ರಾಮನಗರದಲ್ಲಿ ಪಿಎಂ ಸೂರ್ಯಘರ್ ಓರಿಯಂಟೇಷನ್ ಕಾರ್ಯಾಗಾರ
* ಪ್ರಧಾನಮಂತ್ರಿ ಸೂರ್ಯಘರ್ ಯೋಜನೆ ಸದ್ಬಳಕೆ ಮಾಡಿಕೊಳ್ಳಿ: ಫಿಲೋಮಿನಾ

ರಾಮನಗರ: ಸೌರವಿದ್ಯುತ್ ಬಳಕೆಯನ್ನು ಉತ್ತೇಜಿಸಲು ಹಾಗೂ ಪರಿಸರ ನೈರ್ಮಲ್ಯ ತಡೆಯಲು ಕೇಂದ್ರ ಸರಕಾರ ಪಿಎಂ ಸೂರ್ಯಘರ್ ಯೋಜನೆಯನ್ನು ಅನುಷ್ಠಾನ ಮಾಡಿದ್ದು, ಜನರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಾಕ್ರೆಡ್ ಸಂಸ್ಥೆಯ ಕಾರ್ಯದರ್ಶಿ ಫಿಲೋಮಿನಾ ಹೇಳಿದರು.
ನಗರದ ಚೈತನ್ಯ ಭವನದಲ್ಲಿ ಶುಕ್ರವಾರ ಡಿಜಿಪ್ಲಿಕ್ ಸೋಲಾರ್ ಕಂಪೆನಿ, ಫೆವರ್ಡ್ಕೆ ಹಾಗೂ ಸೇಕ್ರೆಡ್ ಸ್ವಯಂ ಸೇವಾ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಪಿಎಂ ಸೂರ್ಯಘರ್ ಓರಿಯಂಟೇಷನ್ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಪ್ರತಿ ತಿಂಗಳು 300 ಯೂನಿಟ್ ಉಚಿತ ವಿದ್ಯುತ್ ನೀಡುವ ಗುರಿಯೊಂದಿಗೆ ಪ್ರತಿ ಮನೆಗೂ ವಿದ್ಯುತ್ ಒದಗಿಸುವ ಉದ್ದೇಶದಿಂದ ದೇಶದಾಧ್ಯಂತ ಒಂದು ಕೋಟಿ ಮನೆಗಳ ಮೇಲ್ಚಾವಣಿಯ ಮೇಲೆ ಸೌರಫಲಕಗಳನ್ನು ಅಳವಡಿಸುವ ಪಿಎಂ ಸೂರ್ಯಘರ್ ಯೋಜನೆಯನ್ನು ಕೇಂದ್ರ ಸರಕಾರ ಅನುಷ್ಠಾನಗೊಳಿಸಿದೆ. ಇದರಿಂದ ಮನೆಮಂದಿ ಉಚಿತ ವಿದ್ಯುತ್ ಪಡೆಯುವ ಜತೆಗೆ ಹೆಚ್ಚುವರಿ ವಿದ್ಯುತ್ ಅನ್ನು ಮಾರಿ ಲಾಭಾಂಶವನ್ನೂ ಗಳಿಸಬಹುದಾಗಿದೆ. 75 ಸಾವಿರ ಕೋಟಿ ಹೂಡಿಕೆಯ ಮಹತ್ವಾಕಾಂಕ್ಷೆ ಯೋಜನೆಯು ಸಬ್ಸಿಡಿ ಮತ್ತು ಕಡಿಮೆ ಬಡ್ಡಿಯ ಸಾಲದೊಂದಿಗೆ ಸೌರಶಕ್ತಿ ಅಳವಡಿಕೆಯನ್ನು ಸುಲಭಗೊಳಿಸಲಾಗಿದೆ ಎಂದರು.
