Surya Pragathi Editor

ಬಿ.ವೈ.ವಿಜಯೇಂದ್ರ ಅಭಿಮಾನಿಗಳ ಪಾದಯಾತ್ರೆ

ಮಲೆ ಮಹದೇಶ್ವರ ಸ್ವಾಮಿ ಬೆಟ್ಟಕ್ಕೆ ಪಾದಯಾತ್ರೆ | ರಾಜಕೀಯ ಉನ್ನತ ಸ್ಥಾನಮಾನಕ್ಕೆ ಹರಕೆ

ರಾಮನಗರ: ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಅವರಿಗೆ ರಾಜಕೀಯದಲ್ಲಿ ಉನ್ನತ ಸ್ಥಾನ ದೊರಕಲಿ ಹಾಗೂ ಭವಿಷ್ಯದಲ್ಲಿ ಶುಭವಾಗಲಿ ಎಂದು ಮಲೆ ಮಹದೇಶ್ವರ ಸ್ವಾಮಿ ಬೆಟ್ಟಕ್ಕೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಮುಖಂಡ ವರದರಾಜು(ಬಾಬು) ತಿಳಿಸಿದರು.

ನಗರದಲ್ಲಿ ಸೋಮವಾರ ರಾಮನಗರದಲ್ಲಿ ಬಿ.ವೈ.ವಿಜಯೇಂದ್ರ ಅಭಿಮಾನಿಗಳ ಪಡೆಯೊಂದಿಗೆ ಪಾದಯಾತ್ರೆಯಲ್ಲಿ ಅವರು ಭಾಗಿಯಾದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ಅಭಿಮಾನಿ ಬಳಗದ ವತಿಯಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಮಹಾಶಿವರಾತ್ರಿಯ ಹಬ್ಬದ ಪ್ರಯುಕ್ತ ಸೋಂಪುರ ಗ್ರಾಮದಲ್ಲಿ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಸತತ 08 ದಿನಗಳ ಕಾಲ ಮಾದಪ್ಪನ ಬೆಟ್ಟಕ್ಕೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಈ ಪಾದಯಾತ್ರೆಯೂ ಪಕ್ಷದ ಕಾರ್ಯಕ್ರಮವಲ್ಲ. ಸಂಪೂರ್ಣವಾಗಿ ವಿಜಯೇಂದ್ರ ಯಡಿಯೂರಪ್ಪ ಅವರ ಅಭಿಮಾನಿಗಳು ಇದನ್ನು ಹಮ್ಮಿಕೊಂಡಿದ್ದಾರೆ. ಅವರಿಗೆ ರಾಜಕೀಯದಲ್ಲಿ ಉನ್ನತ ಸ್ಥಾನ ದೊರಕಲಿ, ಅವರು ರಾಜ್ಯದ ಜನತೆಯ ಸೇವೆ ಮಾಡುವಂತೆ ಆಗಲಿ ಎಂಬುದು ಈ ಪಾದಯಾತ್ರೆಯ ಮುಖ್ಯ ಉದ್ದೇಶವಾಗಿದೆ ಎಂದರು.

ಪಾದಯಾತ್ರೆ ಭಾನುವಾರ ರಾಮನಗರ ಜಿಲ್ಲೆಯನ್ನು ಪ್ರವೇಶಿಸಿತ್ತು. ಹಾಗಾಗಿ ಅಭಿಮಾನಿಗಳು ಎಲ್ಲರೂ ಸೇರಿ ಪಾದಯಾತ್ರಿಗಳಿಗೆ ಉತ್ತಮ ಸತ್ಕಾರ ನೀಡಿದ್ದೇವೆ. 500ರಿಂದ 1ಸಾವಿರ ಮಂದಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದು, ನಿತ್ಯ ಹೆಜ್ಜೆ ಹಾಕಲಿದ್ದಾರೆ. ಮಹದೇಶ್ವರ ಸ್ವಾಮಿ ಬೆಟ್ಟದಲ್ಲಿ ಕೊನೆಯ ದಿನ 10ಸಾವಿರಕ್ಕೂ ಹೆಚ್ಚಿನ ಮಂದಿ ಹಾಜರಿರಲಿದ್ದಾರೆ ಎಂದು ಮಾಹಿತಿ ನೀಡಿದರು.

ಪಾದಯಾತ್ರೆ ನಡೆಯಲಿರುವ ಪ್ರತಿ ತಾಲೂಕಿನಿಂದ ಜನತೆ ಹೆಜ್ಜೆ ಹಾಕಲಿದ್ದಾರೆ. ಚನ್ನಟ್ಟಣ ಮದ್ದೂರು, ಮಳವಳ್ಳಿ, ಕೊಳ್ಳೇಗಾಲ. ಹನೂರು ಮಾರ್ಗವಾಗಿ ಯಾತ್ರೆಯು ಬೆಟ್ಟ ತಲುಪಲಿದೆ. ಕೊನೆಯ ದಿನದಲ್ಲಿ ದೇವರಿಗೆ ವಿಶೇಷ ಪೂಜೆ ಏರ್ಪಡಿಸಿದ್ದೇವೆ. ಕೊನೆಯ ದಿನದಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಅವರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ತಿಳಿಸಿದರು.

- Advertisement -
Ad imageAd image
- Advertisement -
Ad imageAd image

ಈ ವೇಳೆ ಮುಖಂಡರಾದ ಎಸ್.ಆರ್.ನಾಗರಾಜು, ಪ್ರಕಾಶ್ ಬಸವನಪುರ, ಡಿ.ಕೆ.ಶಿವಕುಮಾರ್, ಮಹೇಶ್, ಎಚ್.ಎನ್.ದೀಪಕ್, ಭರತ್, ಸಿದ್ದರಾಜು, ರಮೇಶ್, ಅನಿಲ್, ಹರಿಸಂದ್ರ ಶಿವಕುಮಾರ್, ಬಿಜೆಪಿ ಮಂಜು, ಸಂಜಯ್ ಪದಂ, ದೇವಿಕ ಸೇರಿದಂತೆ ಹಲವರು ಇದ್ದರು.

ಕೋಟ್

ಇದು ಯಾವುದೇ ಪಕ್ಷದ ಕಾರ್ಯಕ್ರಮವಲ್ಲ. ಪಕ್ಷವನ್ನು ಹೊರತು ಪಡಿಸಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಇದರ ಸಂಪೂರ್ಣ ಜವಾಬ್ದಾರಿ ವಿಜಯೇಂದ್ರ ಯಡಿಯೂರಪ್ಪ ಅವರ ಅಭಿಮಾನಿಗಳು ನಿಭಾಯಿಸುತ್ತಿದ್ದಾರೆ.

- Advertisement -
Ad imageAd image

-ವರದರಾಜು ಬಾಬು, ಬಿಜೆಪಿ ಮುಖಂಡ

Share this Article
Leave a comment