ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಹಂತದಲ್ಲಿ ಚಂಚಲ ಮನಸ್ಸಿನಿಂದ ಹೊರಬರಬಂದು ಉನ್ನತ ವ್ಯಾಸಂಗ ಮಾಡಿ ಸಮಾಜದ ಆಸ್ತಿಯಾಗಬೇಕು. – ಸಿವಿಲ್ ನ್ಯಾಯಾಧೀಶ ಕಿರಣ್.*

Surya Pragathi Editor
2 Min Read

ವರದಿ ಗುಬ್ಬಿ ಭರತ್

ಗುಬ್ಬಿ: ಆಧುನಿಕತೆ ಬೆಳೆದಂತೆ ಸಮಾಜದಲ್ಲಿ ವಿದ್ಯಾರ್ಥಿಗಳು ಅತಿಯಾದ ಮೊಬೈಲ್ ಬಳಕೆಯಿಂದಾಗಿ ತಮ್ಮ ಹದಿಹರೆಯದ ವಯಸ್ಸಿನಲ್ಲಿ ಚಂಚಲ ಮನಸ್ಸಿನಿಂದ ಹೊರ ಬಂದು ಉತ್ತಮ ವ್ಯಾಸಂಗ ಮಾಡಿ ಉನ್ನತ ಮಟ್ಟವನ್ನ ತಲುಪಬೇಕು ಎಂದು ಸಿವಿಲ್ ನ್ಯಾಯಾಧೀಶ ಕಿರಣ್ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ತಿಳಿಸಿದರು.
ಪಟ್ಟಣದ ಎಸ್ ಆರ್ ಎ ಪದವಿಪೂರ್ವ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ಅಬಕಾರಿ ಇಲಾಖೆ ಸಹಕಾರದೊಂದಿಗೆ ಆಯೋಜಿಸಲಾಗಿದ್ದ ಕಾನೂನು ಹರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ತಂತ್ರಜ್ಞಾನ ಬದಲಾದಂತೆ ಮನುಷ್ಯನು ಬದಲಾಗಬೇಕಾದುದು ಪ್ರಕೃತಿಯ ನಿಯಮ. ಆದರೆ ಉತ್ತಮ ಗುಣಗಳನ್ನ ಕಡೆಗಣಿಸಿ ಕೆಟ್ಟ ದುಷ್ಟಗಳಿಗೆ ಮಾರುಹೋಗುವುದು ತಪ್ಪು ವಿದ್ಯಾರ್ಥಿಗಳು ಉತ್ತಮ ನಡವಳಿಕೆಯನ್ನು ಅಳವಡಿಸಿಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಅಬಕಾರಿ ನಿರೀಕ್ಷಕ ಶೇಕ್ ಇಮ್ರಾನ್ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಯೌವ್ವನದ ವಯಸ್ಸಿನಲ್ಲಿ ಮಧ್ಯ ಧೂಮಪಾನ ತಂಬಾಕುಗಳಂತೆ ಸೇವನೆಯ ದುಶ್ಚಟಗಳಿಗೆ ಬಲಿಯಾಗದೆ ತಮ್ಮ ಭವಿಷ್ಯವನ್ನು ಉತ್ತಮ ವಿದ್ಯಾಭ್ಯಾಸದಿಂದ ಪಡೆದುಕೊಳ್ಳಬೇಕು ಇದರಿಂದ ನಾವು ಸಮಾಜಕ್ಕೆ ಕೊಡುಗೆಯನ್ನ ನೀಡುವುದಕ್ಕೆ ಸಾಧ್ಯವಾಗುತ್ತದೆ ಇದರಿಂದ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂದರು.

ಕಾಲೇಜು ಪ್ರಾಂಶುಪಾಲ ಸಿ.ಜಿ ಸತೀಶ್ ಮಾತನಾಡಿ ಸಾಮಾನ್ಯವಾಗಿ ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳು ಬಡ ಹಾಗೂ ಮಾಧ್ಯಮ ವರ್ಗಕ್ಕೆ ಸೇರಿದವರಾಗಿರುತ್ತಾರೆ. ಪೋಷಕರು ತಮ್ಮ ಮಕ್ಕಳು ವಿದ್ಯಾಭ್ಯಾಸ ಮುಗಿಸಿ ಉನ್ನತ ಹುದ್ದೆಯನ್ನು ಏರಬೇಕು ಎಂಬ ಕನಸಿನೊಂದಿಗೆ ಹಲವು ಸವಾಲುಗಳನ್ನು ಹೆದರಿಸಿಕೊಂಡು ತಮ್ಮ ಮಕ್ಕಳಿಗೆ ಸಹಕಾರ ನೀಡುತ್ತಿರುತ್ತಾರೆ . ಈ ಸ್ಥಿತಿಯನ್ನು ಅರಿತುಕೊಂಡು ಮಕ್ಕಳು ತಮ್ಮ ಗಮನವನ್ನು ವಿದ್ಯಾಭ್ಯಾಸದ ಕಡೆಗೆ ನೀಡುತ್ತಾ ಸಮಾಜದ ಆಸ್ತಿಯಾಗಬೇಕು ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಎಸ್ ಆರ್ ಎ ಕಾಲೇಜು ಸಂಸ್ಥಾಪಕ ಹಾಗೂ ಕಾರ್ಯದರ್ಶಿ ಎನ್. ಮೂರ್ತಿ, ವಕೀಲರ ಸಂಘದ ಅಧ್ಯಕ್ಷ ಮೋಹನ್ ಎಂಪಿ,ಉಪಾಧ್ಯಕ್ಷ ರವೀಂದ್ರ ಪ್ರಧಾನ ಕಾರ್ಯದರ್ಶಿ ರವೀಶ್, ಪುಷ್ಪವತಿ ಸಹಾಯಕ ಸರ್ಕಾರಿ ಅಭಿಯೋಜಕ ಶೋಭಾ ಕೆ, ಅಬಕಾರಿ ಇಲಾಖೆ ಉಪನಿರೀಕ್ಷಕರು ಜನಾರ್ದನ ಪೂಜಾರಿ, ಡೊಂಗ್ರಿ ಸಾಬ ಮುಜಾವರ ಸಿಬ್ಬಂದಿ ಕಾಲೇಜು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Share this Article
Leave a comment