
ಶಿರಾ : ದೇಶದ 5 ರಾಜ್ಯಗಳಲ್ಲಿ ಕುಂಚಿಟಿಗ ಸಮುದಾಯದವರು ನೆಲೆಸಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ವಿಷಯ, ಕುಂಚಿಟಿಗರ ಕೇಂದ್ರ ಓಬಿಸಿ ಮೀಸಲಾತಿಗಾಗಿ ನಾವೆಲ್ಲ ಒಗ್ಗಟ್ಟಾಗಿ ಹೋರಾಟ ಮಾಡೋಣ, ನಮ್ಮ ಮುಂದಿನ ಪೀಳಿಗೆಗೆ ಎಲ್ಲಾ ರೀತಿಯ ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಹೊಂದಬೇಕಾದರೆ ನಾವೆಲ್ಲ ಒಗ್ಗಟ್ಟಾಗಿ ಸಾಗೋಣ ಎಂದು ಕೊರಟಗೆರೆ ಎಲೆರಾಂಪುರ ಕುಂಚಿಟಿಗ ಸಂಸ್ಥಾನ ಮಠದ ಪೀಠಾದ್ಯಕ್ಷರಾದ ಡಾ. ಶ್ರೀ ಹನುಮಂತನಾಥ ಸ್ವಾಮೀಜಿ ನುಡಿದರು.
ಅವರು ಭಾನುವಾರ ನಗರದ ಕುಂಚಿಟಿಗರ ಸಂಘದ ಆವರಣದಲ್ಲಿ ದಿ|| ಎನ್.ಎಸ್. ಕೆಂಗರಾಮಯ್ಯನವರ ವೇದಿಕೆಯಲ್ಲಿ ನಡೆದ ಕುಂಚಿಟಿಗರ ಸಂಘದ ನೂತನ ಕುಂಚಶ್ರೀ ಪ್ಯಾಲೇಸ್ ಕಟ್ಟಡ ಉದ್ಘಾಟನಾ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ರಾಜ್ಯದಲ್ಲಿಯೇ ಲೋಪದೋಷವಿಲ್ಲದ ಅತ್ಯಂತ ಬೃಹತ್ ಸಮುದಾಯ ಯಾವುದಾದರು ಇದ್ದರೆ ಅದು ಶಿರಾದ ಕುಂಚಿಟಿಕ ಸಮುದಾಯ, ಎಲ್ಲಾ ಜಾತಿ, ಧರ್ಮಗಳನ್ನು ಒಟ್ಟಿಗೆ ಕೊಂಡೋಯ್ಯುವ ಏಕೈಕ ಸಮುದಾಯವೆಂದರೆ ಅದು ಕುಂಚಿಟಿಗ ಸಮುದಾಯ ಇಂತಹ ಸಮುದಾಯಕ್ಕೆ ಯಾರು ಕೂಡ ದ್ರೋಹ ಬಗೆಯಬಾರದು ನಮ್ಮ ಸಮಾಜ ನಮ್ಮ ಹೆಮ್ಮೆ, ನಗರದಲ್ಲಿ ಬೃಹತ್ ಕುಂಚಿಟಿಗ ಭವನ ನಿರ್ಮಾಣದ ಕನಸನ್ನು ಕಾಣುತ್ತ ನನಸು ಮಾಡುವ ಹಾದಿಯಲ್ಲಿ ನಾವೆಲ್ಲ ಸಾಗಬೇಕು ಕುಂಚಶ್ರೀ ಕೋ ಆಪರೇಟಿವ್ ಸೊಸೈಟಿ, ಬ್ಯಾಂಕ್, ಶಾಲಾ, ಕಾಲೇಜ್, ಪ್ಯಾಲೇಸ್ ಈಗೆ ಬಹುತೇಕ ಎಲ್ಲಾ ಕಡೆ ಪ್ರಾರಂಭವಾಗುತ್ತಿರುವುದು ಉತ್ತಮ ಬೆಳೆವಣಿಗೆ, ಸಮುದಾಯದ ಏಳಿಗೆಗೆ ದೆಹಲಿ ವಿಶೇಷ ಪ್ರತಿನಿಧಿ, ಶಾಸಕ ಟಿ.ಬಿ. ಜಯಚಂದ್ರ, ವಿ.ಪ. ಸದಸ್ಯ ಚಿದಾನಂದ್ ಎಂ. ಗೌಡ, ಮಾಜಿ ಶಾಸಕ ಡಾ. ಸಿ. ಎಂ. ರಾಜೇಶ್ ಗೌಡ ಸೇರಿದಂತೆ ಅನೇಕ ಗಣ್ಯರು, ಉದ್ಯಮಿಗಳು, ಪ್ರಮುಖರು ಸಾಕಷ್ಟು ಆರ್ಥಿಕವಾಗಿ ಸಮುದಾಯವನ್ನು ಮೇಲೇತ್ತುವ ಸಾಹಸಕ್ಕೆ ಕೈಜೋಡಿಸಿರುವುದು ಸಂತಸದ ವಿಷಯ ಎಂದರು.

ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಮಾತನಾಡಿ ಒಕ್ಕಲುತ ಮಾಡುವ ಸಮುದಾಯ ಕುಂಚಿಟಿಗ ಸಮುದಾಯ. ಕುಂಚಿಟಿಗ ಸಮುದಾಯದ ಎಲ್ಲರೂ ಸಮುದಾಯದ ಅಭಿವೃದ್ಧಿಗೆ ಸಹಕರಿಸಿ ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿ ಎಂದ ಅವರು ಕುಂಚಿಟಿಗರ ಸಂಘದ ಅಡಿಯಲ್ಲಿ ನಡೆಯುತ್ತಿರುವ ಶಾಲೆಯ ಅಭಿವೃದ್ಧಿಗೆ ವಿಧಾನಪರಿಷತ್ ಪ್ರದೇಶಾಭಿವೃದ್ಧಿ ಅನುದಾನದಲ್ಲಿ 50ಲಕ್ಷ ರೂ. ಹಾಗೂ ನನ್ನ ವೈಯಕ್ತಿಕವಾಗಿ 50 ಲಕ್ಷ ರೂ. ಅನುದಾನ ನೀಡುತ್ತೇನೆ ಎಂದರು.
ಮಾಜಿ ಶಾಸಕ ಡಾ. ಸಿ ಎಂ ರಾಜೇಶ್ ಗೌಡ ಮಾತನಾಡಿ ಸಮುದಾಯದ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ ಕುಂಚಿಟಿಗ ಸಮುದಾಯಕ್ಕೆ ಶತಮಾನಗಳ ಇತಿಹಾಸ ಇದೆ. ಸಾಂಸ್ಕೃತಿಕ, ವ್ಯಾಪಾರ, ಶಿಕ್ಷಣಕ್ಕೆ ಕುಂಚಿಟಿಗ ಸಮುದಾಯ ತಮ್ಮದೇ ಆದ ಕೊಡುಗೆ ನೀಡಿದೆ. ರಾಜ ಮಹಾರಾಜರ ಆಸ್ಥಾನದಲ್ಲಿ ಕುಂಚಿಟಿಗರು ಸೇವೆ ಸಲ್ಲಿಸಿದ್ದಾರೆ. ನಮ್ಮ ಪೂರ್ವಜರು ನಡೆದು ಬಂದ ದಾರಿಯಲ್ಲಿ ಸಾಗಬೇಕಿದೆ. ಸಮುದಾಯದ ಅಭಿವೃದ್ಧಿಗೆ ಒಟ್ಟಗೋಣ ಎಂದರು.
ಕಾಂಗ್ರೆಸ್ ಮುಖಂಡ ಸಂಜಯ್ ಜಯಚಂದ್ರ ಮಾತನಾಡಿ ಸಮುದಾಯದ ಜನ, ಮಕ್ಕಳು ಎಲ್ಲಾ ರಂಗದಲ್ಲು ಸಾಕಷ್ಟು ಹೆಸರು ಮಾಡುತ್ತಿದ್ದಾರೆ, ಶಿಕ್ಷಣದಿಂದ ಮಾತ್ರ ಸಮುದಾಯದ ಅಭಿವೃದ್ಧಿ ಸಾಧ್ಯ, ಕುಂಚಶ್ರೀ ಪ್ಯಾಲೇಸ್ ಉದ್ಘಾಟನೆ ಜೊತೆ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಸುತ್ತಿರುವುದು ಸ್ವಾಗತಾರ್ಹ ಎಂದರು.
