ಪತ್ರಿಕೆ ವಿತರಣೆ ಮಾಡುತ್ತಿದ್ದ ಸಹೋದರರು ಇಂದು ವೈದ್ಯರಾಗಿ ಬಡ ವಿದ್ಯಾರ್ಥಿಗಳಿಗೆ ಮಾದರಿ.

ಶಿರಾ : ನಗರದಲ್ಲಿ ಪತ್ರಿಕೆ ವಿತರಣೆ ಮಾಡಿಕೊಂಡು ಪಿಯು ವರೆಗೂ ಓದು ಮುಗಿಸಿ ಕರೊನಾ ಸಂಕಷ್ಟದ ನಡುವೆಯೂ ಉನ್ನತ ವ್ಯಾಸಂಗಕ್ಕಾಗಿ ಶಿಕ್ಷಣ ಸಾಲ ಪಡೆದು ರಷ್ಯಾ ದೇಶದಲ್ಲಿ ವೈದ್ಯಕಿಯ ಕೋರ್ಸ್ (ಎಂಬಿಬಿಎಸ್ ) ಪೂರ್ಣಗೊಳಿಸಿದ್ದ ನಗರದ ವಿಜಯವಾಣಿ ವರದಿಗಾರರು ಹಾಗೂ ಟೌನ್ ಕೋ–ಆಪರೇಟಿವ್ ಬ್ಯಾಂಕ್ ನಿರ್ದೇಶಕರಾದ ಜೈಪಾಲ್ ಅವರ ಮಕ್ಕಳಾದ ಡಾ.ಭಾರ್ಗವ್ ಹಾಗೂ ಡಾ.ಭರತ್, 6ನೇ ತರಗತಿಯಿಂದ ದ್ವಿತಿಯ ಪಿಯುಸಿವರೆಗೆ ತಂದೆ ಜೈಪಾಲ್ ಜೊತೆ ವಿಜಯವಾಣಿ ಪತ್ರಿಕೆ ವಿತರಣೆ ಕಾರ್ಯದಲ್ಲು ಕೈಜೋಡಿಸಿದ್ದರು. ಅವಳಿ ಮಕ್ಕಳ ವೈದ್ಯರಾಗಬೇಕೆಂಬ ಕನಸಿಗೆ ಪೋಷಕರು ಶೈಕ್ಷಣಿಕ ಸಾಲ ಪಡೆದು ರಷ್ಯಾದಲ್ಲಿ ಮಕ್ಕಳನ್ನು ಓದಿಸಿದ್ದರು. ಇದೀಗ ಭಾರತದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಲು ಅರ್ಹತಾ (ಎಫ್ಎಂಜಿಇ) ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಸಹೋದರರಿಬ್ಬರು ರಾಷ್ಟ್ರದಲ್ಲಿ ವೈದ್ಯಕೀಯ ಸೇವೆ ಸಲ್ಲಿಸುವ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ತಮ್ಮ ಈ ಸಾಧನೆಯ ಮೂಲಕ ಅವರು ಪೋಷಕರ ಕನಸನ್ನು ನನಸುಮಾಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಇವರ ಯಶಸ್ಸು ಕುಟುಂಬದ ಜೊತೆಗೆ ಸಿರಾ ನಗರಕ್ಕೂ ಹೆಮ್ಮೆ ತಂದಿದೆ.
