“ಜನವಸತಿ ಪ್ರದೇಶದಲ್ಲಿ ಚಿರತೆ ಪತ್ಯಕ್ಷ : ಮೇಕೆ ಕುರಿ ಕೊಂದು ತಿಂದ ಚಿರತೆ

ವರದಿ ಗುಬ್ಬಿ ಭರತ್
ಚಿರತೆ ಪ್ರತ್ಯಕ್ಷ

ಭಾನುವಾರ ಗುಬ್ಬಿ ತಾಲ್ಲೂಕಿನ ಕಿಟ್ಟದಕುಪ್ಪೆ ಗ್ರಾಮದಲ್ಲಿ ತಿಮ್ಮಕ್ಕ ಎಂಬ ಮಹಿಳೆ ತನ್ನ ಮೇಕೆ ಹಾಗೂ ಕುರಿ ಪ್ರಾಣಿಗಳನ್ನು ಮೇಯಿಸುವುದಕ್ಕಾಗಿ ತೋಟಕ್ಕೆ ಹೋದಾಗ ಚಿರತೆಯು ಎರಡು ಪ್ರಾಣಿಗಳನ್ನು ಕೊಂದಿದ್ದು. ಮಹಿಳೆಯು ಪ್ರಾಣಪಾಯದಿಂದ ಬಚವಾಗಿದ್ದಾಳೆ. ಕಳೆದ ಕೆಲವು ದಿನಗಳಿಂದ ಚಿರತೆಗಳ ಹಾವಳಿ ಮಿತಿಮೀರಿದ್ದು,ಇದಕ್ಕೆ ಆದಷ್ಟು ಬೇಗ ಕಡಿವಾಣ ಹಾಕಬೇಕೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಜನವಸತಿ ಪ್ರದೇಶದಲ್ಲಿ ಚಿರತೆ ಪತ್ಯಕ್ಷವಾಗಿದ್ದು ಜನರಿಗೆ ಭಯವನ್ನುಂಟು ಮಾಡಿಸಿದೆ. ಆದ್ದರಿಂದ ಅರಣ್ಯ ಇಲಾಖೆಯು ಕೂಡಲೇ ಸುತ್ತಮುತ್ತಲ ಪ್ರದೇಶಗಳಲ್ಲಿ ಬೋನು ಇಟ್ಟು ಚಿರತೆಯನ್ನು ಸೆರೆಹಿಡಿಯಬೇಕು“ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

