ತುಮಕೂರು:-ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ತುಮಕೂರು ತಾಲೂಕಿನ ಕೋರ ಹೋಬಳಿಯ ಕೋರ ಗ್ರಾಮ ಪಂಚಾಯಿತಿಯಲ್ಲಿ ನಡೆದ ಮಕ್ಕಳ ವಿಶೇಷ ಗ್ರಾಮಸಭೆ ಮಾದರಿಯಾಗುವ ಮೂಲಕ ಗಮನಸೆಳೆಯಿತು.
ಮಕ್ಕಳ ಹಕ್ಕುಗಳು ಹಾಗೂ ಬೇಡಿಕೆಗೆ ಪೂರಕವಾಗಿ ಮಕ್ಕಳಿಂದಲೇ ಸಮಸ್ಯೆಗಳು ಹಕ್ಕುಗಳನ್ನು ಮಂಡನೆ ಮಾಡಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೋರ ಗ್ರಾಮ ಪಂಚಾಯಿತಿ ವತಿಯಿಂದ ಮಕ್ಕಳ ಗ್ರಾಮ ಸಭೆಯನ್ನು ಆಯೋಜಿಸಲಾಗಿತ್ತು.
ಗ್ರಾಮ ಪಂಚಾಯಿತಿ ಹಂತದಲ್ಲಿ ಮಕ್ಕಳಿಗಾಗಿ ವಿಶೇಷ ಗ್ರಾಮಸಭೆ ಹಮ್ಮಿಕೊಂಡಿರುವುದು ಪ್ರಜಾಸತ್ತಾತ್ಮಕ ಸೌಲಭ್ಯಗಳನ್ನು, ಹಕ್ಕುಗಳನ್ನು ತಿಳಿದುಕೊಳ್ಳಲು ಸಹಕಾರಿಯಾಗಿದೆ ಎಂದು ಅಹಿಂದ ನಾಯಕ ಶರತ್ ಕುಮಾರ್ ತಿಳಿಸಿದರು.
ಮುದ್ದೇನಹಳ್ಳಿ ಜಿ ಎಲ್ ಪಿ ಎಸ್ ಶಾಲೆಯ ಐದನೇ ತರಗತಿ ವಿದ್ಯಾರ್ಥಿನಿ ಹರ್ಷಿತ ಮಾತನಾಡಿ: ಈಗಾಗಲೇ ಗ್ರಾಮ ಪಂಚಾಯಿತಿ ವತಿಯಿಂದ ನಮ್ಮ ಶಾಲೆಯ ಎರಡು ಕಟ್ಟಡಗಳಿಗೆ ಆಸುಗಲ್ಲುಗಳು, ಮೇಲ್ಚಾವಣಿ ಸೀಟುಗಳು, ಸುಣ್ಣ ಬಣ್ಣ ಮತ್ತು ಶೌಚಾಲಯಗಳನ್ನು ನಿರ್ಮಿಸಿ ಕೊಟ್ಟಿದ್ದಾರೆ ನಮ್ಮ ಶಾಲೆಯ ವತಿಯಿಂದ ಗ್ರಾಮ ಪಂಚಾಯಿತಿಗೆ ಧನ್ಯವಾದ ತಿಳಿಸುತ್ತೇನೆ ಇನ್ನು ಹೆಚ್ಚಿನ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು .
*
ನಮ್ಮ ಶಾಲೆಯ ಸುಂದರವಾದ ಉದ್ಯಾವನದ ರೀತಿ ಆಟದ ಮೈದಾನವನ್ನು ನಿರ್ಮಿಸಿಕೊಡಬೇಕು ವಾಲಿಬಾಲ್ ಅಂಕಣ, ಕೋ ಕೋ ಅಂಕಣ , ಜಾರು ಬಂಡಿ ಅಂಕಣ, ಉಯ್ಯಾಲೆ ಅಂಕಣ ನಿರ್ಮಿಸಿ ಕೊಡಬೇಕೆಂದು ಮುದ್ದನಹಳ್ಳಿ ಶಾಲ ವಿದ್ಯಾರ್ಥಿಗಳು ಮಕ್ಕಳ ಗ್ರಾಮ ಸಭೆಯಲ್ಲಿ ಬೇಡಿಕೆ ಇಟ್ಟಿದ್ದಾರೆ.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಧು ಬಿ ನಂದೀಶ್ ಕಾರ್ಯಕ್ರಮ ಉದ್ಘಾಟಿಸಿದರು. ಅಹಿಂದಾ ನಾಯಕ ಶರತ್ ಕುಮಾರ್, ಪಿಡಿಒ ಕೃಷ್ಣಮೂರ್ತಿ, ಗ್ರಾಮ ಪಂಚಾಯಿತಿ ಸದಸ್ಯರಾದ ಯತೀಶ್, ರಾಜಕುಮಾರ್, ಯಾದು, ಶಿಕ್ಷಕರಾದ ರವಿಕುಮಾರ್, ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.