ಸೌರಶಕ್ತಿ ಬಳಸಿ ವಿದ್ಯುತ್ ಉತ್ಪಾದಿಸುವ ಮೂಲಕ ನೈಸರ್ಗಿಕ ಸಂಪನ್ಮೂಲದ ಸದ್ಬಳಕೆ ಹಾಗೂ ವಿದ್ಯುತ್ ಉತ್ಪಾದನೆಯ ಮೇಲಿನ ಅವಲವಂಬನೆಯನ್ನು ತಗ್ಗಿಸುವ ಸೂರ್ಯಘರ್ ಯೋಜನೆಯು ಪ್ರತಿಯೊಬ್ಬರಿಗೂ ತಲುಪಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಡಿಜಿಪ್ಲಿಕ್ನ ಕಂಪೆನಿಯು ಸಾಕ್ರೆಡ್ ಸ್ವಯಂ ಸೇವಾ ಸಂಸ್ಥೆಯನ್ನು ಗುರುತಿಸಿದ್ದು, ಯೋಜನೆಯ ಅನುಷ್ಠಾನಕ್ಕೆ ಎಲ್ಲರೂ ಶ್ರಮಿಸುತ್ತಿರುವುಗಾಗಿ ತಿಳಿಸಿzರು.
ಭಾರತ ಅತೀ ಹೆಚ್ಚು ಇಂಧನ(ವಿದ್ಯುತ್) ಬಳಕೆ ಮಾಡುವ ರಾಷ್ಟ್ರವಾಗಿದ್ದು, ಸೌರಶಕ್ತಿಯ ಬಳಕೆಯಲ್ಲಿ 5ನೇ ಸ್ಥಾನದಲ್ಲಿದೆ. ಕಳೆದ 9 ವರ್ಷದಲ್ಲಿ ದೇಶದಲ್ಲಿ ಸೌರ ಇಂಧನ ಸಾಮರ್ಥ್ಯ ಸುಮಾರು 30 ಪಟ್ಟು ಹೆಚ್ಚಾಗಿದೆ. 2024ರ ಮಾರ್ಚ್ ವರೆಗಿನ ಅಂಕಿ-ಅAಶಗಳ ಪ್ರಕಾರ 81.81 ಮೆಗಾ ವ್ಯಾಟ್ ಸೌರವಿದ್ಯುತ್ ದೇಶದಲ್ಲಿ ಉತ್ಪಾದನೆ ಆಗುತ್ತಿದೆ. ಕರ್ನಾಟಕದಲ್ಲೂ ಈ ಯೋಜನೆ ಅನುಷ್ಠಾನಗೊಂಡಿದೆ. ಜನರು 7899655907 ಸಂಖ್ಯೆಗೆ ಸಂರ್ಪಕಿಸಿ ಹೆಚ್ಚಿನ ಮಾಹಿತಿ ಪಡೆದು ಈ ಯೋಜನೆಯ ಸದುಪಯೋಗ ಪಡೆಯಬಹುದಾಗಿದೆ ಎಂದು ಫಿಲೋಮಿನಾ ಮಾಹಿತಿ ನೀಡಿದರು.
ಡಿಜಿಪ್ಲಿಕ್ ಸಂಸ್ಥೆ ನಿರ್ದೇಶಕಿ ಸಿ.ಎಸ್.ಕಮಲ್ ಮಾತನಾಡಿ, ಸಾಮಾನ್ಯ ಜನರಿಗೂ ಯೋಜನೆ ತಲುಪಬೇಕಿದೆ ಹಾಗಾಗಿ ಸಾಮಾನ್ಯ ದಾಖಲೆಗಳಡಿ ಮನೆ. ವಿದ್ಯುತ್ ಬಿಲ್, ಬ್ಯಾಂಕ್ ಖಾತೆ, ಹಾಗೂ ಆಧಾರ್ಕಾರ್ಡ್ ಇದ್ದರೆ ಸಾಕು ಸುಲಭವಾಗಿ ಯೋಜನೆಯ ಲಾಭ ಪಡೆಯಬುದಾಗಿದೆ. ಇದಕ್ಕೆ ಸಾಲದ ಜೊತೆಗೆ ಸಬ್ಸಿಡಿ ಸಹ ಸಿಗಲಿದೆ. ಸೌರಫಲಕಗಳ ಅಳವಡಿಕೆಗೆ ತಗಲುವ ವೆಚ್ಚದ ಮೇಲೆ ಶೇ.60 ವರೆಗೂ ಸಬ್ಸಿಡಿಯನ್ನು ನೀಡಲಾಗುತ್ತದೆ. 1 ರಿಂದ 3 ಕಿಲೋ ವ್ಯಾಟ್ ವರೆಗಿನ ಸೌರ ವಿದ್ಯುತ್ ಘಟಕದ ಅಳವಡಿಕೆಗೆ ಸರ್ಕಾರ ಧನ ಸಹಾಯ ನೀಡಲಿದೆ. ಇದರಿಂದ ಯುವಕರಲ್ಲಿ ಅರಿವು ಮೂಡಿಸುವ ಜೊತೆಗೆ ಮುಂದಿನ ಪೀಳೀಗೆಗೂ ಕೊಡುಗೆ ನೀಡಲಿದೆ ಎಂದು ವಿವರಿಸಿದರು.
