರ್ಷವೂ ಸಹ ಇದಕ್ಕಿಂತ ದೊಡ್ಡಮಟ್ಟದಲ್ಲಿ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಲಾಗುವುದು. ತುಮಕೂರಿನ ಕ್ರಿಕೆಟ್ ಆಟಗಾರರು ಅಂತಾರಾಷ್ಟಿçÃಯ ಮಟ್ಟದಲ್ಲಿ ಆಡುವಂತಾಗಬೇಕು ಎಂಬುದು ನನ್ನ ಆಶಯ ಎಂದು ಹೇಳಿದರು.
ಡಾ. ರಾಜ್ ಸಾಂಸ್ಕöÈತಿಕ ಹಾಗೂ ಕ್ರೀಡಾ ಸಂಘ ಮತ್ತು ಚಕ್ರವರ್ತಿ ಸ್ಪೋರ್ಟ್್ಸ ಕ್ಲಬ್ ಗೌರವಾಧ್ಯಕ್ಷ ಹೆಚ್.ಎನ್ ದೀಪಕ್ ಮಾತನಾಡಿ, ಕಳೆದ 4 ದಿನಗಳಿಂದ ನಡೆದ ಹೊನಲು-ಬೆಳಕಿನ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿ ಯಶಸ್ವಿಗೆ ಸಹಕಾರ ನೀಡಿದ ತುಮಕೂರು ಜನತೆ, ರಾಜಕಾರಣಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.
ನಾಲ್ಕು ದಿನಗಳ ಕಾಲ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೊಡಗು, ಬೆಂಗಳೂರು, ಉಡುಪಿ, ಮಂಗಳೂರು, ತುಮಕೂರು ತಂಡಗಳು ಸೇರಿದಂತೆ 16 ತಂಡಗಳು ಭಾಗವಹಿಸಿದ್ದವು. ಈ ಎಲ್ಲ ತಂಡದ ಕ್ರೀಡಾಪಟುಗಳಿಗೂ ಧನ್ಯವಾದಗಳು. ಹಾಗೆಯೇ ಮುಂದಿನ ದಿನಗಳಲ್ಲೂ ಸಹ ತುಮಕೂರಿನಲ್ಲಿ ಇನ್ನು ದೊಡ್ಡಮಟ್ಟದಲ್ಲಿ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಲಾಗುವುದು. ಇದಕ್ಕೆ ನಗರದ ಜನತೆಯ ಸಹಕಾರ ಅತಿ ಮುಖ್ಯ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಪಿ.ಎನ್. ಕೃಷ್ಣಮೂರ್ತಿ, ಕೆಸಿಎ ತುಮಕೂರು ವಲಯದ ಅಧ್ಯಕ್ಷ ಸಿ.ಆರ್. ಹರೀಶ್, ಡಾ. ರಾಜ್ ಸಾಂಸ್ಕöÈತಿಕ ಹಾಗೂ ಕ್ರೀಡಾ ಸಂಘ ಮತ್ತು ಚಕ್ರವರ್ತಿ ಸ್ಪೋರ್ಟ್್ಸ ಕ್ಲಬ್ ಗೌರವಾಧ್ಯಕ್ಷ ಹೆಚ್.ಎನ್ ದೀಪಕ್, ಡಾ. ರಾಜ್ ಸಾಂಸ್ಕöÈತಿಕ ಹಾಗೂ ಕ್ರೀಡಾ ಸಂಘದ ಅಧ್ಯಕ್ಷ ಶಂಕರ್, ಚಕ್ರವರ್ತಿ ಸ್ಪೋರ್ಟ್್ಸ ಕ್ಲಬ್ ಅಧ್ಯಕ್ಷ ಪ್ರಕಾಶ್, ಕಾರ್ಯದರ್ಶಿ ರಂಜನ್, ಕೆ. ಅರವಿಂದ್, ಹಿರಿಯ ಆಟಗಾರರಾದ ವೆಂಕಟೇಶ್, ಗೋಪಾಲ್ ಮತ್ತಿತರರು ಭಾಗವಹಿಸಿದ್ದರು.

Share this Article
Leave a comment