
ತುಮಕೂರು:ದೇಶಕ್ಕೆ ಸ್ವಾತಂತ್ರ ಬಂದು 78 ವರ್ಷ ಕಳೆದರು ಸಂವಿಧಾನದಅರ್ಟಿಕಲ್ 21(ಎ)ಅಡಿಯಲ್ಲಿದೇಶದ ಮಕ್ಕಳಿಗೆ ಉಚಿತಗುಣಮಟ್ಟದ ಶಿಕ್ಷಣ ನೀಡಲಾಗದೆ ಸರಕಾರಗಳ ವಿರುದ್ದ ಹಾಗೂ ಕೆ.ಪಿ.ಎಸ್ ಮ್ಯಾಗ್ನೇಟ್ ಶಾಲೆಯ ಹೆಸರಿನಲ್ಲಿ 41 ಸಾವಿರ ಸರಕಾರಿ ಶಾಲೆಗಳನ್ನು ಮುಚ್ಚಲು ಹೊರಟಿರುವ ಸರಕಾರದಕ್ರಮವನ್ನು ಖಂಡಿಸಿ, ಜನವರಿ 26ರ ಗಣರಾಜೋತ್ಸವ ದಿನದೊಂದುಕರ್ನಾಟಕರಾಜ್ಯರೈತ ಹಾಗೂ ಎಸ್.ಡಿ.ಎಂ.ಸಿ ಸಂಘದವತಿಯಿAದಕಪ್ಪು ಬಾವುಟದೊಂದಿಗೆ
ಹಮ್ಮಿಕೊಂಡಿರುವುದಾಗಿರೈತ ಸಂಘದ ಬಿ.ಆರ್.ಯೋಗೀಶ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಶಿಕ್ಷಣದಲ್ಲಿ ಖಾಸಗೀಕರಣಕ್ಕೆ ಅವಕಾಶ ಮಾಡಿಕೊಟ್ಟ ಪರಿಣಾಮ ಉಳ್ಳವರಿಗೆ ಒಂದುರೀತಿ ಶಿಕ್ಷಣ, ಇಲ್ಲದವರಿಗೆಒಂದುರೀತಿಯ ಶಿಕ್ಷಣ ಎಂಬುವAತಾಗಿದೆ.ಇದಕ್ಕೆ ಸರಕಾರದ ನೀತಿಗಳೇ ಕಾರಣವಾಗಿದ್ದು, ಸರಕಾರಎಚ್ಚೆತ್ತುಕೊಂಡು,ಎಲ್ಲಾ ಮಕ್ಕಳಿಗೆ ಉಚಿತಗುಣಮಟ್ಟದ ಶಿಕ್ಷಣ ಖಚಿತ ಪಡಿಸದಿದ್ದಲ್ಲಿ, 2026ರ ಜನವರಿ 26ರ ಗಣರಾಜೋತ್ಸವ ದಿನದಂದುರೈತ ಸಂಘದಕಾರ್ಯಕರ್ತರು ಹಾಗೂ ಎಸ್.ಡಿ.ಎಂ.ಸಿ ಸಂಘದ ಸದಸ್ಯರುಗಳು ಬಲಗೈಯಲ್ಲಿತ್ರಿವರ್ಣದ್ವಜ ಹಾಗೂ ಎಡಗೈಯಲ್ಲಿಕಪ್ಪು ಬಾವುಟ ಹಿಡಿದುರಾಜ್ಯದಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿಎದುರು ಪ್ರತಿಭಟನೆ ನಡಸಲುತೀರ್ಮಾನಿಸಲಾಗಿದೆ ಎಂದರು.
ರಾಜ್ಯದಲ್ಲಿಕಾರ್ಯನಿರ್ವಹಿಸುತ್ತಿರುವ ಬಹುತೇಕ ಖಾಸಗಿ ಶಾಲೆಗಳನ್ನು ರಾಜಕಾರಣಿಗಳು ಮತ್ತುಅವರ ಹಿಂಬಾಲಕರು ನಡೆಸುತ್ತಿದ್ದಾರೆ.ಹಾಗಾಗಿ ಸರಕಾರದಯಾವ ನಿಯಮಗಳಿಗೆ ಅವರ ಬಳಿ ಬೆಲೆ ಇಲ್ಲದಂತಾಗಿದೆ.ಇದರ ಪರಿಣಾಮಎಲ್.ಕೆ.ಜಿ. ಶಿಕ್ಷಣಕ್ಕೆ ಲಕ್ಷಗಟ್ಟಲೆ ಶುಲ್ಕ ಕಟ್ಟುವಂತಾಗಿದೆ.ಬಡ ಮತ್ತು ಮಧ್ಯಮ ವರ್ಗದಜನರು ಸರಕಾರಿ ಶಾಲೆಗಳ ನಿರ್ಲಕ್ಷತನಕ್ಕೆ ಬೇಸತ್ತು ಸಾಲ,ಸೋಲ ಮಾಡಿತಮ್ಮ ಮಕ್ಕಳನ್ನು ದೊಡ್ಡ ಶಾಲೆಗಳಿಗೆ ಸೇರಿಸಿ,ಫೀ ಹೊಂದಿಸಲಾಗದೆ ಪರದಾಡುವಂತಹ ಸ್ಥಿತಿ ಇದೆ.ಹಾಗಾಗಿ ಸರಕಾರ ಸಂವಿಧಾನದಅರ್ಟಿಕಲ್ 21(ಎ)ಪ್ರಕಾರಎಲ್ಲಾ ಮಕ್ಕಳಿಗೆ ಯಾವುದೇತಾರತಮ್ಯವಿಲ್ಲದೆಗುಣಮಟ್ಟದಉಚಿತ ಶಿಕ್ಷಣವನ್ನು ಖಚಿತ ಪಡಿಸಬೇಕುಎಂಬುದುಕರ್ನಾಟಕರಾಜ್ಯರೈತ ಸಂಘ ಮತ್ತು ಎಸ್.ಡಿ.ಎಂ.ಸಿ ಸಂಘದಒತ್ತಾಯವಾಗಿದೆ.ಸರಕಾರತ್ವರಿತವಾಗಿಕ್ರಮ ಕೈಗೊಳ್ಳದಿದ್ದರೆ ಈಗಾಗಲೇ ಕರೆ ನೀಡಿರುವಂತೆಗಣರಾಜೋತ್ಸವ ದಿನದಂದುಕಪ್ಪು ಬಾವುಟದೊಂದಿಗೆ ಪ್ರತಿಭಟನೆ ಅನಿವಾರ್ಯಎಂದುಯೋಗೀಶ್ ತಿಳಿಸಿದರು.
