23ನೇ  ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದ ಉದ್ಘಾಟನಾ ಸಮಾರಂಭ

Surya Pragathi Editor
1 Min Read

23ನೇ  ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದ ಉದ್ಘಾಟನಾ ಸಮಾರಂಭ

23ನೇ ವರ್ಷದ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದ ಉದ್ಘಾಟನಾ ಸಮಾರಂಭ

ಶಿರಾ : ಐತಿಹಾಸಿಕ ಪ್ರಸಿದ್ಧ ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ಶ್ರೀ ಓಂಕಾರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಪ್ರಯುಕ್ತ 23ನೇ ವರ್ಷದ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಉದ್ಘಾಟನಾ ಸಮಾರಂಭ ಕಾರ್ಯಕ್ರಮದಲ್ಲಿ ಶ್ರೀ ಸ್ಪಟಿಕಪುರಿ ಮಹಾ ಸಂಸ್ಥಾನದ ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಂಜಾವಧೂತ ಮಹಾ ಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಿ ತಮ್ಮ ಅಮೃತ ಹಸ್ತದಿಂದ ಉದ್ಘಾಟಿಸಿ ಆಶೀರ್ವಾದಿಸಿದರು, ಈ ಸಂದರ್ಭದಲ್ಲಿ ಶ್ರೀಮಠದ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಶ್ರೀ ತಮ್ಮಣ್ಣ ನವರು, ಶಿರಾ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಗಳು ಆದ ಶ್ರೀ ಟಿ.ಬಿ. ಜಯಚಂದ್ರ ರವರು, ಜೆ.ಡಿ.ಎಸ್. ಹಿರಿಯ ಮುಖಂಡರಾದ ಶ್ರೀ ಆರ್. ಉಗ್ರೇಶ್ ರವರು, ನಿವೃತ್ತ ಐ.ಎ.ಎಸ್ ಅಧಿಕಾರಿಗಳಾದ ಶ್ರೀ ಗೋವಿಂದರಾಜು ರವರು, ಶಿರಾ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿಗಳದ ಶ್ರೀ ಹರೀಶ್ ರವರು, ನಾದೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ತುಳಸಿ ರವರು, ಮಾಜಿ ಜಿ.ಪಂ ಸದಸ್ಯರಾದ ಶ್ರೀ ಎಸ್. ರಾಮಕೃಷ್ಣ ರವರು, ಶ್ರೀ ಚಿರುಪ್ತಹಳ್ಳಿ ಪ್ರಕಾಶ್ ಗೌಡ ರವರು, ಸಮಾಜ ಸೇವಕ ಕಿರಣ್ ಗೌಡ


ತಮಿಳುನಾಡಿನ ಮುಖಂಡರಾದ ಶ್ರೀ ಲಕ್ಷ್ಮೀಪತಿ ರವರು, ಕೋಲಾರದ ಮುಖಂಡರಾದ ಶ್ರೀ ರಾಘವೇಂದ್ರ ರವರು, ತುಮಕೂರು ಜಿಲ್ಲಾ ಕುಂಚಿಟಿಗ – ಒಕ್ಕಲಿಗರ ವಿದ್ಯಾಭಿವೃದ್ಧಿ ಸಂಘದ ನಿರ್ದೇಶಕರುಗಳಾದ ಶ್ರೀ ಮಂಜುನಾಥ್ ಬಿ. ಆರ್ ರವರು, ಶ್ರೀ ವೀರನಾಗಪ್ಪ ನವರು, ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯರಾದ ಶ್ರೀ ಮಂಜುನಾಥ್ ರವರು, ಶ್ರೀ ಚನ್ನಕೇಶವ ವೇದ ಗುರುಕುಲದ ಪೂಜ್ಯ ಶ್ರೀ ಡಾ. ನಾರಾಯಣಚಾರ್ಯ ಗುರುಗಳು ಮತ್ತು ಶಿಷ್ಯ ವೃಂದ, ಸ್ಥಳೀಯರು ಹಾಗೂ ಭಕ್ತರು ಉಪಸ್ಥಿತರಿದ್ದರು.

Share this Article
Leave a comment