ಗ್ರಾಮೀಣಭಾಗದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಉಚಿತ ಸಿಇಟಿ ನೀಟ್ ತರಬೇತಿ ಆಶಾಕಿರಣವಾಗಿದೆ.

Surya Pragathi Editor
2 Min Read


ಚಿಕ್ಕನಾಯಕನಹಳ್ಳ,:- ನಮ್ಮ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಕನಸನ್ನು ನನಸು ಮಾಡಲೆಂದೇ ನಮ್ಮ ಎಸ್. ಬಿ.ಚಾರಿಟಬಲ್ ಟ್ರಸ್ಟ್ವತಿಯಿಂದ ಉಚಿತ ಸಿಇಟಿ ಹಾಗೂ ನೀಟ್ ತರಬೇತಿಯನ್ನು ಕಳೆದ ಹಲವಾರು ವರ್ಷಗಳಿಂದ ತರಬೇತಿ ನೀಡುತ್ತಿದ್ದು ಇದರಿಂದ ಉನ್ನತ ವ್ಯಾಸಂಗಕ್ಕೆ ಅನುಕೂಲವಾಗಿದ್ದು ಅವರ ಭವಿಷ್ಯವನ್ನು ರೂಪಿಸಿಕೊಳ್ಳುತ್ತಿದ್ದಾರೆ ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು.
ಪಟ್ಟಣದ ಸರ್ಕಾರಿ ಸ್ವತಂತ್ರಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಗರಪ್ರದೇಶದ ಮಕ್ಕಳಿಗೆ ಅವಕಾಶಗಳಿರುತ್ತವೆ ಹಾಗು ಹಣದ ವ್ಯವಸ್ಥೆಯು ಇರುತ್ತದೆ ಅಂತಹವರು ಮಾತ್ರ ಸರ್ಕಾರಿ ಹಾಗು ಪ್ರತಿಷ್ಟಿತ ಕಾಲೇಜುಗಳಲ್ಲಿ ಸೀಟ್ ಪಡೆಯುತ್ತಿದ್ದರು ಇದರಿಂದ ನಮ್ಮ ಗ್ರಾಮೀಣ ಭಾಗದ ಮಕ್ಕಳಿಗೆ ತೊಂದರೆಯಾಗುತ್ತಿತ್ತು ಇದನ್ನು ಅರಿತು ಎಸ್.ಬಿ.ಚಾರಿಟಬಲ್ ಟ್ರಸ್ಟ್ ಮೂಲಕ ಗ್ರಾಮೀಣ ಭಾಗದ ಮಕ್ಕಳಿಗೆ ಸುಲಭವಾಗಿ ಕೈಗೆಟುಕದ ಸಿಇಟಿ ನೀಟ್ ತರಬೇತಿಯನ್ನು ಅತ್ಯುತ್ತಮ ಸಂಪನ್ಮೂಲ ವ್ಯಕ್ತಿಗಳಿಂದ ಉತ್ತಮ ಅದ್ಯಯನ ಪಠ್ಯ ಪುಸ್ತಕಗಳನ್ನು , ಪೂರಕ ಸಾಮಾಗ್ರಿಗಳನ್ನು ನೀಡುವ ಮೂಲಕ ತರಬೇತಿಯನ್ನು