ಸೂರ್ಯಪ್ರಗತಿನ್ಯೂಸ್.ಕಾಂ
ತುಮಕೂರು; ಒಂದೇ ಸೂರಿನಲ್ಲಿ ಮಹಿಳೆಯರಿಗೆ ಪ್ರಿಯವಾಗುವ ವಿವಿಧ ರೀತಿಯ ಆಭರಣಗಳನ್ನು ಖರೀದಿಸಲು ಸುಗಮವಾಗುವಂತೆ ನಾಡಿನ ಪ್ರತಿಷ್ಠಿತ ಜುವೆಲರಿ ಅಂಗಡಿಗಳ ವಿವಿಧ ರೀತಿಯ ಆಭರಣಗಳನ್ನು ಪ್ರದರ್ಶನಕ್ಕೆ ಇಡಲಾಗಿದ್ದು ಮಹಿಳೆಯರು ಇವರ ಸದುಪಯೋಗವನ್ನು ಪಡಿಸಿಕೊಳ್ಳಬೇಕು ಎಂದು ಚಿತ್ರನಟಿ ಸೋನಾಲ್ ಮೊತೇಂರೋ ಅವರು ತಿಳಿಸಿದರು..

ನಗರದ ಹೊರವಲಯದ ಗುಬ್ಬಿ ರಸ್ತೆಯ ಬಂಡಿಮನೆ ವಿವಾಹ ಕಲ್ಯಾಣ ಮಂಟಪದಲ್ಲಿ ಮೂರು ದಿನಗಳ ಕಾಲ ವಿವಿಧ ವಿವಿಧ ಜ್ಯುವೆಲರಿ ಮಳಿಗೆಗಳಿಂದ ಆವರಣ ಪ್ರದರ್ಶನ ಮತ್ತು ಮಾರಾಟ ಮಲ್ಲಿಗೆಗಳನ್ನು ಉದ್ಘಾಟಿಸಿದ ಅವರು ಸರ್ಕಾರದಿಂದ ಮಾನ್ಯತೆ ಪಡೆದ ಪ್ರತಿಷ್ಠಿತ ಸರ್ಟಿಫೈ ಜುವೆಲರಿಗಳ ಆಭರಣಗಳು ಎಲ್ಲರ ಗಮನ ಸೆಳೆಯುತ್ತಿದ್ದು ಯುವತಿಯರಿಗೆ ಕಡಿಮೆ ತೂಕದ ಸುಂದರ ವಿನ್ಯಾಸವುಳ್ಳ ಹೊಸ ಆಭರಣಗಳು ಇಲ್ಲಿ ಲಭ್ಯವಿದ್ದು
ತುಮಕೂರಿನಲ್ಲಿ ನಡೆದ ಈ ಆಭರಣ ಮೇಳಕ್ಕೆ ನಾನು ಹೆಮ್ಮೆಯಿಂದ ಬಂದು ಉದ್ಘಾಟಿಸಿದ್ದೇನೆ ಕಲ್ಪತರು ನಾಡಿನ ಜನರು ಇದರ ಉಪಯೋಗ ಪಡೆದುಕೊಳ್ಳ ಬೇಕು ಎಂದರು.
ಇದೇ ಸಂದರ್ಭದಲ್ಲಿ ತುಮಕೂರಿನ ವಿವಿಧ ಮಹಿಳಾ ಸಂಘಟನೆಗಳ ಮುಖಂಡರುಗಳು ಹಾಗೂ ಸಾರ್ವಜನಿಕರು ಆಭರಣ ಮಳಿಗೆಗೆ ಭೇಟಿ ನೀಡಿ ಖರಿದಿಗೆ ಮುಂದಾದರು.

ತುಮಕೂರು ನಗರದ ಬಂಡಿಮನೆ ಕಲ್ಯಾಣ ಮಂಟಪದಲ್ಲಿ ಜ್ಯುವೆಲರಿ ಷೋ” ಪ್ರದರ್ಶನ ಮತ್ತು ಮಾರಾಟದ ಉತ್ಸವದ ಉದ್ಘಾಟನೆಯನ್ನು ಚಲನಚಿತ್ರ ನಟಿ ಸೋನಾಲ್ ಮೊಂಥೆರೋ ನೆರವೇರಿಸಿದರು. ಡಾ. ಪ್ರತಿಭಾ ರಂಗೇಗೌಡ, ಐಶ್ವರ್ಯ ಸುರೇಶ್ ಗೌಡ, ಪ್ರಿಯಾ ಪ್ರದೀಪ್, ಆಶಾ ಪ್ರಸನ್ನಕುಮಾರ್, ಟಿ.ಆರ್.ಅನಸೂಯ, ಲೀಲಾವತಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಅರ್ಜುನ ವರ, ಗಜರಾಜ್, ಸಿಂಹ ಜ್ಯುವೆರ್ಸ್, ಶ್ರೀ ಗಣೇಶ್ ಡೈಮೆಂಡ್ಸ್, ಶ್ರೀ ಲಕ್ಷಿö್ಮÃ ಡೈಮೆಂಡ್ಸ್, ವಿವಾಂತ್, ನಿರ್ಮಲ್ ಜ್ಯುವೆಲರ್ಸ, ಸಪ್ತೋಷಿ, ಟ್ರೆöÊ ಡೈಯಾ, ರೂಪಂ ಸಿಲ್ವರ್, ಎಮ್ಮಡಿ ಸಿಲ್ವರ್, ಸ್ರಸ್ಟ, ನಿತ್ಯಾಸ್(ವಿಶಾಖಪಟ್ಟಣಂ), ಬಾಲಾಜಿ ಪಲ್ರö್ರ್ಸ(ಚೆನೈ) ಭಾಗವಹಿಸುತ್ತಿರುವ ಆಭರಣ ಮಳಿಗೆಗಳು. ತುಮಕೂರಿನಿಂದ ಶ್ರೀ ಮಹಾಲಕ್ಮಿ ಜ್ಯುವೆರ್ಸ್ ಭಾಗವಹಿಸುತ್ತಿರುವ ಆಭರಣ ಮಳಿಗೆಗಳು ಪಾಲ್ಗೊಂಡಿದ್ದರು.
