ಶುದ್ಧ ಕುಡಿಯುವ ನೀರು ಬಳಸುವಂತೆ 2೦೦೦ ಕ್ಕೂ ಹೆಚ್ಚು ಕುಡಿಯುವ ನೀರಿನ ಕ್ಯಾನ್ ವಿತರಣೆ.

Surya Pragathi Editor
2 Min Read

ವರದಿ; ನವೀನ್ ಶಿರಾ…

ಶಿರಾ : ತಾಲೂಕಿನ ಶಾಸಕರು ಹಾಗೂ ಮಾಜಿ ಸಚಿವರಾದ ಮರೆಯಲಾಗದ ಮಾಣಿಕ್ಯ ದಿ. ಬಿ.ಸತ್ಯನಾರಾಯಣ ಅವರು ಹಾಕಿ ಕೊಟ್ಟಿರುವ ಮಾರ್ಗದರ್ಶನದಲ್ಲಿ ನಡೆಯುತ್ತೇನೆ. ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ಪುನೀತ್ ಗೌಡ ಹೇಳಿದರು.
ಅವರು ನಗರದಲ್ಲಿ ಪುನೀತ್ ಗೌಡ ಬ್ರಿಗೇಡ್ ಹಾಗೂ ಅಭಿಮಾನಿಗಳು ಏರ್ಪಡಿಸಿದ್ದ ಪುನೀತ್ ಗೌಡ ಅವರ ಹುಟ್ಟು ಹಬ್ಬ ಆಚರಣೆಯಲ್ಲಿ ಭಾಗವಹಿಸಿ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಸುಮಾರು 2೦೦೦ ಕ್ಕೂ ಹೆಚ್ಚು ಕುಡಿಯುವ ನೀರಿನ ಕ್ಯಾನ್‌ಗಳನ್ನು ವಿತರಿಸಿ ಮಾತನಾಡಿದರು. ತಾಲ್ಲೂಕಿನಲ್ಲಿ ಜನತೆ ತಮ್ಮ ಆರೋಗ್ಯದ ದೃಷ್ಠಿಯಿಂದ ಶುದ್ಧ ಕುಡಿಯುವ ನೀರನ್ನು ಬಳಸುವುದರ ಮೂಲಕ ಬಹುತೇಕ ಆನಾರೋಗ್ಯ ಬಾರದಂತೆ ತಡೆಗಟ್ಟಬಹುದು, ಮನುಷ್ಯನಿಗೆ ಜೀವಿಸಲು ಅತೀ ಮುಖ್ಯವಾಗಿ ಬೇಕಿರುವುದು ಶುದ್ಧ ಗಾಳಿ, ನೀರು ಹಾಗೂ ಆಹಾರ, ಈ ಎಲ್ಲಾವನ್ನು ಗಮನದಲ್ಲಿಟ್ಟುಕೊಂಡು ಇಂದು ಕುಡಿಯುವ ನೀರಿನ ಕ್ಯಾನ್ ವಿತರಣೆ ಮಾಡುವುದರ ಮೂಲಕ ನನ್ನ ಹುಟ್ಟಿಹಬಕ್ಕೆ ನನ್ನ ಅಭಿಮಾನಿಗಳು ನಿಜಾರ್ಥ ನೀಡಿದ್ದಾರೆಎಂದರು, ಶಿರಾ ತಾಲೂಕಿನಲ್ಲಿ ದಿ. ಬಿ.ಸತ್ಯನಾರಾಯಣ ಅವರು ಸಾವಿರಾರು ಜನರಿಗೆ ಹಕ್ಕುಪತ್ರ ನೀಡಿದ ಮಹಾನ್ ನಾಯಕರು. ಎಲ್ಲಾ ಜಾತಿ ಜನಾಂಗದವರನ್ನು ರಾಜಕೀಯವಾಗಿ ಬೆಳೆಸಿದವರು. ಅವರ ಅವಧಿಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಆದ್ದರಿಂದ ಅವರ ಪುತ್ಥಳಿಯನ್ನು ನಿರ್ಮಿಸಲು ನಗರಸಭೆ ವತಿಯಿಂದ ಸ್ಥಳವಾಕಾಶ ನೀಡಬೇಕು. ಅದಕ್ಕೆ ನಗರಸಭೆ ಪೌರಾಯುಕ್ತರಿಗೆ ಮನವಿ ಮಾಡುವುದಾಗಿ ತಿಳಿಸಿದರು. ಇಂದು ನನ್ನ ಹುಟ್ಟು ಹಬ್ಬವನ್ನು ಸಮಾಜಮುಖಿ ಕೆಲಸ ಮಾಡುವುದರ ಮೂಲಕ ಅದ್ಧೂರಿಯಾಗಿ ಆಚರಿಸಿದ ಎಲ್ಲರಿಗೂ ನಾನು ಋಣಿಯಾಗಿರುತ್ತೇನೆ. ನನ್ನ ಮೇಲೆ ಇಟ್ಟಿರುವ ನಂಬಿಕೆ ಉಳಿಸಿಕೊಂಡು ಹೋಗುತ್ತೇನೆ ಎಂದರು.
ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡ ಮಾತನಾಡಿ ಶಿರಾ ತಾಲೂಕಿನ ಯುವ ಜನತಾ ದಳದ ಅಧ್ಯಕ್ಷ ಪುನೀತ್ ಗೌಡ ಅವರ ಹುಟ್ಟು ಹಬ್ಬವನ್ನು ತಾಲೂಕಿನ ಯುವ ಬಳಗ ಅದ್ಧೂರಿಯಾಗಿ ಆಚರಣೆ ಮಾಡಿದ್ದಾರೆ. ಪುನೀತ್ ಗೌಡ ಅವರು ಮಿಂಚಿನ ಸಂಚಲನ ಮಾಡಿ ಪಕ್ಷ ಸಂಘಟಿಸಿ ಸಮರ್ಥ ಯುವ ನಾಯಕನಾಗಿ ಹೊರ ಹೊಮ್ಮಿದ್ದಾರೆ. ಅವರಿಗೆ ಇನ್ನೂ ಹೆಚ್ಚಿನ ಅಧಿಕಾರ ಸಿಗಲಿ ಎಂದರು.