ನೀಡಲಾಗುತ್ತಿದೆ ಇದರಿಂದ ಕಳೆದ ಬಾರಿ ಸು. ೧೮೩ ವಿದ್ಯಾರ್ಥಿಗಳು ತರಬೇತಿಯನ್ನು ಪಡೆದಿದ್ದು ಅದರಲ್ಲಿ ೮೮ವಿದ್ಯಾರ್ಥಿಗಳು ಸರ್ಕಾರಿ ಹಾಗೂ ಪ್ರತಿಷ್ಠಿತ ಕಾಲೇಜುಗಳಲ್ಲಿ ಸೀಟುಗಳನ್ನು ಪಡೆಯುವ ಮೂಲಕ ಅವರ ತಂದೆತಾಯಿಯವರ ಓದಿನ ಹೊರೆಯನ್ನು ಕಡಿಮೆ ಮಾಡಿದ್ದಾರೆ. ಎಂದ ಅವರು ಸಿಇಟಿ ಪರೀಕ್ಷೆಯಲ್ಲಿ ಅತ್ಯುತ್ತಮ ರ‍್ಯಾಂಕ್‌ಗಳನ್ನು ಪಡೆದು ಸರ್ಕಾರಿ ಇಂಜನಿಯರಿAಗ್ ಕಾಲೇಜುಗಳು ಸೇರಿದಂತೆ ರಾಜ್ಯದ ಪ್ರತಿಷ್ಠಿತ ಮೊದಲ ೨೫ ಕಾಲೇಜುಗಳಲ್ಲಿ ೪೫ ವಿದ್ಯಾರ್ಥಿಗಳು ಇಂಜಿನಿಯರಿAಗ್ ಸಿಟುಗಳನ್ನು, ಬಿಎಸ್ಸಿ ನರ್ಸಿಂಗ್‌ಗೆ ೩೦ ವಿದ್ಯಾರ್ಥಿಗಳು, ಬಿ.ಎಸ್ಸಿ ಅಗ್ರಿಕಲ್ಚರ್‌ಗೆ ೩ ವಿದ್ಯಾರ್ಥಿಗಳು, ಬಿ ಫಾರ್ಮಸಿಗೆ ೭ಜನ ವಿದ್ಯಾರ್ಥಿಗಳು, ಬಿ.ಎಸ್ಸಿ ಅನಸ್ತೇಶಿಯ ೨ ವಿದ್ಯಾರ್ಥಿಗಳು, ಬಿಎಸ್ಸಿ ಎ.ಎಸ್.ಎಸ್.ಗೆ ೧ ವಿದ್ಯಾರ್ಥಿಗಳು ಸೀಟುಗಳನ್ನು ಪಡೆಯುವ ಮೂಲಕ ನಮ್ಮ ಆಶಯವನ್ನು ಈಡೇರಿಸಿದ್ದಾರೆ ಇವರೆಲ್ಲರಿಗೂ ಅವರ ಮುಂದಿನ ವಿದ್ಯಾಬ್ಯಾಸಕ್ಕೆ ಅನುಕೂಲವಾಗುವಂತಹ ಪೂರಕ ಅನುಕೂಲಗಳನ್ನು ಮಾಡಿಕೊಡಲಾಗುವುದು ಎಂದ ಅವರು ಕ್ಷೇತ್ರವನ್ನು ಶಿಕ್ಷಣದಿಂದ ಹಿಂದುಳಿದ ತಾಲ್ಲೂಕು ಎನ್ನುವ ಮಾತನ್ನು ಸುಳ್ಳಾಗಿಸುತ್ತಿದೆ ಅದೇ ರೀತಿ ಈ ಬಾರಿಯು ವಿಶೇಷವಾಗಿ ಪ್ರತಿ ಬಾನುವಾರವು ಸಿಇಟಿ ತರಬೇತಿ ನೀಡಲಾಗುತ್ತಿದ್ದು ಕಳೆದ ವರ್ಷದಂತೆಯು ಪರೀಕ್ಷೆ ಮುಗಿದ ಮೇಲೆ ಎಲ್ಲಾ ವಿದ್ಯಾರ್ಥಿಗಳಿಗೆ ಈ ತರಬೇತಿಯನ್ನು ನೀಡಲಾಗುವುದು ಎಂದರು.