ಪ್ರತಿಷ್ಠಿತ ಜೀನಿ ಆಹಾರ ಉತ್ಪಾದನ ಸಂಸ್ಥೆಯ ಸಂಸ್ಥಾಪಕ ದಿಲೀಪಕುಮಾರ್ ದುಡಿಮೆಯ ಒಂದು ಭಾಗವನ್ನು ಸಮಾಜದ ಏಳಿಗೆಗೆ ಈಗಾಗಲೇ ಸಾಕಷ್ಟು ಕೊಡುಗೆಗಳನ್ನು ನೀಡುತ್ತಾ ಬರುತ್ತಿದ್ದು ಮುಂದುವರೆದ ಭಾಗವಾಗಿ ತಮ್ಮ ಸಮುದಾಯದ ಅಭಿವೃದ್ಧಿಗಾಗಿ ಶಿರಾ ನಗರದಲ್ಲಿ ನಿರ್ಮಾಣವಾಗಲಿರುವ ನೂತನ ಕುಂಚಿಟಿಗರ ಭವನ ನಿರ್ಮಾಣಕ್ಕೆ 1. ಕೋಟಿ ರೂಪಾಯಿ ದೇಣಿಗೆ ನೀಡುವುದಾಗಿ ಘೋಷಿಸಿದರು.
ಕಾರ್ಯಕ್ರಮದಲ್ಲಿ ಕುಂಚಿಟಿಗ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು. ತಾಲೂಕು ಕುಂಚಿಟಿಗ ಸಂಘದ ಅಧ್ಯಕ್ಷ ಮುಕುಂದಪ್ಪ, ಸೂಡಾ ಅಧ್ಯಕ್ಷ ಪಿ.ಆರ್. ಮಂಜುನಾಥ್, ಬೆಂಗಳೂರು ಮಹಾನಗರ ಪಾಲಿಗೆ ಆಯುಕ್ತ ರಾಜು, ಡಿಸಿಸಿ ಬ್ಯಾಂಕ್ ನಿರ್ದೇಶಕ ರವಿಕುಮಾರ್, ಗೃಹ ಸಚಿವರ ವಿಶೇಷ ಆಪ್ತ ಕಾರ್ಯದರ್ಶಿ ಡಾ. ನಾಗಣ್ಣ, ನಗರಸಭೆ ಸದಸ್ಯರಾದ ಆರ್.ರಾಮು, ಉಮಾ ವಿಜಯರಾಜ್, ಮುಖಂಡರಾದ ಆರ್.ರಾಘವೇಂದ್ರ, ಜೀನಿ ಸಂಸ್ಥಾಪಕ ದಿಲೀಪ್ ಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಆರ್. ಶಶಿಧರ್ ಗೌಡ, ಭೂವನಹಳ್ಳಿ ನರೇಶ್ ಗೌಡ, ಕುಂಚಿಟಿಗರ ಸಂಘದ ಶಿಕ್ಷಣ ಸಮಿತಿ ಅಧ್ಯಕ್ಷ ಎಂ.ರಂಗನಾಥ್, ಮದ್ದೇವಳ್ಳಿ ರಾಮಕೃಷ್ಣ, ಹಾಲಗುಂಡೇ ಗೌಡ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಧಾನ್ ನಾಗರಾಜಪ್ಪ, ರಾಧಾಕೃಷ್ಣ, ವಿಜಯರಾಜ್, ಎಸ್.ಮಹಲಿಂಗಪ್ಪ, ಡಿ.ಸಿ.ಅಶೋಕ್, ಬಿ.ಆರ್.ಧಮೇಂದ್ರ ಸೇರಿದಂತೆ ಹಲವರು ಹಾಜರಿದ್ದರು.
