ಇಂಡೋ–ಮಲೇಷಿಯಾ ಯೋಗ ಚಾಂಪಿಯನ್ಶಿಪ್ನಲ್ಲಿ 2026ರಲ್ಲಿ ಕರ್ನಾಟಕದ ವಿಜೇತರ ಭರ್ಜರಿ ಸಾಧನೆ

ಮಲೇಷಿಯಾದ ಕೌಲಾಲಂಪುರನಲ್ಲಿ 17ರಿಂದ 20ನೇ ಜನವರಿ 2026ರವರೆಗೆ ಆಯೋಜಿಸಲಾದ ಪ್ರತಿಷ್ಠಿತ ಇಂಡೋ–ಮಲೇಷಿಯಾ ಯೋಗ ಚಾಂಪಿಯನ್ಶಿಪ್ 2026ರಲ್ಲಿ ಯೋಗ ಕ್ರೀಡಾಪಟುಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಸಾಧನೆ ಮಾಡಿ ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ. ಈ ಇಂಡೋ ಮಲೇಷಿಯಾ ಅಂತರರಾಷ್ಟ್ರೀಯ ಯೋಗ ಚಾಂಪಿಯನ್ಶಿಪ್ ಅನ್ನು ವರ್ಲ್ಡ್ ಯೋಗ ಮತ್ತು ಸ್ಪೋರ್ಟ್ಸ್ ಎಜುಕೇಶನ್ ಕೌನ್ಸಿಲ್ (ರಿ.) (KR-03-0639809)
ಆಯೋಜಿಸಿದ್ದು, ಅವಿನಾಶ್ ಯೋಗ ಫೌಂಡೇಶನ್ (ರಿ.) ಸಹ-ಆಯೋಜಕರಾಗಿದ್ದರು.

ಈ ಚಾಂಪಿಯನ್ಶಿಪ್ನಲ್ಲಿ ಕರ್ನಾಟಕದ ಪ್ರತಿಭಾವಂತ ಯೋಗ ಕ್ರೀಡಾಪಟು ವಿಜಯಮಹಾಂತೇಶ ಎಸ್ ಎಸ್, ಗುಳೇದಗುಡ್ಡದ ಯುವಕ ಇವರು ವಿಶಿಷ್ಟ ಸಾಧನೆ ಮಾಡಿದ್ದು, ಟ್ರೆಡಿಷನಲ್ (ಅಥ್ಲೆಟಿಕ್)
ಯೋಗ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿ ಒಂದು ಚಿನ್ನ ಚಿನ್ನದ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರ ಶಿಸ್ತು, ನಿಖರತೆ ಮತ್ತು ಸಮರ್ಪಿತ ಪ್ರದರ್ಶನಕ್ಕೆ ಯೋಗ ಜಡ್ಜ್ ಹಾಗೂ ಪ್ರೇಕ್ಷಕರಿಂದ ಅಪಾರ ಪ್ರಶಂಸೆ ವ್ಯಕ್ತವಾಯಿತು.
ಈ ಇಂಡೋ ಮಲೇಷ್ಯಾ ಯೋಗ ಚಾಂಪಿಯನ್ಶಿಪ್ ವರ್ಲ್ಡ್ ಯೋಗ ಮತ್ತು ಸ್ಪೋರ್ಟ್ಸ್ ಎಜುಕೇಶನ್
ಕೌನ್ಸಿಲ್ (ರಿ.) ಪ್ರಧಾನ ಕಾರ್ಯದರ್ಶಿ ಶ್ರೀ ಅವಿನಾಶ್ ಕೆ.ಎಂ. ಅವರ ನೇತೃತ್ವದಲ್ಲಿ ಹಾಗೂ ಮಲೇಷ್ಯಾದ ಮುಖ್ಯ ಅತಿಥಿ ಶ್ರೀ ಜೈನೋ ಅವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು.