ಜಿಲ್ಲೆಯ ಮಂತ್ರಿಗಳ ಹಿಂದೆ ಹೋಗುವಂತಹ ಜಿಲ್ಲಾಧಿಕಾರಿ ಹಾಗೂ ಜಿ.ಪಂ.ನ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ತಾಲ್ಲೂಕುಗಳತ್ತ ತಿರುಗಿ ನೋಡಿಲ್ಲ ಕ್ಷೇತ್ರದಲ್ಲಿ ೫ಸಾವಿರ ಮನೆಗಳಿಗೆ ಈಗಾಗಲೇ ಪಟ್ಟಿಸಿದ್ದಪಡಿಸಿ ಕಳುಹಿಸಿದರೂ ಅದರ ಬಗ್ಗೆ ಕ್ರಮ ಕೈಗೊಳ್ಳುವ ಕೆಲಸ ಮಾಡಿಲ್ಲ ಹಾಗೂ ಸುಸಜ್ಜಿತವಾದ ಎಲ್ಲಾ ವ್ಯವಸ್ಥೆಗಳನ್ನೊಳಗೊಂಡ ಮಾದರಿ ೧೦ಶಾಲೆಗಳನ್ನು ತಾಲ್ಲೂಕಿನಲ್ಲಿ ತೆರೆಯಲು ಸರ್ಕಾರ ಅದೇ಼ಶ ಮಾಡಿದ್ದರು ಅದಕ್ಕೆ ಸಂಬAದಿಸಿದAತೆ ಇನ್ನು ಯಾವುದೇ ಕ್ರಮವನ್ನು ಇಲ್ಲಿನ ಡಿಸಿ, ಸಿಇಒ ಮಾಡುತ್ತಿಲ್ಲ ಕೇವಲ ಮಂತ್ರಿಗಳ ಹಿಂದೆ ಓಡಾಡಿಕೊಂಡು ಇದ್ದಾರೆ ಅಷ್ಟೇ ಇನ್ನಾದರು ಗಣಬಾದಿತ ಪ್ರದೇಶಾಭಿವೃದ್ದಿ ಯೋಜನೆಯಲ್ಲಿ ನಮ್ಮ ಕ್ಷೇತ್ರದ ಕೆಲಸಗಳನ್ನು ಮಾಡಬೇಕು ಎಂದ ಅವರು ನಮ್ಮ ತಾಲ್ಲೂಕು ಸರ್ಕಾರಿ ಆಸ್ಪತ್ರೆ ಅಗತ್ಯವಿರುವಂತಹ ಸಿಟಿ ಸ್ಕಾö್ಯನ್ ಸೇರಿದಂತೆ ಹೊಸ ತಂತ್ರಜ್ಞಾನಗಳನ್ನು ಆಳವಡಿಸಲು ತಿಳಿಸಿದ್ದರೆ ನಮ್ಮ ಹಣದಲ್ಲಿ ತುಮಕೂರು ಜಿಲ್ಲಾ ಆಸ್ಪತ್ರೆಗೆ ಹಾಕಿದ್ದಾರೆ ಇದು ಯಾರನ್ನು ಮೆಚ್ಚಿಸಲಿಕ್ಕೆ ಎಂಬುದು ತಿಳಿದಿಲ್ಲ ಇನ್ನಾದರು ನಮ್ಮ ಗಣಿಭಾಗದ ಹಣವನ್ನು ಗಣಿಬಾದಿತ ಪ್ರದೇಶಗಳ ಅಭಿವೃದ್ದಿಗೆ ಬಳಸಬೇಕು ಎಂದರು.


ಈ ಸಂದರ್ಭದಲ್ಲಿ ಉಚಿತ ಸಿಇಟಿ ತರಬೇತಿ ಸಮಿತಿಯ ಅದ್ಯಕ್ಷ ನಿವೃತ್ತ ಶಿಕ್ಷಣಾಧಿಕಾರಿ ನಾಗೇಶ್, ಮಾಜಿ ಪುರಸಭಾದ್ಯಕ್ಷ ಎಂ.ಎನ .ಸುರೇಶ್, ಸವಿತಾ ಸಮಾಜದ ಅದ್ಯಕ್ಷ ಶಿವಣ್ಣ, ಈಡಿಗ ಸಮಾಜದ ಸೋಮಣ್ಣ, ಭೌದ್ದಸಮಾಜದ ಮುಖಂಡ ಸಾಕ್ಯಗೌತಮ್ ಸೇರಿದಂತೆ ಇತರರು ಇದ್ದರು.

Share this Article
Leave a comment