ವರದಿ- ಲೋಕೇಶ್ ಚಿ.ನಾ.ಹಳ್ಳಿ

ಚಿಕ್ಕನಾಯಕನಹಳ್ಳಿ: ಕೇಂದ್ರ ಸರ್ಕಾರ ಕಾರ್ಪರೇಟರ್ ಗಳಾದ ಅಂಬಾನಿ ಅದಾನಿಗಳಿಗೆ ಸಾವಿರಾರು ಎಕರೆ ಜಮೀನು ನೀಡಿದ್ದೀರ ˌಆದರೆ ಸಣ್ಣಪುಟ್ಟ ತಪ್ಪುಗಳನ್ನ ಎತ್ತಿಹಿಡಿದು ಎತ್ತಿನ ಹೊಳೆ ನೀರಾವರಿ ಯೋಜನೆ ಕಾಮಗಾರಿಗೆ ಅಡ್ಡಿ ಪಡಿಸುತ್ತಿದ್ದೀರ ಎಂದು ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಮುರಳಿಧರ ಹಾಲಪ್ಪಎಂದು ಆಕ್ರೋಶ ವ್ಯೆಕ್ತಪಡಿಸಿದರು . ತಾಲ್ಲೂಕಿನ ಕೆ.ಬಿ.ಕ್ರಾಸ್ ಮತ್ತು ಟೋಲ್ ಮದ್ಯೆ ಹಾದು ಹೊಗುವ ಎತ್ತಿನಹೊಳೆ ಯೋಜನೆಯ ನಾಲಾ ಕಾಮಗಾರಿ ಸ್ಥಳದಲ್ಲಿ ನಾಲ್ಕು ತಾಲ್ಲೂಕಿನ ಮುಖಂಡರ ಜನ ಆಂದೊಲನ ಸಭೆಯಲ್ಲಿ ನೇತೃತ್ವವಹಿಸಿ ಮಾತನಾಡಿದರು .2014ರಲ್ಲಿ ಅಂದಿನ ಸಿಎಂ ಸಿದ್ಧರಾಮಯ್ಯ ಎತ್ತಿನ ಹೊಳೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಅಲ್ಲಿಂದ ಇಲ್ಲಿಯವರೆಗೂ 23ಸಾವಿರ ಕೋಟಿ ಖರ್ಚುಆಗಿದೆ ಕೇಂದ್ರ ಸರ್ಕಾರದ ಒಂದು ನಯಪೈಸ ಅನುನುದಾನ ನೀಡಿಲ್ಲ. ಅಷ್ಟು ಸಂಪೂರ್ಣ ಹಣ ನಮ್ಮ ರಾಜ್ಯದ ಜನತೆಯ ತೆರಿಗೆಯ ಮೂಲದ್ದಾಗಿದ್ದೆ. ಆ ಹಣವನ್ನ ರಾಜ್ಯ ಸರ್ಕಾರ ನೀಡಿ ಕಾಮಗಾರಿ ಮಾಡಿಸುತ್ತಿದೆ.. ಚಿಕ್ಕಮಗಳೂರು ಹಾಸನ ತುಮಕೂರು ಚಿಕ್ಕಬಳ್ಳಾಪುರ ಕೋಲಾರ ಸೇರಿದಂತೆ ಎಂಟು ಜಿಲ್ಲೆಗಳ ರೈತರ ಬದುಕು ಹಸನಾಗುವುದರ ಜೊತೆಗೆ ಅಂತರ್ ಜಲ ವೃದ್ದಿಯಾಗಿ ಕುಡಿಯುವ ನೀರಿನ ಅನುಕೂಲವಾಗುತ್ತದೆ ಎಂದರು. ಯೋಜನೆಯ ಕಾಮಗಾರಿಯಬಗ್ಗೆ ಪ್ರಾರಂಭದಲ್ಲೆ ಕೇಂದ್ರಸರ್ಕಾರಕ್ಕೆ ವರದಿ ಸಲ್ಲಿಸಿ ಸಿದ್ದರಾಮಯ್ಯ ಡಿಕೆಶಿರವರ ನೇತೃತ್ವದಲ್ಲಿ ಶಂಕುಸ್ಥಾಪನೆ ನೆರವೇರಿಸಿ ಕಾಮಗಾರಿಯನ್ನ ಪ್ರರಂಭಿಸಲಾಗಿತ್ತು.