ಕಾಕರಾಮನಹಳ್ಳಿ ಗ್ರಾಮದಲ್ಲಿ ಪಶು ಆರೋಗ್ಯ ಶಿಬಿರ ಯಶಸ್ವಿ
ರಾಮನಗರ: ತಾಲೂಕಿನ ಬಿಡದಿ ಹೋಬಳಿ ಕಾಕರಮಾನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಸಮಗ್ರ ಪಶು ಆರೋಗ್ಯ ಶಿಬಿರವು ಯಶಸ್ವಿಯಾಗಿ ನೆರವೇರಿತು. ಗ್ರಾಮಸ್ಥರು ಉತ್ಸಾಹದಿಂದ ಶಿಬಿರದಲ್ಲಿ ಭಾಗವಹಿಸಿ ತಮ್ಮ ಪಶುಗಳನ್ನು ಪರೀಕ್ಷೆಗೆ ಒಳಪಡಿಸಿದರು.
ಕಾಕರಾಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಸಹಭಾಗಿತ್ವದಲ್ಲಿ ಡೇರಿ ಆವರಣದಲ್ಲಿ ಆಯೋಜಿಸಿದ್ದ ಶಿಬಿರದ ನೇತೃತ್ವವಹಿಸಿದ್ದ ಪಶುವೈದ್ಯಕೀಯ ಇಲಾಖೆಯ ಸಿಇಒ(ಆಡಳಿತ) ಡಾ.ನಜೀರ್ ಅಹಮದ್ ಅವರು ಮಾತನಾಡಿ, ಗ್ರಾಮೀಣ ಪಶು ಆರೋಗ್ಯವನ್ನು ಬಲಪಡಿಸುವುದು, ರೋಗ ನಿರೋಧಕ ಕ್ರಮಗಳನ್ನು ಉತ್ತೇಜಿಸುವುದು ಹಾಗೂ ವೈಜ್ಞಾನಿಕ ಪಶುಪಾಲನಾ ಪದ್ಧತಿಗಳ ಬಗ್ಗೆ ಜಾಗೃತಿ ಮೂಡಿಸುವುದು ಶಿಬಿರದ ಪ್ರಮುಖ ಉದ್ದೇಶವಾಗಿದೆ. ಇದಕ್ಕೆ ಸ್ಥಳೀಯ ರೈತರ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ ಎಂದರು.
ಗ್ರಾಮೀಣ ಭಾಗದಲ್ಲಿ ಇಂತಹ ಶಿಬಿರಗಳು ಅತ್ಯಂತ ಪ್ರಯೋಜನಕಾರಿಯಾಗಿವೆ. ರಾಸುಗಳಲ್ಲಿನ ರೋಗಗಳನ್ನು ತ್ವರಿತವಾಗಿ ಪತ್ತೆಹಚ್ಚಲು, ಉತ್ಪಾದಕತೆ ಹೆಚ್ಚಿಸಲು ಮತ್ತು ಪಶುಗಳ ಆರೋಗ್ಯವನ್ನು ಕಾಪಾಡಲು ಉಪಯುಕ್ತವೆಂದು ಅಭಿಪ್ರಾಯಪಟ್ಟರು. ಈ ಕಾರ್ಯಕ್ರಮವು ಗ್ರಾಮೀಣ ಜನರ ಆರ್ಥಿಕತೆಯನ್ನು ಬೆಂಬಲಿಸುವ ಜತೆಗೆ ರಾಸುಗಳ ಆರೋಗ್ಯ ಸೇವೆಗಳನ್ನು ಮತ್ತಷ್ಟು ಬಲಪಡಿಸಲು ಪಶುವೈದ್ಯಕೀಯ ಇಲಾಖೆ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದರು.

ಶಿಬಿರದಲ್ಲಿ 20 ಕರುಗಳನ್ನು ಒಳಗೊಂಡAತೆ 95ಕ್ಕೂ ಹೆಚ್ಚು ರಾಸುಗಳಿಗೆ ತಪಾಸಣೆ ನಡೆಸಿ ಚಿಕಿತ್ಸೆ ನೀಡಲಾಯಿತು.
ಡಾ.ನಾಗೇಶ್, ಸಿವಿಒ, ವಿ.ಡಿ. ಭೈರಮಂಗಲ, ಡಾ.ನಂದೀಶಕುಮಾರ್, ಎಸ್ವಿಒ, ವಿ.ಡಿ.ಕೊಡಿಯಾಲ ಕರೇನಹಳ್ಳಿ, ಡಾ.ಸಂತೋಷ್, ಎಸ್ವಿಒ, ವಿ.ಎಚ್. ಬಿಡದಿ ಹಾಗೂ ಡಾ.ಮಹದೇವ ಲಮಾಣಿ, ಸಿವಿಒ, ವಿ.ಡಿ.ಗಾಣಕಲ್ ಸಮರ್ಪಿತ ಪಶುವೈದ್ಯಕೀಯ ತಜ್ಞರ ತಂಡವು ರಾಸುಗಳಿಗೆ ಗುಣಮಟ್ಟದ ಪಶುವೈದ್ಯಕೀಯ ಸೇವೆ ಒದಗಿಸುವ ಜತೆಗೆ ರೈತರಿಗೆ ಉತ್ತಮ ಸಲಹೆಗಳನ್ನು ಕೊಟ್ಟರು.
ಶಿಬಿರದ ಯಶಸ್ವಿ ನಿರ್ವಹಣೆಗೆ ಹಿರಿಯ ಪಶುವೈದ್ಯಕೀಯ ಪರಿವೀಕ್ಷಕ ಬೆಟ್ಟೇಗೌಡ ಪಿವಿಸಿ ಬಾನಂದೂರು, ನಂಜೇಗೌಡ, ಜೆವಿಎಲ್ಐ ಪಿವಿಸಿ ಬನ್ನಿಕುಪ್ಪೆ(ಬಿ), ಕಾಕರಾಮನಹಳ್ಳಿ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಲೋಕೇಶ್ಗೌಡ, ಎಐ ಕಾರ್ಯಕರ್ತೆರಾದ ಶರತ್, ತುಳಸಿರಾಮ್, ಡಿ ಗ್ರೂಪ್ ವಿ.ಡಿ.ಗಾಣಕಲ್ ಹಾಗೂ ಶೋಭಾ, ಡಿ ಗ್ರೂಪ್, ಇಟ್ಟಮಡು ಅವರು ಮಹತ್ವದ ಸಹಕಾರ ನೀಡಿದರು.
