ಪೊಲೀಸರಿಗೆ ನಿದ್ದೆಗೆಡಿಸಿದ್ದ ಕನಿಕಲಬಂಡೆ ನಕ್ಸಲ್ ವೆಂಕಟೇಶ್ ಕೊನೆಗೂ ಅರೆಸ್ಟ್

Surya Pragathi Editor

 

ಪಾವಗಡ:

 

ಪಾವಗಡ:ಕಳೆದ ಹಲವು ತಿಂಗಳಿಂದ ಪಾವಗಡ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದ, ನಕ್ಸಲ್ ಹೆಸರಿನಲ್ಲಿ ಗ್ರಾಮಸ್ಥರಿಗೆ ಬೆದರಿಕೆ ಹಾಕುತ್ತಿದ್ದ ಕನಿಕಲಬಂಡೆಯ ಕುಖ್ಯಾತ ಉಪ್ಪಾರ ವೆಂಕಟೇಶ್ ಅಲಿಯಾಸ್ ಜೂಡೋ ನಕ್ಸಲ್ ವೆಂಕಟೇಶ್ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಪಾವಗಡ ಪಟ್ಟಣದ ಸಮೀಪದ ಕಡಮಲಕುಂಟೆ ಬೆಟ್ಟದ ಬಳಿ ಇಂದು ಸಂಜೆ ನಡೆದ ಕಾರ್ಯಾಚರಣೆಯಲ್ಲಿ ಆತನನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಾರ್ಯಾಚರಣೆಯಲ್ಲಿ ಭಾಗಿ:
ಅಡಿಷನಲ್ ಎಸ್.ಪಿ. ಗೋಪಾಲಯ್ಯ ಅವರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಮಂಜುನಾಥ್ ನೇತೃತ್ವದಲ್ಲಿ ಪಾವಗಡ ಇನ್ಸ್‌ಪೆಕ್ಟರ್ ಸುರೇಶ್, ಗ್ರಾಮಾಂತರ ಇನ್ಸ್‌ಪೆಕ್ಟರ್ ಕೊಟ್ರೇಶ್, ಸಬ್ ಇನ್ಸ್‌ಪೆಕ್ಟರ್ ಸುನಿಲ್ ಮತ್ತು ತಂಡ ಕಾರ್ಯಾಚರಣೆ ನಡೆಸಿದೆ.

ಆರೋಪಿ ವೆಂಕಟೇಶ್ ಕಳೆದ ಕೆಲ ತಿಂಗಳಿನಿಂದ ಕನಿಕಲಬಂಡೆ ಗ್ರಾಮದಲ್ಲಿ ದೌರ್ಜನ್ಯ, ಬೆದರಿಕೆ ಹಾಕುತ್ತಿದ್ದಲ್ಲದೆ, ಪೊಲೀಸರು ಗ್ರಾಮಕ್ಕೆ ಹೋದಾಗ ಬೆಟ್ಟದ ಮೇಲೆ ನಾಡಬಾಂಬ್ ಸ್ಫೋಟಿಸಿ ಪರಾರಿಯಾಗಿದ್ದ. ಆ.29 ರಂದು ರೈತ ಕರಿಯಣ್ಣ ಅವರ ಪಂಪ್‌ಸೆಟ್‌ಗೆ ನಾಡಬಾಂಬ್ ಇಟ್ಟು ಹತ್ಯೆಗೆ ಯತ್ನಿಸಿದ್ದ. ಇತ್ತೀಚೆಗೆ ಗಂಗಸಾಗರ ರೈತನಿಗೆ ಪೀಪಲ್ಸ್ ವಾರ್ ದಳಂ ಹೆಸರಿನಲ್ಲಿ 5 ಲಕ್ಷಕ್ಕೆ ಬೇಡಿಕೆ ಪತ್ರ ಅಂಟಿಸಿದ್ದು ಕೂಡ ಇವನೇ ಇರಬಹುದು ಎಂದು ಶಂಕಿಸಲಾಗಿತ್ತು.

ಈತನ ಬಂಧನದಿಂದ ಗಡಿ ಭಾಗದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಆರೋಪಿಯನ್ನು ವಿಚಾರಣೆ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

- Advertisement -
Ad imageAd image
- Advertisement -
Ad imageAd image

Share this Article
Leave a comment