ಕಾಮಗಾರಿ ಶೇ.90ರಷ್ಟು ಮುಗಿಯುವ ಹಂತ ತಲುಪುವ ಮಟ್ಟಕ್ಕೆ ಬಂದಾಗ ಅರಣ್ಯ ಮತ್ತು ಪರಿಸರ ಇಲಾಖೆ ತಕರಾರು ತೆಗೆದು ನಾಲೆಪಕ್ಕ ಹೆಚ್ಚುವರಿಯಾಗಿ ಜಾಗ ತೆಗೆದುಕೊಂಡಿದ್ದೀರ ಎಂದು 11 ಪ್ರಶ್ನೆಗಳನ್ನ ಕೇಳಿದೆ. ಅರಣ್ಯ ಪ್ರದೇಶ ಬಳಕೆಯಾಗಿದೆ ಎಂದು ಹೇಳುತ್ತಿರುವ ಜಾಗದಲ್ಲಿ ರೈತರು ಉಳುಮೆ ಮಾಡುತ್ತಿದ್ದಾರೆ ಎತ್ತಿನ ಹೊಳೆ ನೀರಾವರಿ ಯೋಜನೆಯ ಇಲಾಖೆ ಸಂಜಾಯಿಸಿ ಉತ್ತರ ನೀಡಿದೆ .ನವಂಬರ್ ತಿಂಗಳಲ್ಲಿ ಡೆಲ್ಲಿಗೆ ತೆರಲಿ ಅರಣ್ಯ ಮತ್ತು ಪರಿಸರ ಇಲಾಖೆಯ ಸಚಿವರನ್ನ ಬೇಟಿ ಮಾಡಿ 76 ಲಕ್ಷ ಜನತೆಗೆ ಅನುಕೂಲವಾಗುತ್ತದೆ ಎಂದು ಸಮಸ್ಯೆ ಬಗ್ಗೆ ಮನವರಿಕೆ ಮಾಡಿದಾಗ ತೊಡಕು ನಿವಾರಣೆಯನ್ನ ಕೇಂದ್ರ ಸಚಿವರು ಭರವಸೆ ನಿಡ್ಡಿದ್ದಾದರು ಡಿಸೆಂಬರ್ ಮೊದಲ ವಾರ ಬಂದರೂ ಇನ್ನೂ ಯಾವ ಬೆಳವಣಿಗೆ ಕಾಣುತ್ತಿಲ್ಲಾ ಈ ನಿಟ್ಟಿನಲ್ಲಿ ಮುಂದೆ ತುಮಕೂರಿನಲ್ಲಿ ಒಂದು ಲಕ್ಷಜನ ಸೇರಿಸಿ ಅಚ್ಚುಕಟ್ಟಾಗಿ ಎಲ್ಲಾ ತಾಲ್ಲೂಕಿನ ಮುಖಂಡರು ನೀರಾವರಿ ಸಚಿವರು ಹಾಗು ಜಿಲ್ಲಾ ಉಸ್ತುವಾರಿ ಸಚಿವರನ್ನ ಆಹ್ವಾನಿಸಿ ಕೇಂದ್ರದ ವಿರುದ್ದ ಜನ ಆಂದೊಲನ ಮೂಲಕ ಎತ್ತಿನಹೊಳೆ ಯೋಜನೆಗೆ ತೊಡಕು ಮಾಡಿರುವ ಕೇಂದ್ರ ಸರ್ಕಾರ ಸಹಕಾರ ನೀಡುವಂತೆ ಎಚ್ಚರಿಕೆ ಗಂಟೆಯನ್ನ ಭಾರಿಸಲಾಗುವುದು .ಕೇಂದ್ರ ಸರ್ಕಾರ ಗಮನ ಹರಿಸಿ ತಾಂತ್ರಿಕ ದೊಷವನ್ನ ಅರಿತು ಕಾಮಗಾರಿ ಪೂರ್ಣ ಮಾಡಲು ಅನುಮಾಡಿಕೊಡಬೇಕೇಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು. ಮಾಜಿ ಶಾಸಕ ಬಿ.ಲಕ್ಕಪ್ಪ ಮಾತನಾಡಿ ರೈತ ಕೃಷಿಗೆ ನೀರಿನ ಮೂಲಗಳಾದ ಅಂತರ್ ಜಲˌಕೆರೆ ಕಟ್ಟೆಗಳನ್ನ ಅವಲಂಬಿಸಿಕೊಂಡಿರುತ್ತಾನೆ. ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ನೀರು ಇಲ್ಲದಿದ್ದರೆ ವ್ಯೆವಸಾಯವಿಲ್ಲ .ಸತತವಾಗಿ ಒಂದೇ ಸಮನೆ ಮಳೆ ಬರುವುದಿಲ್ಲಾ ಎತ್ತಿನ ಹೊಳೆ ನೀರು ಹರಿದಾಗ ಕೆರೆಗಳು ತುಂಬಿಕೊಂಡು ಅಂತರ್ ಜಲ ವೃದ್ದಿಯಾಗುತ್ತದೆ. ಈನಿಟ್ಟಿನಲ್ಲಿ ಕೇಂದ್ರ ಸರ್ಕಾರ ದೊಡ್ಡಮನಸ್ಸು ಮಾಡಿ ಸಣ್ಣಪುಟ್ಟ ಲೋಪಗಳನ್ನ ಎತ್ತಿ ಹಿಡಿಯ ಬಾರದು. ನಾವು ನೀರಿಗಾಗಿ ಹೋರಾಟ ಮಾಡಲು ಸಿದ್ಧವಾಗಿದ್ದೀವಿ ಎಂದರು. ಮಾಜಿ ಸಾಸಕ ಗಂಗಹನುಮಯ್ಯ ಮಾತನಾಡಿ ಜಿಲ್ಲೆಯ ಎತ್ತಿನ ಹೊಳೆ ಹೋರಾಟ ಮಾತ್ರವಲ್ಲದೆ ಹೇಮಾವತಿ ಭದ್ರ ಮೇಲ್ದಂಡೆ ಯೋಜನೆಯ ಹೆಚ್ಚಿನ ಅನುಕೂಲತೆಯಾಗಬೇಕಾಗಿದೆ. ಯಾವುದೇ ಕೆಲಸ ಹೊರಟವಿಲ್ಲದೆ ಫಲಕಾರಿಯಾಗುವುದಿಲ್ಲ. ಜಿಲ್ಲೆಯಲ್ಲಿ ನೀರಾಗಾಗಿ ಹೋರಾಟ ಅನಿವಾರ್ಯವಾಗಿದೆ. ಎತ್ತಿನ ಹೊಳೆ ಯೋಜನೆ ನೀರಾವರಿ ಹೊರಾಟಕ್ಕೆ ಮುರಳಿಧರ ಹಾಲಪ್ಪ ಹೊರಾಟಕ್ಕೆ ನಿಂತಿದ್ದಾರೆ ಅವರಿಗೆ ನಮ್ಮ ಬೆಂಬಲ ವಿದೆ.ರಾಜ್ಯಸರ್ಕಾರ ಎತ್ತಿನ ಹೊಳೆ ಅನುಷ್ಠಾನಕ್ಕೆ ತಂದು ಕಾಮಗಾರಿಯನ್ನು ಮುಕ್ಕಾಲು ಪಾಲು ಮುಗಿದಿದೆ. ಕೇಂದ್ರಸರ್ಕಾರದ ಧೊರಣೆ ಸರಿ ಇಲ್ಲಾ ಕೇಂದ್ರ ಸರ್ಕಾರ ಜನಪರ ಕೆಲಸಕ್ಕೆ ಅನುಕೂಲ ಮಾಡಿಕೊಡಬೇಕೆಂದರು. ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರುಗಳಾದ ಹುಳಿಯಾರಿನ ಪಿ.ಟಿ.ಚಿಕ್ಕಣ್ಣˌತಿಪಟೂರು ಕಾಂತರಾಜುˌಗುಬ್ಬಿವೆಂಕಟೇಶ್ˌತುರುವೇಕೆರೆ ಶಂಕರಪ್ಪˌ ತೆಂಗು ಬೆಳೆಗಾರರ ಸಂಘದ ಅಧ್ಯಕ್ಷ ಜಯರಾಂˌ ಸಾವಯುವ ಕೃಷಿಕ ತರಬೇನಹಳ್ಳಿ ಷಡಾಕ್ಷರಿˌಪಕ್ಷದ ಸೇವಾಧಳ ಕೆ.ಜಿ.ಕೃಷ್ಣೇಗೌಡ ಸೇರಿಂದಂತೆ ನಾಲ್ಕು ತಾಲ್ಲೂಕಿನ ಮುಖಂಡರುಗಳು ಮಾತನಾಡಿದರು. ನಾಲ್ಕು ತಾಲ್ಲೂಕಿನ ನೀರಾವರಿ ಹೋರಾಟದ ಮುಖಂಡುರುಗಳು ಭಾಗವಹಿಸಿದ್ದರು.