ರಾಜ್ಯ ಜೆಡಿಎಸ್ ಪರಿಷತ್ ಅಧ್ಯಕ್ಷ ಆರ್.ಉಗ್ರೇಶ್ ಮಾತನಾಡಿ ಪುನೀತ್ ಗೌಡ ಅವರು ದಿ. ಬಿ.ಸತ್ಯನಾರಾಯಣ ಅವರ ಆದರ್ಶವನ್ನು ನಾವೆಲ್ಲರೂ ಅಳವಡಿಸಿಕೊಂಡು ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಡೆಯಬೇಕು ಎಂದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಸತ್ಯಪ್ರಕಾಶ್ ಮಾತನಾಡಿ ಯುವ ನಾಯಕ ಪುನೀತ್ ಗೌಡ ಅವರು ತಮ್ಮ ಶಕ್ತಿ ಮೀರಿ ಸಮಾಜ ಸೇವೆ ಮಾಡುತ್ತಿದ್ದಾರೆ. ಎಲ್ಲರ ಆರ್ಶೀವಾದ ಅವರ ಮೇಲಿರಲಿ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಜಿ.ಪಂ. ಉಪಾಧ್ಯಕ್ಷ ಮುದಿಮಡು ರಂಗಶಾಮಯ್ಯ, ಮುಖಂಡರಾದ ಕಲ್ಕೆರೆ ರವಿಕುಮಾರ್, ನೇಜಂತಿ ಅಭಿಲಾಷ್ ಗೌಡ, ಎಂಜಲಗೆರೆ ತಿಪ್ಪೇಸ್ವಾಮಿ, ರಾಮಕೃಷ್ಣ, ಮುದ್ದುಗಣೇಶ್, ಮಲ್ಲೇಗೌಡ, ಬಪ್ಪಣ್ಣ, ರಂಗನಾಥ ಗೌಡ, ಬೊಮ್ಮಗಾನಹಳ್ಳಿ ಮೋಹನ್, ಹುಲಿಕುಂಟೆ ಪ್ರವೀಶ್, ಶಶಾಂಕ್, ಕಲ್ಲಹಳ್ಳಿ ಉಮೇಶ್, ರಾಮು, ಚೇತನ್ ಬರಗೂರು, ಕಿರಣ್, ಹರ್ಷ ಪಟೇಲ್ ಸೇರಿದಂತೆ ಹಲವರು ಹಾಜರಿದ್ದರು.

Share this Article
Leave a comment