ಎಸ್.ಡಿ.ಎಂ.ಸಿ ಸಂಘದಅಧ್ಯಕ್ಷ ಶಿವರಾಜು ಮಾತನಾಡಿ,ಸರಕಾರಿ ಶಾಲೆಗಳು ಪ್ರಜಾಪ್ರಭುತ್ವದಆಧಾರ ಸ್ತಂಭಗಳಿದ್ದAತೆ, ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಾದರೆ ಸರಕಾರಿ ಶಾಲೆಗಳು ಉಳಿಯಬೇಕು. ಈ ನಿಟ್ಟಿನಲ್ಲಿ ಎಸ್.ಡಿ.ಎಂ.ಸಿ ಸದಸ್ಯರುಗಳ ಸಂಘ ಕೆಪಿಎಸ್ ಮ್ಯಾಗ್ನಟ್ ಶಾಲೆಯ ಹೆಸರಿನಲ್ಲಿ ವಿಲೀನಗೊಳಿಸಲು ಹೊರಟಿರುವ 41 ಸಾವಿರ ಸರಕಾರಿ ಶಾಲೆಗಳನ್ನು ಉಳಿಸಲು ಕಳೆದ ಡಿಸೆಂಬರ್ 17-18 ಮತ್ತು 19 ರಂದು ಮೂರು ದಿನಗಳ ಕಾಲ ಮೈಸೂರಿನಲ್ಲಿಧರಣಿ ನಡೆಸಿ, ಸರಕಾರಿ ಶಾಲೆಗಳ ಉಳಿವಿಗೆ ಕ್ರಮ ಕೈಗೊಳ್ಳಲು ಡಿಸೆಂಬರ್ 31 ರವರೆಗೆಗಡುವು ನೀಡಿದ್ದರೂ ಸರಕಾರ ಈ ನಿಟಿನಲ್ಲಿಯಾವುದೇಕ್ರಮಕೈಗೊಂಡಿಲ್ಲ.ಸರಕಾರದ ಈ ನಿರ್ಲಕ್ಷವನ್ನು ಖಂಡಿಸಿ, ಸಂವಿಧಾನದಅರ್ಟಿಕಲ್ 21(ಎ) ಅನ್ವಯಎಲ್ಲಾ ಮಕ್ಕಳಿಗೆ ಗುಣಮಟ್ಟದಉಚಿತ ಶಿಕ್ಷಣಕ್ಕೆ ಆಗ್ರಹಿಸಿ ಸರಕಾರಕ್ಕೆಎಚ್ಚರಿಕೆ ನೀಡುತಿದ್ದೆವೆ.ಸರಕಾರಎಚ್ಚೆತ್ತು ಸರಕಾರಿ ಶಾಲೆಗಳ ಉಳಿವಿಗೆ ಪ್ರಯತ್ನಿಸದಿದ್ದರೆ 2026ರ ಜನವರಿ 26 ರಂದುರಾಜ್ಯದಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿಎದುರು ಬಲಗೈಯಲ್ಲಿ ಭಾರತದತ್ರಿವರ್ಣದ್ವಜ, ಎಡಗೈಯಲ್ಲಿ ಪ್ರತಿಭಟನೆಯ ಸಂಕೇತವಾದಕಪ್ಪು ಬಾವುಟ ಹಿಡಿದುಧರಣಿ ನಡೆಸಲುತೀರ್ಮಾನಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ನಾಗರತ್ನಮ್ಮ,ಮಂಜುನಾಥ್, ಮಾ.ನ,ಕರಿಬಸವಪ್ಪ, ಕೆ.ಚಂದ್ರಶೇಖರ್, ತುರುವೇಕೆರೆ, ಚಿಕ್ಕನಾಯಕನಹಳ್ಳಿಯ ಚಂದ್ರಣ್ಣ, ರಾಮಚಂದ್ರಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.
