
ಚಿಕ್ಕನಾಯಕನಹಳ್ಳಿ;-ಪಕೃತಿಯ ಮಡಿಲಲ್ಲಿ ಅದರ ಬಗ್ಗೆ ಮೂಡಿದ ಅಲೋಚನೆಗಳೇ ಕವಿತೆಗಳಾಗಿ, ಕಾದಂಬರಿಯಾಗಿ ಬರೆದು ಕನ್ನಡ ಭಾಷೆಯನ್ನು ಶ್ರೀಮಂತಗೊಳಸಿದ ಕುವೆಂಪುರವರನ್ನು ನೆನಪು ಮಾಡಿಕೊಳ್ಳಬೇಕಾಗಿರುವುದು ನಮ್ಮ ಜವಾಬ್ದಾರಿ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು.
ಪಟ್ಟಣದ ತಾಲ್ಲೂಕು ಆಡಳಿತ ಸೌಧದಲ್ಲಿ ನಡೆದ ವಿಶ್ವಮಾನವ ಕುವೆಂಪು ರವರ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಕುಪ್ಪಳ್ಳಿ ವೆಂಕಟಪ್ಪನವರ ಮಗ ಪುಟ್ಟಪ್ಪ ಇವರ ಹುಟ್ಟುಹಬ್ಬವನ್ನು ನಾವು ವಿಶ್ವಮಾನವ ದಿನವನ್ನಾಗಿ ಆಚರಿಸುತ್ತಿದ್ದೆವೆ ಪಕೃತಿಯ ಮಡಿಲಲ್ಲೆ ಹುಟ್ಟಿ ಅದರಲ್ಲೇ ಬೆಳೆದು ಪಕೃತಿಯೊಡಲಿನಲ್ಲಿ ಮೂಡಿದ ಅಲೋಚನೆಗಳನ್ನು ತಮ್ಮ ಲೇಖನಿಯ ಮೂಲಕ ವಿವಿಧ ರೂಪಗಳಲ್ಲಿ ಕಟ್ಟಿಕೊಡುವ ಮೂಲಕ ಕನ್ನಡ ಭಾಷೆಗೆ ತನ್ನದೇ ಅದ ಕೊಡುಗೆ ನೀಡಿದವರು ಕುವೆಂಪುರವರು ಅವರನ್ನು ಸ್ಮರಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಎಂದರು.
ವಕ್ಕಲಿಗರ ಸಂಘದ ಅಧ್ಯಕ್ಷ ಹರೀಶ್ಮಾತನಾಡಿ ನಮ್ಮ ನಾಡಿಗೆ ಕುವೆಂಪುರವರು ದೇವರು ಕೊಟ್ಟ ವರವಾಗಿದ್ದಾರೆ ಅವರ ರಾಮಾಯಣ ದರ್ಶನಂ ಕೃತಿಗೆ ರಾಷ್ಟçದ ಸರ್ವಶ್ರೇಷ್ಠ ಜ್ಞಾನಪೀಠ ಪ್ರಶಸ್ತಿ ಲಬಿಸಿತ್ತು ಅದರಂತೆ ಅವರ ಮಲೆಗಳಲ್ಲಿ ಮದುಮಗಳು, ಕಾನೂರುಹೆಗ್ಗಡತಿ ಕಾದಂಬರಿಗಳು ಎಲ್ಲರ ಮನೆಮಾತಾಗಿವೆ ಅವರ ಜ್ಞಾನ ಬಂಡಾರದಿAದ ಅನೇಕ ಕಾದಂಬರಿಗಳು, ಕವಿತೆಗಳು ಮೂಡಿದ್ದು ಇಂದು ನಮ್ಮ ನಾಡಗೀತೆಯ ರಚನೆಯು ಇವರದ್ದೇ ಅಗಿದೆ ಇಂತಹ ಮಹಾನ್ ವ್ಯಕ್ತಿಯು ನಮ್ಮೊಂದಿಗೆ ಜೀವಂತವಾಗಿದ್ದಾರೆ ಎಂದರು.
ಗ್ಯಾರAಟಿ ಯೋಜನೆಗಳ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಮಾತನಾಡಿ ಮಹನೀಯರ ಜಯಂತಿಗಳನ್ನು ಒಂದು ಜಾತಿಗೆ ಸೀಮಿತ ಮಾಡುತ್ತಿರುವುದು ಸರಿಯಲ್ಲ ಅವರು ತಮ್ಮ ಲೇಖನಗಳ ಮೂಲಕ ಸಮಾಜದಲ್ಲಿನ ಕೇಲವು ಕೆಟ್ಟ ಪದ್ದತಿಗಳ ವಿರುದ್ದ ಬರೆದಿದ್ದಾರೆ ಗಾಂದೀವಾದªನ್ನು ಕುರಿತಂತೆ ಜಲಗಾರ ಎಂಬ ನಾಟಕದ ಮೂಲಕ ದಲಿತರ ಬಗ್ಗೆ ಬರೆದಿದ್ದಾರೆ ಎಂದ ಅವರು ೧೯೬೫ರಲ್ಲಿ ನಮಗೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟಕೀರ್ತಿ ಇವರದ್ದಾಗಿದೆ ಎಂದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶಿವರಾಜ್, ಮಾಜಿ ಪುರಸಭಾಸದಸ್ಯ ರೇಣುಕಮೂರ್ತಿ ಮತ್ತಿತರರು ಮಾತನಾಡಿದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಮಮತಾ, ಬಿಇಒ ಕಾಂತರಾಜು, ಸಮಾಜಕಲ್ಯಾಣ ಇಲಾಕೆ ಸಹಾಯಕ ನಿರ್ದೇಶಕ ಶ್ರೀಧರ್, ದಲಿತ ಸಂಘರ್ಷ ಸಮಿತಿ ಸಂಚಾಲಕ ಸಿ.ಎಸ್.ಲಿಂಗದೇವರು, ವಕ್ಕಲಿಗರ ಸಂಘದ ಉಪಾದ್ಯಕ್ಷ ಕೆ.ಜಿ.ಕೃಷ್ಣೇಗೌಡ ಸೇರಿದಂತೆ ಇತರರು ಇದ್ದರು.