ಬೆಸ್ಕಾ ಎಇ ಪ್ರಭಾಕರ್ ಮಾತನಾಡಿ, ಮನೆಯ ಛಾವಣಿಯ ಮೇಲೆ ಸೌರವಿದ್ಯುತ್ ಘಟಕಗಳನ್ನು ಅಳವಡಿಸುವುದರಿಂದ ಸಾಂಪ್ರದಾಯಿಕ ಇಂಧನದ ಮೇಲಿನ ಅವಲಂಬನೆ ಕಡಿಮೆ ಆಗಲಿದೆ. ಇದರಿಂದ ಕಲ್ಲಿದ್ದಲಿನ ಮೇಲಿನ ಅವಲಂಬನೆ ತಗ್ಗಲಿದೆ. ಭಾರತದಲ್ಲಿ ವರ್ಷದಲ್ಲಿ 6 ರಿಂದ 8 ತಿಂಗಳು ಪ್ರಖರವಾದ ಬಿಸಿಲು ಇರುವುದರಿಂದ ಅದರ ಸಂಪೂರ್ಣ ಪ್ರಯೋಜನ ಪಡೆಯಬಹುದಾಗಿದೆ. ಸೌರಫಲಕಗಳಿಂದ ಉತ್ಪಾದಿತ ವಿದ್ಯುತ್ ಬ್ಯಾಟರಿಯಲ್ಲಿ ಸಂಗ್ರಹವಾಗಲಿದ್ದು, ಅದನ್ನು ಬೆಸ್ಕಾಂ ಅಥವಾ ವಿದ್ಯುತ್ ಸರಬರಾಜು ಸಂಸ್ಥೆಗಳಿಗೆ ಮಾರಾಟ ಮಾಡುವ ಮೂಲಕ ಆದಾಯವನ್ನು ಗಳಿಸಬಹುದಾಗಿದೆ ಎಂದು ಹೇಳಿದರು.
ಒಕ್ಕೂಟದ ರಾಜ್ಯ ನಿರ್ದೇಶಕ ಮೂರ್ತಿ ಮಾತನಾಡಿ, ಸೌರಶಕ್ತಿ ವಿದ್ಯುತ್ ಯೋಜನೆಯಿಂದ ಇಂಗಾಲದ ಹೊರಸೂಸುವಿಕೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಲಿದ್ದು, ವಾಯು ಮಾಲಿನ್ಯ ಪ್ರಮಾಣವೂ ತಗ್ಗಲಿದೆ. ಸೌರಘಟಕದ ಸ್ಥಾಪನೆಗಾಗಿ ಕುಟುಂಬಗಳು ಪ್ರತಿಶತ ಶೇ.7ರಷ್ಟು ಬಡ್ಡಿಯೊಂದಿಗೆ ಮೇಲಾಧಾರ ರಹಿತ ಸಾಲದ ಉತ್ಪನ್ನಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಜನರು ತಮ್ಮ ಮನೆಯ ಮೇಲೆ ಸೌರಫಲಕಗಳನ್ನು ಅಳವಡಿಸುವುದನ್ನು ಪ್ರೇರೇಪಿಸಲು ಸರ್ಕಾರ ಪ್ರತಿ ಜಿಲ್ಲೆಗೆ ಒಂದು ಮಾದರಿ ಸೌರ ಗ್ರಾಮವನ್ನು ನಿರ್ಮಿಸಲು ಮುಂದಾಗಿದೆ. ಹೂಡಿಕೆ ಮಾಡಿದ ಬಂಡವಾಳ 5 ವರ್ಷದಲ್ಲಿ ಮರಳಲಿದ್ದು, 20 ವರ್ಷಗಳವರೆಗೆ ಉಚಿತ ವಿದ್ಯುತ್ ಪಡೆಯಬಹುದಾಗಿದೆ ಎಂದರು.
ಕಾರ್ಯಾಗಾರದಲ್ಲಿ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಸಾಕ್ರೆಡ್ ಸ್ವಯಂ ಸಂಸ್ಥೆಯ ರೀಟಾ, ಶಾಂತಿ ಮತ್ತು ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

